12ರಂದು ಅದ್ಯಪಾಡಿಗೆ ಹೊರೆಕಾಣಿಕೆ ಮೆರವಣಿಗೆ

Gur_Horekanike
Published on

ಗುರುಪುರ: ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಮಾ.9ರಿಂದ 25ರವರೆಗೆ ನಡೆಯಲಿರುವ ಬ್ರಹ್ಮಕಲಶಕ್ಕೆ ಮಾ.12ರಂದು ಬಜ್ಪೆಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಸಾಗಿ ಬರಲಿದೆ.

ಬಜ್ಪೆಯ ಶಾರದಾ ಶಕ್ತಿ ಮಂಟಪದಲ್ಲಿ ಮಧ್ಯಾಹ್ನ 3ಕ್ಕೆ ಹೊರೆಕಾಣಿಕೆ ಮೆರವಣಿಗೆ ಉದ್ಘಾಟನೆಗೊಳ್ಳಲಿದೆ. ಸಂಜೆ 5.30ಕ್ಕೆ ಹೊರೆಕಾಣಿಕೆ ಮೆರವಣಿಗೆ ಶ್ರೀ ಆದಿನಾಥೇಶ್ವರ ದೇವಸ್ಥಾನ ತಲುಪಿದೆ. ಕಾವೂರು, ಮರವೂರು, ಕೆಂಜಾರು, ಪೊರ್ಕೋಡಿ, ಬಜ್ಪೆ, ಕಟೀಲು, ಎಕ್ಕಾರು, ಪೆರ್ಮುದೆ ಭಾಗದ ಹೊರೆಕಾಣಿಕೆ ವಾಹನ ಮತ್ತು ಭಕ್ತರು ಮಧ್ಯಾಹ್ನ 3ಕ್ಕೆ ಬಜ್ಪೆಗೆ ತಲುಪಲಿದ್ದಾರೆ. ಬಜ್ಪೆಯಿಂದ ಸುಂಕದಕಟ್ಟೆ, ಕಿನ್ನಿಕಂಬಳ ಮೂಲಕ ಕೈಕಂಬದ ಶ್ರೀ ಧೂಮಾವತಿ ದ್ವಾರಕ್ಕೆ ಮೆರವಣಿಗೆ ಸಾಗಿ ಬರಲಿದೆ. ಆ ಹೊತ್ತಿಗೆ ಮೂಡುಬಿದಿರೆ, ಎಡಪದವು, ಕುಪ್ಪೆಪದವು, ಮುಚ್ಚೂರು, ಮುತ್ತೂರು ಗಂಜಿಮಠ, ಮಳಲಿ ಹಾಗೂ ಪಡುಶೆಡ್ಡೆ, ಮೂಡುಶೆಡ್ಡೆ, ವಾಮಂಜೂರು ತಿರುವೈಲು, ಪೆರ್ಮಂಕಿ, ಉಳಾಯಿಬೆಟ್ಟು, ಗುರುಪುರ ಪ್ರದೇಶದ ಹೊರೆಕಾಣಿಕೆ ವಾಹನಗಳು ಕೈಕಂಬ ತಲುಪಲಿವೆ. ಅಲ್ಲಿಂದ ಹೊರೆಕಾಣಿಕೆಯ ಎಲ್ಲ ವಾಹನಗಳು ಮೂಡುಕರೆಕಟ್ಟೆ, ಬೈಲುಬೀಡು, ಬೀಬಿಲಚ್ಚಿಲ್ ಮೂಲಕ ಶ್ರೀ ಕ್ಷೇತ್ರಕ್ಕೆ ಸಾಗಲಿವೆ. ಹೊರೆಕಾಣಿಕೆಯಲ್ಲಿ ನೂರಾರು ವಾಹನಗಳು, ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net