ಈ 7 ಮನೆ ಮದ್ದುಗಳಿಂದ ಚಳಿಗಾಲದಲ್ಲಿ ಜ್ವರ ಮತ್ತು ಶೀತವನ್ನು ತಡೆಗಟ್ಟಿ! | Home Remedies

Home Remedies
Home Remedies
Published on
ಬೆಂಗಳೂರು: ಚಳಿಗಾಲದಲ್ಲಿ ಅಸ್ವಸ್ಥತೆಯನ್ನು ಶಮನಗೊಳಿಸಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ರೋಗದ ಲಕ್ಷಣಗಳು ಉಲ್ಬಗೊಳ್ಳುವ ಮೊದಲೇ ಮನೆಯಲ್ಲೇ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಿ..
ಹೌದು, ಚಳಿಗಾಲದಲ್ಲಿ ಜ್ವರ, ಕೆಮ್ಮು, ಶೀತ, ಗಂಟಲು ನೋವು ಬರುವುದು ಸಾಮಾನ್ಯ. ಇದನ್ನು ಮನೆಯಲ್ಲಿಯೇ ನೈಸರ್ಗಿಕವಾಗಿ ತಡೆಗಟ್ಟಲು ಈ 7 ಪರಿಹಾರಗಳು ತುಂಬಾ ಪರಿಣಾಮಕಾರಿಯಾಗಿದೆ. ಏನು? ಯಾವುದು ಎಂಬುದು ತಿಳಿಯೋಣ.

1.ಹಸಿ ಶುಂಠಿ, ಜೇನುತುಪ್ಪ, ತುಳಸಿ ಮಿಶ್ರಣ

ಹಸಿ ಶುಂಠಿ, ಜೇನುತುಪ್ಪ, ತುಳಸಿ ಚಹಾ ಈ ಮೂರು ಬಳಸಿಕೊಂಡು ಜ್ವರ, ಕೆಮ್ಮು, ಶೀತ, ಗಂಟಲು ನೋವಿನಂತಹ ಸಾಮಾನ್ಯ ರೋಗಗಳನ್ನು ಹೋಗಲಾಡಿಸಬಹುದು. ಹೌದು, ಒಂದು ಚಿಕ್ಕ ತುಂಡು ಹಸಿ ಶುಂಠಿ, 8 ರಿಂದ 10 ತುಳಸಿ ಎಲೆ ಮತ್ತು 1 ಚಮಚ ಜೇನುತುಪ್ಪ ಬಳಸಿಕೊಂಡು ಚಹಾ ತರ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ಕುಡಿಯಿರಿ. ಶುಂಠಿಯಲ್ಲಿ ಆಂಟಿ-ವೈರಲ್ ಗುಣ ಇದ್ದು, ಜೇನುತುಪ್ಪ ಸೋಂಕು ನಿವಾರಣೆಯಾಗಿದೆ. ಅಲ್ಲದೆ, ತುಳಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

2.ಅರಿಶಿನ ಹಾಲು

ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಬೆಚ್ಚಗಿನ ಹಾಲಿನಲ್ಲಿ ಅರ್ಧ ಚಮಚ ಅರಿಶಿನ + ಒಂದು ಚಿಟಿಕೆ ಕಾಳುಮೆಣಸು ಪುಡಿ ಹಾಕಿ ಕುಡಿಯಿರಿ. ಇದು ಕರ್ಕ್ಯುಮಿನ್ ವೈರಸ್‌ಗಳ ವಿರುದ್ಧ ಹೋರಾಡುತ್ತದೆ. ನಿದ್ರೆ ಚೆನ್ನಾಗಿ ಬರುತ್ತದೆ.

3.ಉಗುರು ಬೆಚ್ಚನೆಯ ನೀರು + ಉಪ್ಪು

ಒಂದು ಲೋಟ ಬಿಸಿ ನೀರಿನಲ್ಲಿ ಅರ್ಧ ಚಮಚ ಉಪ್ಪು ಹಾಕಿ, ದಿನಕ್ಕೆ 2 ಬಾರಿ ಉಗುರು ಮಾಡಿ. ಇದರಿಂದ ಗಂಟಲು ಸೋಂಕು, ಮೂಗು ಕಟ್ಟುವಿಕೆ ತಕ್ಷಣ ಕಡಿಮೆಯಾಗುತ್ತದೆ.


4.ಒಣ ಶುಂಠಿ + ಬೆಲ್ಲ + ತುಪ್ಪ

ಸಮಪ್ರಮಾಣದ ಒಣ ಶುಂಠಿ ಪುಡಿ, ಬೆಲ್ಲ ಪುಡಿ ಬೆರೆಸಿ ಅದಕ್ಕೆ ಒಂದು ಚಿಟಿಕೆ ತುಪ್ಪ ಸೇರಿಸಿ ಚೆನ್ನಾಗಿ ಅಗಿದು ಉಂಡೆ ಮಾಡಿ. ದಿನಕ್ಕೆ 2-3 ಸಣ್ಣ ಉಂಡೆ ತಿನ್ನಿರಿ. ಕೆಮ್ಮು, ಒಣಗಂಟಲು ತಕ್ಷಣ ಶಮನವಾಗುತ್ತದೆ.

5.ನೆಲ್ಲಿಕಾಯಿ ಜ್ಯೂಸ್

ದಿನಕ್ಕೆ 1 ಚಮಚ ನೆಲ್ಲಿಕಾಯಿ ಪುಡಿ ಬೆಚ್ಚನೆಯ ನೀರಿನಲ್ಲಿ ಕಲೆಸಿ ಕುಡಿಯಿರಿ. ವಿಟಮಿನ್ C ಯಿಂದ ರೋಗನಿರೋಧಕ ಶಕ್ತಿ 10 ಪಟ್ಟು ಹೆಚ್ಚಾಗುತ್ತದೆ.

6.ಓಮ + ಲವಂಗ + ಏಲಕ್ಕಿ ಕಷಾಯ

4-5 ಓಮ (ಅಜ್ವಾನ್) + 3 ಲವಂಗ + 2 ಏಲಕ್ಕಿ + ಸ್ವಲ್ಪ ಅದ್ರಕ – ಎಲ್ಲವನ್ನೂ ನೀರಿನಲ್ಲಿ ಕುದಿಸಿ, ಶೋಧಿಸಿ ಕುಡಿಯಿರಿ.ಎದೆ ಗಂಟು, ಉಸಿರಾಟದ ಸಮಸ್ಯೆ ತಡೆಗಟ್ಟುತ್ತದೆ.

7.ತೆಂಗಿನ ಎಣ್ಣೆಯಲ್ಲಿ ಕರ್ಪೂರ + ಓಮ್ ಪೇಸ್ಟ್

2 ಚಮಚ ತೆಂಗಿನ ಎಣ್ಣೆಗೆ ಚಿಟಿಕೆ ಓಮ ಪುಡಿ + ಸ್ವಲ್ಪ ಕರ್ಪೂರ ಬೆರೆಸಿ ಎದೆಗೆ, ಬೆನ್ನಿಗೆ ರಾತ್ರಿ ಮಲಗುವ ಮುಂಚೆ ಹಚ್ಚಿ. ಶೀತ-ಕೆಮ್ಮು ತಡೆಗಟ್ಟಲು ತುಂಬಾ ಒಳ್ಳೆಯದು (ಮಕ್ಕಳಿಗೂ ಸುರಕ್ಷಿತ). ದಿನಕ್ಕೆ ಕನಿಷ್ಠ 8-10 ಗ್ಲಾಸ್ ಬೆಚ್ಚನೆಯ ನೀರು ಕುಡಿಯಿರಿ(ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net