ಯಕ್ಷ ಬಳಗ ಟ್ರಸ್ಟ್‌ನಿಂದ ಶ್ಲಾಘನೀಯ ಸೇವೆ : ಡಾ.ತಲ್ಲೂರು ಶಿವರಾಮ ಶೆಟ್ಟಿ ಅಭಿಮತ

Published on

ಗುರುಪುರ: ಹತ್ತು ವರ್ಷದಿಂದ ಯಕ್ಷಗಾನ ಸೇವೆ ನಡೆಸುತ್ತ ಬಂದಿರುವ ಯಕ್ಷ ಅಭಿಮಾನಿ ಬಳಗ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಸುರತ್ಕಲ್‌ನ ವಿದ್ಯಾದಾಯಿನಿ ಶಾಲಾ ಸಭಾಭವನದಲ್ಲಿ ಸುರತ್ಕಲ್ ಯಕ್ಷ ಅಭಿಮಾನಿ ಬಳಗ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಟ್ರಸ್ಟ್ ದಶಮ ಸಂವತ್ಸರ ಸಂಭ್ರಮದಂಗವಾಗಿ ‘ಶುಭಂ ಕರೋತಿ ಕಲ್ಯಾಣಂ’ ಯಕ್ಷಗಾನ ಪ್ರದರ್ಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ, ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಯಕ್ಷ ಕಲಾವಿದ ರಮೇಶ್ ಭಟ್ ಬಾಯಾರು, ಪ್ರಸಂಗಕರ್ತ ಮಾಧವ ಭಂಡಾರಿ ಕುಳಾಯಿ, ನೇಪತ್ಯ ಕಲಾವಿದ ಮನೋಜ್ ಕುಮಾರ್ ಕಿನ್ನಿಗೋಳಿ ಅವರನ್ನು ಸನ್ಮಾನಿಸಲಾಯಿತು.

ವೆಂಕಟರಮಣ ಆಸ್ರಣ್ಣ ಶುಭಾಸಂಶನೆಗೈದರು. ಉದ್ಯಮಿ ರವೀಂದ್ರ ಶೇಟ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉದ್ಯಮಿ ಅಗರಿ ರಾಘವೇಂದ್ರ ರಾವ್, ಹಿಂದು ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್, ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ್ ಕುಳಾಯಿ, ವಕೀಲ ಮಹಾಬಲ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಲಾವಿದೆ ಪೂರ್ಣಿಮಾ ವೈ.ರೈ, ಟ್ರಸ್ಟ್ ಅಧ್ಯಕ್ಷೆ ವಿದ್ಯಾ ಎಸ್.ಭಟ್, ಕಾರ್ಯದರ್ಶಿ ಪ್ರಶಾಂತ ಶಾಸ್ತ್ರಿ, ಕೋಶಾಧಿಕಾರಿ ಡಾ.ಅನಂತಮೂರ್ತಿ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ರಸಾದ್ ಕಾಟಿಪಳ್ಳ, ಟ್ರಸ್ಟ್ ಸದಸ್ಯರು ಮತ್ತಿತರರು ಇದ್ದರು. ವಾದಿರಾಜ ಕಲ್ಲೂರಾಯ ಅಭಿನಂದನಾ ಮಾತನಾಡಿದರು. ಅಭಿನೇತ್ರಿ ರಾವ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net