ವಿಧಾನಸಭೆ ಚುನಾವಣೆ ಕಣದಲ್ಲಿ 82 ವರ್ಷದ ವೃದ್ಧೆ; ಕಾರಣ ತಿಳಿದ ಅಧಿಕಾರಿಗಳು ಶಾಕ್!

Homeless 82 year-old woman files nomination from Jagtial
Published on

ತೆಲಂಗಾಣ: 82 ವರ್ಷದ ವೃದ್ಧೆಯೊಬ್ಬರು ತೆಲಂಗಾಣ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜಗಿತ್ಯಾಲ ಜಿಲ್ಲಾ ಕೇಂದ್ರದಲ್ಲಿ ನಡೆದ ಈ ಘಟನೆ ತೆಲಂಗಾಣದಾದ್ಯಂತ ಸಂಚಲನ ಮೂಡಿಸಿದೆ.

82 ವರ್ಷದ ಅಜ್ಜಿಯ ನಾಮನಿರ್ದೇಶನ ಚರ್ಚೆಯ ವಿಷಯವಾಗಿದೆ. ಈ ಅಜ್ಜಿ ನಾಮಪತ್ರ ಸಲ್ಲಿಕೆ ಮಾಡಿರುವ ಹಿಂದೆ ಒಂದು ಕಾರಣವಿದೆ. ವೃದ್ಧೆ ಚೀಟಿ ಶ್ಯಾಮಲಾ ಅವರ ಉದ್ದೇಶವನ್ನು ತಿಳಿದು ಅಧಿಕಾರಿಗಳು ಶಾಕ್​ ಆಗಿದ್ದಾರೆ.

ಕರೀಂನಗರ ಜಿಲ್ಲೆಯ ಗಂಗಾಧರ ಮಂಡಲದ ಕುರಿಕ್ಯಾಸ್‌ಗೆ ಸೇರಿದ ಚೀಟಿ ಶ್ಯಾಮಲಾ ಸ್ವಾತಂತ್ರ್ಯ ಹೋರಾಟಗಾರ ಮುರಳೀಧರ ರಾವ್ ಅವರ ಪತ್ನಿ. ಚೇಟಿ ಶ್ಯಾಮಲಾ ನಾಮಪತ್ರ ಸಲ್ಲಿಸಲು ಕಾರಣಗಳನ್ನು ವಿವರಿಸಿದರು. ಕುಟುಂಬದ ಮನೆಯ ವಿಚಾರದಲ್ಲಿ ಹಿರಿಯ ಮಗನ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ನಾಮಪತ್ರ ಸಲ್ಲಿಸಬೇಕಾಯಿತು ಎಂದು ಶ್ಯಾಮಲಾ ವಿವರಿಸಿದ್ದಾರೆ.

ಮಗ ವಿದೇಶಕ್ಕೆ ಹೋದ. ತಾಯಿಯ ಜಮೀನನ್ನು ಆಕೆಗೆ ತಿಳಿಯದಂತೆ ಮಾರಿದ. ಇದರಿಂದ ವೃದ್ಧೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ನ್ಯಾಯಕ್ಕಾಗಿ ಸಿಎಂ ಕೆಸಿಆರ್‌ಗೆ ಪತ್ರವನ್ನೂ ಬರೆದಿದ್ದಾರೆ. ಆದರೆ ಯಾವುದೇ ಫಲ ಸಿಗಲಿಲ್ಲ. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಹತ್ತು ಜನಕ್ಕೆ ನನ್ನ ಸಮಸ್ಯೆ ಗೊತ್ತಾಗುತ್ತದೆ. ತಮ್ಮ ಸಮಸ್ಯೆ ತಿಳಿದು ಬಗೆಹರಿಸುತ್ತಾರೆ ಎಂದುಕೊಂಡ ವೃದ್ಧೆಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ತನಗೆ ನ್ಯಾಯ ದೊರಕಿಸಿಕೊಡುವಂತೆ ಶ್ಯಾಮಲಾ ದೇಶದ ಎಲ್ಲ ಪ್ರಮುಖರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಲಾಭವಿಲ್ಲ ಎಂಬ ಭಾವನೆ ಅವರದು. 82ನೇ ವಯಸ್ಸಿಗೆ ಬಂದಿರುವ ತಮ್ಮ ಮೇಲೆ ತಾರತಮ್ಯ ತೋರುತ್ತಿರುವುದು ಸರಿಯಲ್ಲ ಎಂದ ಅವರು, ತಮ್ಮ ನಂಬಿಕೆಯನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಜಗಿತ್ಯಾಲದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net