ಕನ್ನಡಕದಿಂದ ದೂರವಿರಲು ಪೇರಳೆ ಹಣ್ಣಿನ ಚಿಗುರೆಲೆ ಬೆಸ್ಟ್ ಮದ್ದು; ಕಣ್ಣಿನ ದೃಷ್ಟಿ ಸುಧಾರಣೆಗೆ ಇಲ್ಲಿದೆ ಸಿಂಪಲ್​ ಟಿಪ್ಸ್..Guava Leaves

Guava Leaves For Eye Health
Guava Leaves For Eye Health
Published on

ಪ್ರಮುಖ ಮುಖ್ಯಾಂಶಗಳು

  • ಪೇರಳೆ ಹಣ್ಣಿನ ಎಲೆಯಿಂದ ಆರೋಗ್ಯ ಪ್ರಯೋಜನ ಏನೆಲ್ಲ ಸಿಗಲಿದೆ?.
  • ಕಣ್ಣಿನ ದೃಷ್ಟಿ ದೋಷಕ್ಕೆ ಪೇರಳೆ ಹಣ್ಣಿನ ಚಿಗುರಲೆಯ ಚಹಾ ಬೆಸ್ಟ್​ ಮದ್ದು.
  • ಪೇರಳೆ ಹಣ್ಣು ಮತ್ತು ಎಲೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು?.
Guava Leaves For Eye Health: ಮೊಬೈಲ್​ನಲ್ಲಿನ ಬ್ಲೂ ರೇಸ್​ಗಳು ಹೆಚ್ಚಾಗಿ ಕಣ್ಣಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಮೊಬೈಲ್ ನೋಡುವುದು ಮೆದುಳಿಗೂ ಹಾನಿಕಾರಕ ಎಂಬ ಸತ್ಯ ಅರಿತಿದ್ದರೂ ಸಹ ಈ ಕಾಲದಲ್ಲಿ ಮೊಬೈಲ್​ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗದಂತೆ ಭಾವಿಸಿಕೊಂಡಿದ್ದೇವೆ. ಹೆಚ್ಚು ಸ್ಕ್ರೀನಿಂಗ್​ ಸಮಯ ಕಣ್ಣಿನ ದೃಷ್ಟಿ ದೋಷವನ್ನು ಹಾಳು ಮಾಡುತ್ತಿದೆ. ಇದಕ್ಕಾಗಿ ನೈಸರ್ಗಿಕವಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.

ಚಿಗುರೆಲೆ ಇಷ್ಟೆಲ್ಲ ಸಹಕಾರಿ

ಸೀಬೆ ಹಣ್ಣು ಅಥವಾ ಪೇರಳೆಮರದ ಹಣ್ಣಷ್ಟೆ ಉಪಯೋಗ ಎಂದು ಭಾವಿಸಲಾಗುತ್ತದೆ. ಆದರೆ, ಇದರ ಚಿಗುರೆಲೆ ಕೂದಲಿನ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್​, ಆಂಟಿ ಮೈಕ್ರೋಬಿಯಲ್​ ಹಾಗೂ ಉರಿಯೂತದ ಗುಣಲಕ್ಷಣ ಹೇರಳವಾಗಿದೆ. ಇದರ ಎಲೆಗಳು ಮಧುಮೇಹ, ಜೀರ್ಣಕ್ರಿಯೆ ಹಾಗೂ ಬಾಯಿಯ ನೈರ್ಮಲ್ಯ ಕಾಪಾಡಲು, ಕಣ್ಣಿನ ಆರೋಗ್ಯ, ಕಣ್ಣಿನ ಪೊರೆ, ತೂಕ ನಷ್ಟಕ್ಕೆ ಸಹಾಯವನ್ನು ಮಾಡುತ್ತದೆ.

ಚಿಗುರೆಲೆ ಬಳಕೆ ಮಾಡೋದು ಹೇಗೆ?

ಕಣ್ಣಿನ ಸಮಸ್ಯೆ ಕಾಣಿಸಿಕೊಂಡಾಗ ಸೀಬೆ ಹಣ್ಣಿನ ಚಿಗುರೆಲೆಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಆ ನೀರಿಗೆ ಕೊಂಚ ಜೇನುತುಪ್ಪ ಹಾಗೂ ನಿಂಬೆ ರಸ ಸೇರಿಸಿ ರಾತ್ರಿ ಅಥವಾ ಬೆಳಿಗ್ಗೆ ಹೊತ್ತಿನಲ್ಲಿ ಕುಡಿಯಿರಿ. ಇದು ಕುಡಿಯಲು ಕಷಾಯದಂತೆ ಎನಿಸಿದರೂ ಸಹ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಕಣ್ಣಿಗೆ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ.

ಪೇರಳೆ ಎಲೆಯ ನೀರು ಕುಡಿದು ಮಲಗಿ

ಈ ಎಲೆಯಲ್ಲಿರುವ ವಿಟಮಿನ್​ ಎ ಹಾಗೂ ಉತ್ಕರ್ಷಣ ನಿರೋಧಕ ಶಕ್ತಿ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಸಹಕಾರಿ. ಇದರ ನೀರಿನ ಸೇವನೆಯಿಂದ ದೇಹಕ್ಕೆ ಹಾಗೂ ಕಣ್ಣಿಗೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ. ಅಲ್ಲದೇ ಕಣ್ಣಿಗೆ ಆಗುವ ಒತ್ತಡವನ್ನು ನಿವಾರಣೆ ಮಾಡುತ್ತದೆ. ರಕ್ತಪರಿಚಲನೆಯಲ್ಲಿ ಸಹಾಯ ಮಾಡುತ್ತದೆ. ನೀವು ಈ ಸೀಬೆ ಹಣ್ಣಿನ ಎಲೆ ಕುದಿಸಿದ ನೀರನ್ನು ಕುಡಿದ ನಂತರ ಮೊಬೈಳ್​ ಅನ್ನು ದೂರವಿಟ್ಟು ಮಲಗಿ. ನಂತರ ರಿಸಲ್ಟ್​ಗಾಗಿ ಕಾಯಿರಿ.

ಕಣ್ಣಿಗೆ ಇಷ್ಟೆಲ್ಲ ಲಾಭವಿದೆ

ಪೇರಳೆ ಹಣ್ಣಿನ ಚಿಗುರೆಲೆಯ ನೀರನ್ನು ಕುಡಿಯುವುದರಿಂದ ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ. ವಯಸ್ಸಾದಂತೆ ಕಾಡುವ ಪೊರೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಣ್ಣಿನೊಳಗೆ ಇರುವ ಸ್ನಾಯುಗಳ ಬಲ ಹೆಚ್ಚು ಮಾಡುತ್ತದೆ, (ಏಜೆನ್ಸೀಸ್).

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net