ಅಕ್ಕಿ-ಹಿಟ್ಟಿನಲ್ಲಿ ಹುಳುಗಳ ಕಾಟವೇ? ಈ ಒಂದು ಸಣ್ಣ ಟ್ರಿಕ್ ಬಳಸಿದರೆ ಕೀಟಗಳು ಓಡಿ ಹೋಗೋದು ಗ್ಯಾರಂಟಿ! Insects in rice flour

 Insects in rice flour (ಸಾಂದರ್ಭಿಕ ಚಿತ್ರ)
Insects in rice flour (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಪಾಕಪದ್ಧತಿಯಲ್ಲಿ ಹೆಚ್ಚಾಗಿ ಬಳಸುವ ಎರಡು ಪದಾರ್ಥಗಳೆಂದರೆ ಅಕ್ಕಿ ಮತ್ತು ಹಿಟ್ಟು
  • ಈ ಪದಾರ್ಥಗಳಲ್ಲಿ ಅತೀ ಹೆಚ್ಚು ಕೀಟಗಳು ದಾಳಿ ಮಾಡುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ
  • ಸಾಮಾನ್ಯವಾಗಿ ಹುಳುಗಳು ಆಹಾರವನ್ನು ಹಾಳುಮಾಡುವುದಲ್ಲದೇ, ಆರೋಗ್ಯಕ್ಕೂ ಹಾನಿಕಾರಕವಾಗಿವೆ
Insects in rice flour: ಭಾರತೀಯ ಪಾಕಪದ್ಧತಿಯಲ್ಲಿ ಹೆಚ್ಚಾಗಿ ಬಳಸುವ ಎರಡು ಪದಾರ್ಥಗಳೆಂದರೆ ಅಕ್ಕಿ ಮತ್ತು ಹಿಟ್ಟು. ಆದರೆ, ಈ ಆಹಾರ ಪದಾರ್ಥಗಳಲ್ಲಿ ಅತೀ ಹೆಚ್ಚು ಕೀಟಗಳು ದಾಳಿ ಮಾಡುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ವಾಸ್ತವವಾಗಿ ಗೋಧಿ ಹಿಟ್ಟು ಕೊಳಕಾಗಿದ್ದರೆ, ಅಥವಾ ಹುಳಗಳಿಂದ ತುಂಬಿದ್ದರೆ ಅವುಗಳು ಆಹಾರವನ್ನು ಹಾಳುಮಾಡುವುದಲ್ಲದೇ, ಆರೋಗ್ಯಕ್ಕೂ ಹಾನಿಕಾರಕವಾಗಿವೆ. ಹಾಗಾಗಿ ನೀವೇನಾದರೂ ಈ ಆಹಾರ ಪದಾರ್ಥಗಳಿಂದ ಹುಳಗಳನ್ನು ಬೇರ್ಪಡಿಸಲು ನಿರ್ಧರಿಸಿದ್ದರೆ, ಈ ಮನೆಮದ್ದುಗಳನ್ನು ಬಳಸಿ.

ಬೇ ಎಲೆ (ಹಿಪ್ಪಲಿ ಎಲೆ)

ಅಡುಗೆ ಮನೆಯಲ್ಲಿರುವ ಕೆಲವೇ ಕೆಲವು ಅಮೂಲ್ಯ ವಸ್ತುಗಳಲ್ಲಿ ಬೇ ಎಲೆ ಕೂಡ ಒಂದಾಗಿದೆ. ಇದರ ಎಲೆ ಮತ್ತು ವಾಸನೆಯನ್ನು ಕೀಟಗಳು ಇಷ್ಟಪಡುವುದಿಲ್ಲ. ಹಾಗಾಗಿ ನೀವೇನಾದರೂ ಹಿಟ್ಟಿನಿಂದ ಕೀಟಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದರೆ, ಈ 2-3 ಒಣಗಿದ ಎಲೆಯನ್ನು ಹಿಟ್ಟಿನ ಡಬ್ಬದಲ್ಲಿ ಹಾಕಿಡಿ. ಇದು ಕೀಟಗಳು ಒಳಗೆ ಬಾರದಂತೆ ತಡೆಯಲು ಸಹಾಯ ಮಾಡುತ್ತವೆ.

ಬೇವಿನ ಎಲೆಗಳು

ಬೇವಿನ ಎಲೆಗಳು ನೈಸರ್ಗಿಕವಾಗಿ ನಂಜು ನಿರೋಧಕ ಮತ್ತು ಕೀಟ ನಿವಾರಕ ಗುಣಗಳನ್ನು ಹೊಂದಿದೆ. ಹಾಗಾಗಿ ಹಿಟ್ಟು ಮತ್ತು ಅಕ್ಕಿ ಡಬ್ಬದಲ್ಲಿ 4-5 ಒಣಗಿಸಿದ ಬೇವಿನ ಎಲೆಗಳನ್ನು ಹಾಕಿಡುವುದರಿಂದ ಹುಳಗಳು ಪತ್ತೆಯಾಗುವುದಿಲ್ಲ. ಜೊತೆಗೆ ಆಹಾರ ಪದಾರ್ಥ ಕೂಡಾ ಹಾಳಾಗುವುದಿಲ್ಲ.

ಲವಂಗ

ಕೀಟಗಳು ಲವಂಗದ ಬಲವಾದ ವಾಸನೆಯನ್ನು ಸಹ ಇಷ್ಟಪಡುವುದಿಲ್ಲ. ಹಾಗಾಗಿ 8-10 ಲವಂಗ ಅಥವಾ ಸ್ವಲ್ಪ ಕರಿಮೆಣಸುಗಳನ್ನು ಚೀಲದಲ್ಲಿ ಕಟ್ಟಿ ಅಕ್ಕಿ/ಹಿಟ್ಟಿನ ಡಬ್ಬದಲ್ಲಿ ಇಡಿ. ಲವಂಗದ ತೀಕ್ಷ್ಣ ವಾಸನೆ ಹುಳುಗಳನ್ನು ಓಡಿಸುತ್ತದೆ ಜೊತೆಗೆ ಅವುಗಳು ಮೊಟ್ಟೆ ಇಡದಂತೆ ತಡೆಯುತ್ತದೆ. ಹಿಟ್ಟಿನಲ್ಲಿ ಇದು ರುಚಿಯ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಅತ್ಯಂತ ಪರಿಣಾಮಕಾರಿ ಮತ್ತು ಸುಲಭ ಮನೆಮದ್ದಾಗಿದೆ.

ಕಲ್ಲುಪ್ಪು

ಸ್ವಲ್ಪ ಕಲ್ಲುಪ್ಪನ್ನು ಅಕ್ಕಿ ಅಥವಾ ಹಿಟ್ಟಿನ ಡಬ್ಬದಲ್ಲಿ ಹಾಕಿ. ಇದು ತೇವಾಂಶವನ್ನು ಹೀರಿಕೊಂಡು ಹುಳುಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ. ಏನಾದರೂ ಮೊದಲೇ ಅಕ್ಕಿ ಅಥವಾ ಹಿಟ್ಟಿನಲ್ಲಿ ಹುಳಗಳು ಕಂಡುಬಂದಿದ್ದರೆ, ಸೂರ್ಯನ ಬೆಳಕಿನಲ್ಲಿ ಹರಡಿ ಒಣಗಿಸಿ ನಂತರ ಉಪ್ಪು ಹಾಕಿ. ಇದು ವರ್ಷಗಟ್ಟಲೆ ಹುಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net