

ಬೈಂದೂರು: ಬೈಂದೂರು ತಾಲೂಕು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಧ್ವನಿವರ್ಧಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು. 80 ವರ್ಷ ಪೂರೈಸಿದ ಹಿರಿಯ ಸದಸ್ಯರಾದ ಡಾ.ಸೂರ್ಯನಾರಾಯಣ ಆಚಾರ್, ಮೋಹನ್ ಭಟ್, ಪರಮೇಶ್ವರ ಗಾಣಿಗ, ಡಿ.ಶೇಷಗಿರಿ, ಬಿ.ನಾಗಯ್ಯ ಶೇರೆಗಾರ್, ಎಸ್.ಜನಾರ್ದನ ಅವರನ್ನು ಗೌರವಿಸಿದರು. ರಾಜ್ಯ ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಐ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಸ್.ಜನಾರ್ದನ, ಉಪಾಧ್ಯಕ್ಷ ಮಂಜು ದೇವಾಡಿಗ, ಕಾರ್ಯದರ್ಶಿ ಗೋವಿಂದ ಬಿಲ್ಲವ, ಸದಸ್ಯರಾದ ವಾಸುದೇವ ಎಚ್.ನಾಯಕ್, ಗಿರೀಶ್ ಶ್ಯಾನುಭಾಗ್, ಭಾಸ್ಕರ ಪ್ರಭು, ರಾಜಾರಾಮ ಭಟ್, ರಾಮ ಶೇರೆಗಾರ್ ಉಪಸ್ಥಿತರಿದ್ದರು.