ಹಲ್ಲಿಗಳು ತಮ್ಮ ಬಾಲವನ್ನೇ ಬಿಟ್ಟು ಓಡಿಹೋಗುತ್ತವೆ! ಈ ಒಂದು ಸಣ್ಣ ಟ್ರಿಕ್ ಮಾಡಿದರೆ ಸಾಕು.. Lizards

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅನೇಕ ಜನರ ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಓಡಾಡುವುದನ್ನು ನಾವು ನೋಡಿರುತ್ತೇವೆ
  • ಆಹಾರದ ವಾಸನೆ ಮತ್ತು ಕೀಟಗಳ ಉಪಸ್ಥಿತಿಯಿಂದ ಹಲ್ಲಿಗಳ ಓಡಾಟ ಹೆಚ್ಚಾಗಿ ಕಂಡುಬರುತ್ತವೆ
  • ಮನೆಯಿಂದ ಹೊರ ಹಾಕಲು ಹಲವಾರು ರೀತಿಯ ಸ್ಪ್ರೇಗಳು, ರಾಸಾಯನಿಕ ಔಷಧಿಗಳನ್ನು ಬಳಸುತ್ತಾರೆ
Lizardಅನೇಕ ಜನರ ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಓಡಾಡುವುದನ್ನು ನಾವು ನೋಡಿರುತ್ತೇವೆ. ಇದರಿಂದ ಆತಂಕ, ಅಸೂಯೆ, ಭಯವನ್ನು ಜನರು ಅನುಭವಿಸುತ್ತಾರೆ. ಆದಾಗ್ಯೂ, ಬೇಸಿಗೆ ಹೆಚ್ಚಾದಂತೆ ಹಲ್ಲಿಗಳ ಓಡಾಟ ಹೆಚ್ಚಾಗಿ ಕಂಡುಬರುತ್ತವೆ. ಇವುಗಳಿಗೆ ಮುಖ್ಯ ಕಾರಣವೆಂದರೆ ಆಹಾರದ ವಾಸನೆ ಮತ್ತು ಕೀಟಗಳ ಉಪಸ್ಥಿತಿ. ಹಾಗಾಗಿ ನೀವೇನಾದರೂ, ಹಲ್ಲಿಯನ್ನು ಮನೆಯಿಂದ ಓಡಿಸಲು ಪ್ರಯತ್ನಿಸುತ್ತಿದ್ದರೆ ಈ ಸರಳ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ..
ಹಲ್ಲಿಗಳು ಸಾಮಾನ್ಯವಾಗಿ ಮನುಷ್ಯರಿಗೆ ಹಾನಿ ಮಾಡುವುದಿಲ್ಲ. ಅವು ಮನೆಯ ವಾತಾವರಣವನ್ನು ಹಾಳು ಮಾಡಬಹುದು. ಆದಾಗ್ಯೂ, ಅನೇಕರು ಅವುಗಳನ್ನು ಮನೆಯಿಂದ ಹೊರ ಹಾಕಲು ಹಲವಾರು ರೀತಿಯ ಸ್ಪ್ರೇಗಳು, ರಾಸಾಯನಿಕ ಔಷಧಿಗಳನ್ನು ಬಳಸುತ್ತಾರೆ. ಆದರೂ,  ಕೂಡಾ ಆ ಕೀಟಗಳು ಹೊರ ಹೋಗುವುದಿಲ್ಲ. ಹಾಗಾಗಿ ಈ ರೀತಿಯ ಮನೆಮದ್ದುಗಳನ್ನು ಬಳಸುವುದರಿಂದ ಹಲ್ಲಿಗಳು ಮನೆಯಿಂದ ಹೊರಹೋಗಬಹುದು.

ಕಾಫಿ ಮತ್ತು ತಂಬಾಕಿನ ಬಳಕೆ

ಹಲ್ಲಿಗಳು ಕಾಫಿಯ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಆದರಿಂದ ನೀವು ಕಾಫಿ ಪುಡಿಯನ್ನು ತಂಬಾಕಿನ ಜೊತೆಗೆ ಸಣ್ಣ ಉಂಡೆಗಳಾಗಿ ಬೆರೆಸಿ ಹಲ್ಲಿಗಳು ಹೆಚ್ಚಾಗಿ ಕಂಡುಬರುವ ಪ್ರದೇಶದಲ್ಲಿ ಇವುಗಳನ್ನು ಇಡಿ. ಈ ಪದಾರ್ಥಗಳ ವಾಸನೆಯು ಅವುಗಳನ್ನು ಆ ಪ್ರದೇಶಗಳಿಗೆ ಬರದಂತೆ ತಡೆಯುವುದರ ಜೊತೆಗೆ ಮನೆಯಿಂದ ಹೊರಹೋಗುತ್ತವೆ.

ಬೆಳ್ಳುಳ್ಳಿ ಮತ್ತು ಈರುಳ್ಳಿ 

ಬೆಳ್ಳುಳ್ಳಿ ಮತ್ತು ಈರುಳ್ಳಿಯ ಬಲವಾದ ವಾಸನೆಯು ಹಲ್ಲಿಗಳನ್ನು ಮನೆಯಿಂದ ದೂರವಿಡಲು ಸಹಾಯ ಮಾಡುತ್ತದೆ. ಹಾಗಾಗಿ ಬೆಳ್ಳುಳ್ಳಿ ಎಸಳುಗಳನ್ನು ಅಡುಗೆಮನೆ, ಕಿಟಕಿಗಳು ಮತ್ತು ಬಾಗಿಲುಗಳ ಬಳಿ ಇಡಿ. ಇಲ್ಲದಿದ್ದರೆ, ಬೆಳ್ಳುಳ್ಳಿ ರಸವನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಮಾಡಿ. ಇದರಿಂದ ಹಲ್ಲಿಗಳು ನಿಮ್ಮ ಮನೆಯಿಂದ ದೂರ ಹೋಗುತ್ತವೆ.

ಪೆಪ್ಪರ್ ಸ್ಪ್ರೇ

ಪೆಪ್ಪರ್​ ಸ್ಪ್ರೇ ಒಂದು ಸಹಾಯಕ ಔಷಧ ಎಂದರೆ ತಪ್ಪಾಗದು. ಪೆಪ್ಪರ್ ಸ್ಪ್ರೇನ ಕಟುವಾದ ವಾಸನೆಯು ಹಲ್ಲಿಗಳನ್ನು ಮನೆಯಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ಇದು ಪರಿಣಾಮಕಾರಿ ಔಷಧವಾಗಿದೆ. ಸ್ವಲ್ಪ ಮೆಣಸಿನ ಪುಡಿಯನ್ನು ನೀರಿನೊಂದಿಗೆ ಬೆರೆಸಿ, ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ನಂತರ ಗೋಡೆಗಳು, ಮೂಲೆಗಳು ಮತ್ತು ಕಿಟಕಿಗಳ ಸುತ್ತಲೂ ಸಿಂಪಡಿಸಿ. ಇದರಿಂದ ಹಲ್ಲಿಗಳು ಜಾಗ ಖಾಲಿ ಮಾಡುತ್ತವೆ.

ಮೊಟ್ಟೆಯ ಚಿಪ್ಪಿನ ವಿಧಾನ

ಹಲ್ಲಿಗಳಿಗೆ ಮೊಟ್ಟೆಯ ಚಿಪ್ಪಿನ ವಾಸನೆ ಇಷ್ಟವಾಗದ ಕಾರಣ, ಜನರು ತಮ್ಮ ಗೋಡೆಗಳ ಮೇಲೆ ಮೊಟ್ಟೆಯ ಚಿಪ್ಪನ್ನು ನೇತುಹಾಕುವುದನ್ನು ನೀವು ಬಹುಶಃ ನೋಡಿರಬಹುದು. ಮನೆಯ ಮೂಲೆಗಳಲ್ಲಿ ಅಥವಾ ಕಿಟಕಿಗಳಲ್ಲಿ ಖಾಲಿ ಮೊಟ್ಟೆಯ ಚಿಪ್ಪನ್ನು ಇಡುವುದರಿಂದ ದೂರವಿಡಲು ಸಹಾಯ ಮಾಡುತ್ತದೆ.

ಮನೆಯನ್ನು ಸ್ವಚ್ಛವಾಗಿಡಿ

ಸಣ್ಣ ಕೀಟಗಳು ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಹಲ್ಲಿಗಳು ಓಡಾಡುತ್ತವೆ. ಹಾಗಾಗಿ ಆದಷ್ಟು ಮನೆಯನ್ನು ಸ್ವಚ್ಛ ಮಾಡಿಟ್ಟುಕೊಳ್ಳಿ. ರಾತ್ರಿ ವೇಳೆಯಲ್ಲಿ ಅಡುಗೆ ಮನೆಯ ದೀಪಗಳನ್ನು ಆಫ್ ಮಾಡಿ, ಆಹಾರಗಳನ್ನು ಮುಚ್ಚುವುದು, ಕಿಟಕಿಗಳನ್ನು ಸ್ವಚ್ಚವಾಗಿರಿಸುವುದರಿಂದ ಹಲ್ಲಿಗಳನ್ನು ದೂರ ಇಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net