More

  ಹೋಂಸ್ಟೇಗಳಿಗಿಲ್ಲ ಅಂಕುಶ!; ಎಗ್ಗಿಲ್ಲದೆ ನಡೆಯುತ್ತಿದೆ ರೇವ್ ಪಾರ್ಟಿ, ಗಾಂಜಾ ಪೂರೈಕೆ, ಮದ್ಯ ಸೇವನೆ

  ನವೀನ್ ಬಿಲ್ಗುಣಿ ಶಿವಮೊಗ್ಗ
  ರಾಜ್ಯಾದ್ಯಂತ ಎಗ್ಗಿಲ್ಲದೆ ತಲೆ ಎತ್ತುತ್ತಿರುವ ಅನಧಿಕೃತ ಹೋಮ್ ಸ್ಟೇಗಳು ಕಾನೂನುಬಾಹಿರ ಚಟುವಟಿಕೆಗಳ ಅಡ್ಡೆಗಳಾಗಿ ಪರಿಣಮಿಸಿವೆ. ರಾಜ್ಯದಲ್ಲಿರುವ 10 ಸಾವಿರಕ್ಕೂ ಅಧಿಕ ಹೋಮ್ ಸ್ಟೇಗಳಲ್ಲಿ ಶೇ. 20 ಹೋಮ್ ಸ್ಟೇಗಳು ಮಾತ್ರ ಅಗತ್ಯ ಪರವಾನಗಿ ಹೊಂದಿವೆ. ಉಳಿ

  ದೆಲ್ಲವೂ ಲಂಗುಲ ಗಾಮಿಲ್ಲದೆ ಪ್ರವಾ ಸಿಗರಿಂದ ಹಣ ಪೀಕುತ್ತ, ರೇವ್ ಪಾರ್ಟಿ ಅಡ್ಡೆಗಳಾಗಿ ಮಾರ್ಪಟ್ಟಿವೆ. ಗಾಂಜಾ, ಮದ್ಯ ಸೇವನೆ ಹಾಗೂ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ.

  ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ಪಶ್ಚಿಮಘಟ್ಟಗಳಿಗೆ ಸೀಮಿತವಾಗಿದ್ದ ಹೋಮ್ ಸ್ಟೇಗಳು ಇದೀಗ ರಾಜ್ಯಾದ್ಯಂತ ವ್ಯಾಪಿಸಿವೆ. ಯಾವುದೇ ಅನುಮತಿ ಪಡೆಯದೆ ಆಯಾ ಜಿಲ್ಲೆಗಳ ಪ್ರಮುಖ ಪ್ರವಾಸಿ ತಾಣಗಳ ಸಮೀಪವೇ ಕಾರ್ಯನಿರ್ವಹಿಸುತ್ತಿವೆ. ಅಕ್ರಮಗಳ ಮಾಹಿತಿ ಇದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

  ಗಡುವಿಗೂ ಜಗ್ಗದ ಮಾಲೀಕರು: ಜಿಲ್ಲಾ ವ್ಯಾಪ್ತಿಯಲ್ಲಿರುವ ಹೋಮ್ ಸ್ಟೇಗಳಿಗೆ ಪ್ರಸಕ್ತ ವರ್ಷದ ಆಗಸ್ಟ್ ಅಂತ್ಯದ ಒಳಗೆ ಪರವಾನಗಿ ಪಡೆದುಕೊಳ್ಳಲು ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿತ್ತು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು. ಆದರೆ, ಬೆರಳೆಣಿಕೆಯಷ್ಟು ಹೋಮ್ ಸ್ಟೇಗಳು ಮಾತ್ರ ಪರವಾ ನಗಿ ಪಡೆದಿವೆ. ಇನ್ನೂ ಸಾವಿರಾರು ಹೋಮ್ ಸ್ಟೇಗಳು ಅನಧಿಕೃತ ವಾಗಿಯೇ ನಡೆಯುತ್ತಿವೆ. ಗಡುವು ಮೀರಿದ ಯಾವುದೇ ಅನಧಿಕೃತ ಹೋಮ್ ಸ್ಟೇಗಳಿಗೆ ಬೀಗ ಬಿದ್ದಿಲ್ಲ.

  ಕ್ರಮ ಜರುಗಿಸಿಲ್ಲ: ಹೋಮ್ ಸ್ಟೇಗಳ ನೋಂದಣಿಗೆ ಪೊಲೀಸ್ ಠಾಣೆ ಹಾಗೂ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದು ಪ್ರವಾಸೋದ್ಯಮ ಇಲಾಖೆಯಿಂದ ಆನ್​ಲೈನ್ ತಂತ್ರಾಂಶದಲ್ಲಿ ನೋಂದಾಯಿಸಿ ಅನುಮತಿ ಪಡೆಯುವುದು ಕಡ್ಡಾಯ. ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಬಹುದು.

  ರೆಸ್ಟೋರೆಂಟ್​ಗಳಾಗಿ ಪರಿವರ್ತನೆ: ಹೋಮ್ ಸ್ಟೇಗಳು ಹಳ್ಳಿ ಹಾಗೂ ಪಟ್ಟಣ ವಾಸಿಗಳ ಮಧುರಬಾಂಧವ್ಯ ಬೆಸೆಯಲು ಸರ್ಕಾರವೇ ಆರಂಭಿಸಿದ ಯೋಜನೆ. ರಾಜ್ಯದ ಪ್ರವಾಸೋದ್ಯಮದ ಅತಿಥಿ ಅಥವಾ ಕೇಂದ್ರ ಸರ್ಕಾರದ ಇನ್​ಕ್ರೆಡಿಬಲ್ ಇಂಡಿಯಾ ಪೋರ್ಟಲ್ ಮೂಲಕ ಪರವಾನಗಿ ಪಡೆಯುವುದು ಕಡ್ಡಾಯ. ಮೊದಲು 5 ಬೆಡ್ ರೂಂಗೆ ಅವಕಾಶ ಈಗ 5+1ಗೇರಿದೆ. ನಿಯಮಕ್ಕಿಂತ ಬೆಡ್ ಹೆಚ್ಚಿದ್ದರೆ ಅದನ್ನು ರೆಸಾರ್ಟ್, ಲಾಡ್ಜ್ ಅಥವಾ ಹೋಟೆಲ್ ಎಂದು ಪರಿಗಣಿಸಬೇಕಿದೆ. ಬಹುತೇಕ ಹೋಮ್ ಸ್ಟೇಗಳು ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಬಾರ್ ಆಂಡ್ ರೆಸ್ಟೋರೆಂಟ್ ಆಗಿ ಮಾರ್ಪಾಡಾಗಿವೆ.

  ಹೋಂಸ್ಟೇಗಳಿಗಿಲ್ಲ ಅಂಕುಶ!; ಎಗ್ಗಿಲ್ಲದೆ ನಡೆಯುತ್ತಿದೆ ರೇವ್ ಪಾರ್ಟಿ, ಗಾಂಜಾ ಪೂರೈಕೆ, ಮದ್ಯ ಸೇವನೆ

  ಬೆಂಗಳೂರಲ್ಲೂ ದಂಧೆ: ರಾಜಧಾನಿ ಬೆಂಗಳೂರು ನಗರ ಗಡಿ ಭಾಗ ಮತ್ತು ಹೊರವಲಯದಲ್ಲಿ ಅಕ್ರಮ ಹೋಮ್ ಸ್ಟೇ, ರೆಸಾರ್ಟ್, ಸರ್ವೀಸ್ ಅಪಾರ್ಟ್​ವೆುಂಟ್ ಸೋಗಿನಲ್ಲಿ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ನಗರದ ಗಡಿಭಾಗ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಪಬ್, ಬಾರ್ ಆಂಡ್ ರೆಸ್ಟೋರೆಂಟ್, ಕೆಫೆ, ಕಾಫಿ ಬಾರ್, ರೆಸಾರ್ಟ್ ಮತ್ತು ಹುಕ್ಕಾ ಬಾರ್​ಗಳು ಅಕ್ರಮ ಚಟುವಟಿಕೆ ತಾಣವಾಗಿವೆ. ಬಹುತೇಕ ಕಡೆಗಳಲ್ಲಿ ಗ್ರಾಹಕರಿಗೆ ಅಕ್ರಮವಾಗಿ ಮಾದಕ ವಸ್ತು ಮತ್ತು ಮದ್ಯ ಪೂರೈಕೆ ಹೆಚ್ಚಾಗಿದೆ. ಡ್ರಗ್ಸ್ ಮತ್ತು ಹುಕ್ಕಾ ಸೇವನೆ ಉದ್ದೇಶಕ್ಕೆ ಯುವಕ, ಯುವತಿಯರಿಗೆ ಆಕರ್ಷಣೆ ಸ್ಥಳವಾಗುತ್ತಿವೆ.

  ಪ್ರಭಾವಿಗಳ ಕಾರುಬಾರು: ರಾಜ್ಯಾದ್ಯಂತ ಇರುವ 10 ಸಾವಿರಕ್ಕೂ ಅಧಿಕ ಹೋಂ ಸ್ಟೇಗಳಲ್ಲಿ ಶೇ.70 ಪ್ರಭಾವಿಗಳದ್ದೇ ಆಗಿವೆ. ರಾಜಕಾರಣಿಗಳು, ಉದ್ಯಮಿಗಳು ಹೋಮ್ ಸ್ಟೇಗಳ ಮೂಲಕ ಹಣ ಸಂಪಾದಿಸುವ ದಾರಿ ಕಂಡುಕೊಂಡಿದ್ದಾರೆ. ಜಾಗವನ್ನು ಲೀಸ್ ಅಥವಾ ಬಾಡಿಗೆಗೆ ಪಡೆದು ಹೋಮ್ ಸ್ಟೇ ಆರಂಭಿಸಿರುವ ಕೆಲವರು ಪರವಾನಗಿ ಪಡೆಯದೆ ಸರ್ಕಾರದ ಮೇಲೆ ಪ್ರಭಾವ ಬೀರಿ ಹಲವು ವರ್ಷಗಳಿಂದ ಕಳ್ಳಾಟ ನಡೆಸುತ್ತಿದ್ದಾರೆ. ಹಲವೆಡೆ ದೊಡ್ಡಮಟ್ಟದ ಪಾರ್ಟಿಗಳಲ್ಲಿ ಮದ್ಯ, ಗಾಂಜಾ ಪೂರೈಕೆ ಆಗುತ್ತಿದೆ.

  ನಿಯಂತ್ರಣ ಹೇಗೆ?

  • ಸರ್ವೆ ನಡೆಸಿ ಕಾನೂನು ವ್ಯವಸ್ಥೆಯೊಳಗೆ ತರುವುದು

  ಸ್ಥಳೀಯರು ನಿರ್ವಿುಸಿದ್ದರೆ ದಂಡ ವಿಧಿಸಿ ಸಕ್ರಮಗೊಳಿಸುವುದು

  ಹೊರಗಿನವರು ನಿರ್ವಿುಸಿಕೊಂಡಿದ್ದರೆ ತೆರವುಗೊಳಿಸುವುದು

  ಗ್ರೇಡ್​ಗೆ ತಕ್ಕಂತೆ ವಾರ್ಷಿಕ ಪರವಾನಗಿ ಶುಲ್ಕ ವಿಧಿಸುವುದು

  ನಿಯಮಬದ್ಧವಾಗಿ ಇಲಾಖೆಯಿಂದ ಪರವಾನಗಿ ಕೊಡುವುದು

  ಏನೆಲ್ಲ ಕಡ್ಡಾಯ?

  ಪೊಲೀಸ್ ಇಲಾಖೆ, ಸ್ಥಳೀಯ ಗ್ರಾಪಂನ ಎನ್​ಒಸಿ ಬೇಕು

  ಮಾಲೀಕರ ವಾಸ ದೃಢೀಕರಣ ಅಥವಾ ಜಮೀನಿನ ದಾಖಲೆ ಬೇಕು

  ಕನಿಷ್ಠ 3 ಕೊಠಡಿ, ಗರಿಷ್ಠ 6 ಕೊಠಡಿವರೆಗೆ ಮಾತ್ರ ಪರವಾನಗಿ

  ಇನ್​ಕ್ರೆಡಿಬಲ್ ಇಂಡಿಯಾ ಪೋರ್ಟಲ್ ಮೂಲಕ ನೋಂದಣಿ

  ಹೇಗೆಲ್ಲ ಅಕ್ರಮ?

  ಆರಕ್ಕಿಂತ ಹೆಚ್ಚು ಕೊಠಡಿಗಳು ನಿರ್ಮಾಣ

  ಸ್ಥಳೀಯರಿಗಿಂತ ಹೊರಗಿ ನವರೇ ಹೆಚ್ಚಾಗಿ ಸ್ಥಾಪನೆ

  ಪರಿಸರ ಮತ್ತು ಜಲ ಮೂಲಗಳಿಗೆ ಹಾನಿ

  ಕಾನೂನುಬಾಹಿರ ಚಟುವಟಿಕೆಗೆ ಅವಕಾಶ

  ಆಗಸ್ಟ್ 31ರವರೆಗೆ ಪರವಾನಗಿ ಪಡೆಯಲು ಗಡುವು ನೀಡಲಾಗಿತ್ತು. ಆದರೆ ಬೆರಳೆಣಿಕೆಯಷ್ಟು ಹೋಂ ಸ್ಟೇಗಳು ಪರವಾನಗಿ ಪಡೆದಿವೆ. ಇನ್ನೂ ಶೇ.80 ಭಾಗ ಅನಧಿಕೃತವಾಗಿಯೇ ನಡೆಯುತ್ತಿದ್ದು ಮಲೆನಾಡು ಸೇರಿ ಹಲವೆಡೆ ಅನಧಿಕೃತ ಹೋಂ ಸ್ಟೇಗಳಲ್ಲಿ ರೇವ್ ಪಾರ್ಟಿ, ಮದ್ಯ ಮತ್ತು ಗಾಂಜಾ ಪೂರೈಕೆಯೂ ಆಗುತ್ತಿದೆ. ದಾಳಿಗೆ ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳ ಸಹಕಾರವೂ ಬೇಕಿದೆ.

  | ಹೆಸರು ಹೇಳಲು ಇಚ್ಛಿಸದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts