More

    ಈ ರಾಶಿಯವರು ಇಂದು ಬಾಳಸಂಗಾತಿ ಜತೆ ವ್ಯವಧಾನದಿಂದ ನಡೆದುಕೊಳ್ಳಿ: ನಿತ್ಯಭವಿಷ್ಯ

    ಮೇಷ: ಮಗಳಿಗೆ ಮದುವೆ ನಿಶ್ಚಯವಾಗಿ ಮನೆಯಲ್ಲಿ ಸಡಗರ. ಸಾಮಾಜಿಕ ಮನ್ನಣೆ ಸಿಗಲಿದೆ. ಕಚೇರಿಯಲ್ಲಿ ವಿಶೇಷ ದಿನ. ಶುಭಸಂಖ್ಯೆ: 8

    ವೃಷಭ: ಕಲಾವಿದರಿಗೆ ವಿನೂತನ ಅವಕಾಶ. ಉದ್ಯೋಗದಲ್ಲಿ ವಿಶೇಷ ಲಾಭ. ಬಂಧುಗಳ ಭೇಟಿ. ದಿನಾಂತ್ಯಕ್ಕೆ ಶುಭವಾರ್ತೆ. ಶುಭಸಂಖ್ಯೆ: 7

    ಮಿಥುನ: ಆತ್ಮಾವಲೋಕನ ಮಾಡಿಕೊಳ್ಳಿ. ಮುಂದೆ ಎದುರಾಗುವ ಪರಿಸ್ಥಿತಿ ನಿಭಾಯಿಸಬಹುದು. ಸೌಹಾರ್ದದಿಂದ ವರ್ತಿಸಿ. ಶುಭಸಂಖ್ಯೆ: 3

    ಕಟಕ: ಕೃಷಿಕರಿಗೆ ವಿಶೇಷ ಲಾಭವಿದೆ. ಮೋಸ ಹೋಗುವ ಸಾಧ್ಯತೆಗಳಿವೆ, ಹುಷಾರಾಗಿರಿ. ವಿಶೇಷ ಅತಿಥಿಯ ಆಗಮನ. ಶುಭಸಂಖ್ಯೆ: 7.

    ಸಿಂಹ: ಅನೇಕ ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸ್ವಲ್ಪ ಚೇತರಿಕೆ. ಹಿತಮಿತ ಆಹಾರ ಸೇವಿಸಿ. ತಂದೆ- ತಾಯಿಯ ಸಲಹೆ ಪಡೆಯಿರಿ. ಶುಭಸಂಖ್ಯೆ:1

    ಕನ್ಯಾ: ಯೋಚನೆ ಸಾಕಾರಗೊಳ್ಳಲು ಇಷ್ಟ ದೇವರನ್ನು ಪ್ರಾರ್ಥಿಸಿ. ಗಾಯಕರಿಗೆ ವಿಶೇಷ ಅವಕಾಶ. ಸ್ನೇಹಿತರಿಂದ ಅವಮಾನ. ಶುಭಸಂಖ್ಯೆ: 6

    ತುಲಾ: ಕೆಲವು ನಿರ್ಧಾರ ತೆಗೆದುಕೊಳ್ಳುವಲ್ಲಿ ದ್ವಂದ್ವ ಎದುರಾಗಬಹುದು. ಕುಟುಂಬದ ಸಲಹೆ ಪಡೆಯಿರಿ ಸಂಜೆ ಭೋಜನ. ಶುಭಸಂಖ್ಯೆ: 4

    ವೃಶ್ಚಿಕ: ಬಾಳಸಂಗಾತಿಯೊಂದಿಗೆ ವ್ಯವಧಾನದಿಂದ ನಡೆದುಕೊಳ್ಳಿ. ವಾಹನ ಖರೀದಿಗೆ ನಿರ್ಧಾರ. ಮಕ್ಕಳ ಬಗ್ಗೆ ವಿಶೇಷ ಗಮನವಿರಲಿ. ಶುಭಸಂಖ್ಯೆ: 5

    ಧನುಸ್ಸು: ಭೂವಿವಾದಕ್ಕೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ. ಮಾತಿನಿಂದ ಶತ್ರುಗಳು ಸೃಷ್ಟಿ. ಕುಟುಂಬದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 4

    ಮಕರ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ. ವೃತ್ತಿಜೀವನದಲ್ಲಿ ಬಡ್ತಿ ಸಿಗಬಹುದು. ತಾಯಿಯ ಆಶೀರ್ವಾದ ಪಡೆದುಕೊಳ್ಳಿ. ಶುಭಸಂಖ್ಯೆ: 7

    ಕುಂಭ: ವಿವಾಹ ಅಪೇಕ್ಷಿಗಳಿಗೆ ವಿವಾಹ ಸಿದ್ಧ. ತಂದೆ ತಾಯಿಯ ಮಾತನ್ನು ಧಿಕ್ಕರಿಸಬೇಡಿ. ಖರೀದಿಯಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 8

    ಮೀನ: ವಂಚಕರು ಮೋಸ ಮಾಡುತ್ತಾರೆ ಜೋಕೆ. ಯಾವುದೇ ವಿಷಯದಲ್ಲಿ ದುಡುಕಬೇಡಿ. ಆಕಸ್ಮಿಕ ಧನಲಾಭವಾಗಲಿದೆ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts