ನ್ಯೂ ಇಯರ್ ಪಾರ್ಟಿ ಹ್ಯಾಂಗೊವರ್ ಕಾಡುತ್ತಿದೆಯೇ? ಕ್ಷಣಾರ್ಧದಲ್ಲಿ ಚೈತನ್ಯ ನೀಡುತ್ತೆ ಈ ಮ್ಯಾಜಿಕ್ ಡ್ರಿಂಕ್,,New Year 2026

New Year 2026
New Year 2026
Published on
ಬೆಂಗಳೂರು: (New Year 2026) ನಿನ್ನೆ ರಾತ್ರಿಯ ಹೊಸ ವರ್ಷದ ಪಾರ್ಟಿಯಲ್ಲಿ ನೀವು ಹೆಚ್ಚು ತಿಂದು ಕುಡಿದು ಸಂಭ್ರಮಿಸಿರುತ್ತೀರ. ಹೊಸ ವರ್ಷದ ಸಂಭ್ರಮಾಚರಣೆಯ ನಂತರ ಹ್ಯಾಂಗೊವರ್ (Hangover) ನಿಂದ ಬಳಲುತ್ತಿರುವವರಿಗೆ ಈ ಪಾನೀಯಗಳು ಮತ್ತು ಸಲಹೆಗಳು ಅತ್ಯಂತ ಸಹಕಾರಿಯಾಗಲಿವೆ.

ನಿಂಬೆ ಮತ್ತು ಜೇನುತುಪ್ಪ

ನಿಮ್ಮ ದೇಹವನ್ನು ಚೈತನ್ಯಗೊಳಿಸಲು ಮತ್ತು ಹ್ಯಾಂಗೊವರ್ ಅನ್ನು ಕಡಿಮೆ ಮಾಡಲು, ಬೆಚ್ಚಗಿನ ನೀರಿಗೆ ನಿಂಬೆ ಮತ್ತು ಜೇನುತುಪ್ಪವನ್ನು ಸೇರಿಸಿ ತಯಾರಿಸಿದ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ದೇಹದ ಎಲ್ಲಾ ಭಾಗಗಳಿಂದ ಕಲ್ಮಶಗಳನ್ನು ಹೊರಹಾಕುತ್ತದೆ, ಅದು ಹೊಟ್ಟೆ, ಅಪಧಮನಿಗಳು ಅಥವಾ ಯಕೃತ್ತು ಆಗಿರಬಹುದು.

ಎಳನೀರು (Coconut Water):

ಅತಿಯಾದ ಮದ್ಯಪಾನದಿಂದ ದೇಹವು ನಿರ್ಜಲೀಕರಣಕ್ಕೆ (Dehydration) ಒಳಗಾಗಿರುತ್ತದೆ. ಎಳನೀರಿನಲ್ಲಿರುವ ಎಲೆಕ್ಟ್ರೋಲೈಟ್ಸ್‌ಗಳು ದೇಹಕ್ಕೆ ತಕ್ಷಣದ ಶಕ್ತಿ ನೀಡಿ, ನೀರಿನಂಶವನ್ನು ಸಮತೋಲನಗೊಳಿಸುತ್ತವೆ.

ಮೆಂತ್ಯ ಮತ್ತು ಕೊತ್ತಂಬರಿ ಸೊಪ್ಪು

ಬೆಳಿಗ್ಗೆ ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಮೆಂತ್ಯ ಬೆರೆಸಿದ ನೀರನ್ನು ಕುಡಿಯಿರಿ. ಈ ಪದಾರ್ಥಗಳನ್ನು ರಾತ್ರಿಯಿಡೀ ಅಥವಾ ಬೆಳಿಗ್ಗೆ ಒಂದು ಲೋಟ ನೀರಿನಲ್ಲಿ ನೆನೆಸಿ, ಸ್ವಲ್ಪ ಬಿಸಿ ಮಾಡಿ, ಸೋಸಿ, ನಂತರ ಕುಡಿಯಿರಿ. ಇದು ಗ್ಯಾಸ್, ಉಬ್ಬುವುದು ಮತ್ತು ವಾಯು ಕಡಿಮೆ ಮಾಡುತ್ತದೆ. ಬೆಳಿಗ್ಗೆ ನಿಮ್ಮ ಹೊಟ್ಟೆ ಸಂಪೂರ್ಣವಾಗಿ ಶುದ್ಧವಾಗುತ್ತದೆ.

ಶುಂಠಿ ಚಹಾ (Ginger Tea):

ಹ್ಯಾಂಗೊವರ್‌ನಿಂದ ವಾಕರಿಕೆ ಅಥವಾ ವಾಂತಿ ಬಂದಂತಾಗುತ್ತಿದ್ದರೆ, ಶುಂಠಿ ಚಹಾ ಉತ್ತಮ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ದೇಹವು ಚೇತರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇರಬೇಡಿ ಹಗುರವಾದ ಆಹಾರವನ್ನು (ಉದಾಹರಣೆಗೆ ಓಟ್ಸ್ ಅಥವಾ ಹಣ್ಣುಗಳು) ಸೇವಿಸಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net