ಉಬ್ಬಿದ ರಕ್ತನಾಳಕ್ಕೆ ಹೋಮಿಯೋ ಪರಿಹಾರ

homio mad mar 20
Published on

ಉಬ್ಬಿದ ರಕ್ತನಾಳ ಸಮಸ್ಯೆಗೆ ವೆರಿಕೋಸ್ ವೇನ್ಸ್ ಎನ್ನುತ್ತಾರೆ. ಇಲ್ಲಿ ರಕ್ತನಾಳಗಳು ಹಿಗ್ಗಿ ದೊಡ್ಡದಾಗುತ್ತವೆ ಮತ್ತು ಹೆಚ್ಚಿನ ಪ್ರಮಾಣದ ರಕ್ತ ಇದರಲ್ಲಿ ತುಂಬಿರುವಂಥ ಪರಿಸ್ಥಿತಿ ನಿರ್ವಣವಾಗಿರುವುದು. ಈ ಸ್ಥಳದಲ್ಲಿ ಚರ್ಮ ಉಬ್ಬಿದ ಹಾಗೆ ಕಾಣಿಸುವುದು.

ಕಾರಣಗಳು: ಕಾಲಿನ ರಕ್ತನಾಳದಲ್ಲಿ ದೋಷ ಇದ್ದಾಗ, ವಯಸ್ಸು ಹೆಚ್ಚಾದಂತೆ ಅನುವಂಶಿಕವಾಗಿ ಬೊಜ್ಜು, ರಕ್ತನಾಳಗಳ ಮೇಲೆ ಒತ್ತಡ ವ್ಯಾಯಾಮದ ಕೊರತೆ ಅಧಿಕ ಹೊತ್ತು ನಿಂತಿರುವುದು ಗರ್ಭಿಣಿಯರಲ್ಲಿ.

ರೋಗ ಲಕ್ಷಣಗಳು: ರಕ್ತನಾಳಗಳು ನೀಲಿ ಬಣ್ಣ ದಲ್ಲಿ ಕಾಣಿಸಿಕೊಳ್ಳುವುದು ಅಥವಾ ರಕ್ತನಾಳಗಳು ಉಬ್ಬಿರುವ ರೀತಿಯಲ್ಲಿ ಗೋಚರಿಸುವುದು ತಿಳಿ ನೇರಳೆ ಜೇಡರ ಬಲೆಯ ರೀತಿಯಲ್ಲಿ ರಕ್ತನಾಳಗಳು ತೊಡೆಯ ಭಾಗದಲ್ಲಿ ಕಾಣಿಸಿಕೊಳ್ಳುವುದು ಚರ್ಮದ ಬಣ್ಣ ಬದಲಾಗುವುದು. ಸಣ್ಣ ಗಾಯಗಳಿಂದ ಅಧಿಕ ರಕ್ತ ಸೋರುವಿಕೆ, ಗಾಯ ಮಾಯುವುದರಲ್ಲಿ ನಿಧಾನವಾಗುವಿಕೆ ಕಾಲಿನಲ್ಲಿ ನೋವು ಸೆಳೆತ, ಸ್ನಾಯು ಸೆಳೆತ ಸಮಸ್ಯೆಗಳು, ಪರಿಣಾಮಗಳು: ಪಿಗ್ಮೇಂಟೇಷನ್ ಉಂಟಾಗುವುದು ದೀರ್ಘಕಾಲದ ಚರ್ಮದ ತೊಂದರೆಗಳಿಗೆ ಒಳಗಾಗುವುದು ರಕ್ತನಾಳದ ಹುಣ್ಣುಗಳು ಡಿವಿಟಿ ಪಾದದ ಊತ ಗಾಯಗಳಲ್ಲಿ ನಿರಂತರ ರಕ್ತ ಒಸರುವುದು

ಮುನ್ನೆಚ್ಚರಿಕೆ ಕ್ರಮ: ಕುಳಿತುಕೊಂಡಿರುವಾಗ ಹಾಗೂ ಮಲಗಿರುವಾಗ ಕಾಲುಗಳನ್ನು ಉದ್ದಕ್ಕೆ ಚಾಚಿಕೊಳ್ಳುವುದು ಕಂಪ್ರೆಷನ್ ಡ್ರೆಸ್ಸಿಂಗ್ ಮಾಡಿಸಿಕೊಳ್ಳುವುದು ಪೋಷಕಾಂಶಯುಕ್ತ ಆಹಾರ ಮಾನಸಿಕ ಒತ್ತಡಗಳಿಂದ ದೂರ ಇರುವುದು ಮದ್ಯಪಾನ, ಧೂಮಪಾನ ಮಾಡದಿರುವುದು ಯಾವುದೇ ಬದಲಾವಣೆ ಕಂಡುಬಂದರಲ್ಲಿ ವೈದ್ಯರನ್ನು ಸಂರ್ಪಸುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net