ಮೇಕಿಂಗ್ ಮೂಲಕವೇ ಗಮನ ಸೆಳೆಯುತ್ತಿದೆ ‘ಹೊಂದಿಸಿ ಬರೆಯಿರಿ’

Ecut2DAUcAEoKHl
Published on

ಬೆಂಗಳೂರು: ತಾರಾಗಣದ ಮೂಲಕವೇ ಗಮನ ಸೆಳೆದಿರುವ ‘ಹೊಂದಿಸಿ ಬರೆಯಿರಿ’ ತಂಡ, ಇದೀಗ ಬಹುದಿನಗಳ ಬಳಿಕ ಪ್ರೇಕ್ಷಕರೆದುರು ಬಂದಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಇಡೀ ತಂಡ ಕಳೆದ ನಾಲ್ಕು ತಿಂಗಳಿಂದ ಎಲ್ಲ ಕೆಲಸಗಳನ್ನು ಬದಿಗೊತ್ತಿ ಕ್ವಾರಂಟೈನ್ ಆಗಿದ್ದರು. ಇದೀಗ ಸಿನಿಮಾ ಸಂಬಂಧಿ ಕೆಲಸಗಳು ಸಡಿಲವಾದ ಹಿನ್ನೆಲೆಯಲ್ಲಿ ಚಿತ್ರದ ಪುಟಾಣಿ ಪ್ರೀ ಪ್ರೊಡಕ್ಷನ್​ ಟೀಸರ್ ಹೆಸರಿನ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ ಚಿತ್ರತಂಡ.

ಹೌದು, ಇಲ್ಲಿಯವರೆಗೂ ಸಿನಿಮಾ ಸಂಬಂಧಿ ಟೀಸರ್​ಗಳನ್ನು ಸಿನಿಮಾ ತಂಡಗಳು ಬಿಡುಗಡೆ ಮಾಡುತ್ತಿದ್ದವು. ಇದೀಗ ಪ್ರಿ ಪ್ರೊಡಕ್ಷನ್​ ವೇಳೆಯ ದೃಶ್ಯಗಳನ್ನು ಟೀಸರ್​ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಆರ್​. ರಾಮೇನಹಳ್ಳಿ ಜಗನ್ನಾಥ್​.

ಬಹುತಾರಾಗಣದ ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಪ್ರವೀಣ್​ ತೇಜ, ನವೀನ್​ ಶಂಕರ್​, ಶ್ರೀ ಮಹದೇವ್, ಅನಿರುದ್ಧ ಆಚಾರ್ಯ, ಭಾವನಾ ರಾವ್​, ಸಂಯುಕ್ತಾ ಹೊರನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್​, ಸೆಸ್ಸಿಲ್ಲಾ ಪಾತ್ರವರ್ಗದಲ್ಲಿದ್ದಾರೆ.

ಸಂಡೇ ಸಿನಿಮಾಸ್​ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಶಾಂತಿ ಸಾಗರ್​ ಕ್ಯಾಮರಾಮನ್​, ಜೋ ಕಾಸ್ಟ್ ಸಂಗೀತ, ಮಾಸ್ತಿ ಪ್ರಶಾಂತ್​ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಕೆ. ಕಲ್ಯಾಣ್​, ಹೃದಯಶಿವ, ರಾಮೇನಹಳ್ಳಿ ಜಗನ್ನಾಥ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net