ಬುಧಾದಿತ್ಯ ರಾಜಯೋಗದಿಂದಾಗಿ ಈ 3 ರಾಶಿಯವರಿಗೆ 2025ರಲ್ಲಿ ಅದೃಷ್ಟವೋ ಅದೃಷ್ಟ! ಹಣದ ಸಮಸ್ಯೆಗೆ ಮುಕ್ತಿ | Horoscope 2025

Horoscope 2025
Published on

Horoscope 2025 : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ದಿನಾಂಕ, ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ನಾವಿಂದು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದೇವೆ. 2024 ಮುಗಿದು 2025ರ ಹೊಸ ವರ್ಷ ಆರಂಭವಾಗಿದೆ. ಈ ಹೊಸ ವರ್ಷದಲ್ಲಾದರೂ ನಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನ ಅಥವಾ ಗ್ರಹಗಳ ಸ್ಥಾನ ಬದಲಾವಣೆಯಿಂದ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

2025ರಲ್ಲಿ ಬುಧನು ಧನುಸ್ಸು ರಾಶಿ ಹಾಗೂ ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ. ಈ ರಾಜಯೋಗವು ಕೆಲವು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸುವರ್ಣಯುಗವನ್ನು ಪ್ರಾರಂಭಿಸಲಿದೆ. ಬುಧಾದಿತ್ಯ ರಾಜಯೋಗದಿಂದ ಯಾವ ರಾಶಿಚಕ್ರದ ಚಿಹ್ನೆಗಳು ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯ ಅಡಿಯಲ್ಲಿ ಜನಿಸಿದವರಿಗೆ, 2025ರಲ್ಲಿ ರೂಪುಗೊಳ್ಳುವ ಬುಧಾದಿತ್ಯ ರಾಜಯೋಗವು ಜೀವನದಲ್ಲಿ ವಿವಿಧ ಧನಾತ್ಮಕ ಪ್ರಯೋಜನಗಳನ್ನು ತರುತ್ತದೆ. ಅವರ ವೃತ್ತಿ ಜೀವನದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಹಣಕಾಸಿನ ವಿಷಯದಲ್ಲಿ ಈ ಹಿಂದೆ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಹೊಸ ಆದಾಯಕ್ಕೆ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಈ ರಾಶಿಯವರಿಗೆ ವಿದೇಶಿ ಉದ್ಯೋಗ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು ಲಭ್ಯವಾಗುತ್ತವೆ.

ಮಿಥುನ ರಾಶಿ

ಬುಧಾದಿತ್ಯ ರಾಜಯೋಗವು ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಅಪಾರ ಲಾಭವನ್ನು ತರುತ್ತದೆ. ವೃತ್ತಿಪರ ರಂಗದಲ್ಲಿ ಅವರಿಗೆ ಸೂಕ್ತ ಮನ್ನಣೆ ದೊರೆಯಲಿದೆ. ಈ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ವಿವಿಧ ಮಂಗಳಕರ ಘಟನೆಗಳು ಸಂಭವಿಸುತ್ತವೆ. ಕುಟುಂಬದ ಸಮೃದ್ಧಿ ಹೆಚ್ಚಾಗುತ್ತದೆ. ವರ್ಷವಿಡೀ ಆದಾಯ ಉತ್ತಮವಾಗಿರಲಿದೆ. ಒಟ್ಟಿನಲ್ಲಿ ರಾಜಮನೆತನದ ಜೀವನ ನಡೆಸಲಿದ್ದಾರೆ.

ತುಲಾ ರಾಶಿ

ಬುಧಾದಿತ್ಯ ರಾಜಯೋಗವು ತುಲಾ ರಾಶಿಯಲ್ಲಿ ಜನಿಸಿದವರಿಗೆ ಸಮೃದ್ಧ ಜೀವನವನ್ನು ನೀಡಲಿದೆ. ಬುಧ ಮತ್ತು ಸೂರ್ಯನ ಆಶೀರ್ವಾದದಿಂದ ಅವರ ದೀರ್ಘಕಾಲದ ಆರ್ಥಿಕ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಅವರು ಸಂಪತ್ತು ಮತ್ತು ಸಮೃದ್ಧಿಯಿಂದ ತುಂಬಿದ ರಾಜ ಜೀವನವನ್ನು ಹೊಂದಿರುತ್ತಾರೆ. ವೃತ್ತಿಯಲ್ಲಿ ಉನ್ನತಿ ಮತ್ತು ವೇತನ ಹೆಚ್ಚಳಕ್ಕೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಲಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net