

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-2026ರ ಸ್ಪರ್ಧೆಗಳ ಅಂಗವಾಗಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಬುಧವಾರ ನಡೆಯಿತು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಂಶುಪಾಲ ಶರಣಕುಮಾರ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳಲ್ಲಿ ಕಬಡ್ಡಿ ಆಟ ಯೋಗಕ್ಕೆ ಸಂಬಂಧಿಸಿದ ಆಟ. ಇಲ್ಲಿ ಉಸಿರಾಟದ ಮೇಲೆ ಹಿಡಿತವಿರಬೇಕು. ತಂಡದ ಪ್ರತಿಯೊಬ್ಬರ ಪ್ರಾಮಾಣಿಕ ಪ್ರಯತ್ನ ಬೇಕು. ಏಕಾಗ್ರತೆಯನ್ನೂ ಬೆಳೆಸುತ್ತದೆ. ಸ್ಪರ್ಧೆ ಎಂದರೆ ಸೋಲು ಗೆಲುವು ಇದ್ದೇ ಇರುವುದು. ಸ್ಪರ್ಧೆಗಳಲ್ಲಿ ಪ್ರಾಮಾಣಿಕವಾಗಿ ಆಡುವುದೇ ಮುಖ್ಯ ಎಂದು ಹೇಳಿದರು. ನಿರ್ಣಾಯಕರಾಗಿ ಉಮೇಶ ನಾಯ್ಕ, ಅರುಣ ನಾಯ್ಕ, ಸೀತಾರಾಮ್, ದಿವಾಕರ, ಸುಧಾಕರ ಶೆಟ್ಟಿ ಭಾಗವಹಿಸಿದ್ದರು. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ವಲಯ ಮಟ್ಟದ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ತನುಶ್ರೀ ನಿರೂಪಿಸಿದರು. ಅನನ್ಯಾ ಸ್ವಾಗತಿಸಿದರು. ಕೃಷವ್ ವಂದಿಸಿದರು.
ಹದಿನಾಲ್ಕು ವರ್ಷದೊಳಗಿನ ವಯೋಮಿತಿಯ ಹುಡುಗರ ವಿಭಾಗದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ (ಪ್ರಥಮ), ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ (ದ್ವಿತೀಯ), ಶಾರದಾ ವಸತಿ ಶಾಲೆ ಕುಂಜಿಬೆಟ್ಟು ಉಡುಪಿ (ತೃತೀಯ) ಸ್ಥಾನ ಗಳಿಸಿದರು. ಹುಡುಗಿಯರ ವಿಭಾಗದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ (ಪ್ರಥಮ), ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ (ದ್ವಿತೀಯ), ಶಾರದಾ ವಸತಿ ಶಾಲೆ ಕುಂಜಿಬೆಟ್ಟು ಉಡುಪಿ (ತೃತೀಯ) ಬಹುಮಾನ ಗಳಿಸಿತು. 17 ವರ್ಷದೊಳಗಿನ ವಯೋಮಿತಿಯ ಹುಡುಗರ ವಿಭಾಗದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ (ಪ್ರಥಮ), ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ (ದ್ವಿತೀಯ), ಶಾರದಾ ವಸತಿ ಶಾಲೆ ಕುಂಜಿಬೆಟ್ಟು ಉಡುಪಿ (ತೃತೀಯ) ಹಾಗೂ ಹುಡುಗಿಯರ ವಿಭಾಗದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ (ಪ್ರಥಮ), ಶಾರದಾ ವಸತಿಶಾಲೆ ಕುಂಜಿಬೆಟ್ಟು ಉಡುಪಿ (ದ್ವಿತೀಯ) ಹಾಗೂ ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ (ತೃತೀಯ) ಬಹುಮಾನ ಗಳಿಸಿತು.