ಅಕ್ಕಿ ತೊಳೆದ ನೀರು ಕುಡಿಯುವುದರಿಂದ ನಿಮ್ಮ ಚರ್ಮಕ್ಕಾಗುವ ಲಾಭವೆಷ್ಟು ಗೊತ್ತಾ?..Rice Water Benefits

Rice Water Benefits
Rice Water Benefits
Published on

ಪ್ರಮುಖ ಮುಖ್ಯಾಂಶಗಳು

  • ​ಅಕ್ಕಿ ತೊಳೆದ ನೀರು ಚರ್ಮದ ಆರೋಗ್ಯಕ್ಕೆ ಎಷ್ಟು ಸಹಾಕಾರಿ ಗೊತ್ತಾ?
  • ​ಇದು ಚರ್ಮವನ್ನು ಹೈಡ್ರೇಟ್ ಆಗಿರಿಸಲು ಮತ್ತು ಹೊಳಪು ನೀಡಲು ಸಹಕಾರಿ
  • ವಯಸ್ಸಾದಂತೆ ಕಾಣುವ ಚರ್ಮದ ಸುಕ್ಕುಗಳನ್ನು ತಡೆಯಲು ಅಕ್ಕಿ ನೀರು ಉತ್ತಮ
Rice Water Benefits: ಅನ್ನವನ್ನು ಪಾತ್ರೆಯಲ್ಲಿ ಬೇಯಿಸಿಕೊಂಡ ನಂತರ ಅದನ್ನು ಬಸಿದು, ಅದಕ್ಕೊಂದಿಷ್ಟು ಉಪ್ಪು, ಕೊಂಚ ಅನ್ನ ಹಾಕಿ ಕುಡಿಯೋದು ವಾಡಿಕೆ. ಇದು ಬಡವರಿಗೆ ಒಂದು ಕಾಲದ ಊಟವು ಹೌದು. ಇಷ್ಟೇ ಅಲ್ಲದೆ ಹಿಂದಿನ ಕಾಲದಲ್ಲಿ  ಗಂಜಿಯಿಂದ ಕಾಟನ್​ ಸೀರೆ ನೆನಸಿ ಒಗೆದು ಒಣ ಹಾಕುತ್ತಿದ್ದ ಪ್ರಸಂಗವೂ ಇದೆ. ಈಗಲೂ ಇದು ವಾಡಿಕೆಯಲ್ಲಿಯೇ ಇದೆ. ಆದರೆ, ಅಕ್ಕಿ ತೊಳೆದ ನೀರಿನಲ್ಲು ಸಹ ಸಾಕಷ್ಟು ಪ್ರಯೋಜನಕಾರಿ ಅಂಶಗಳು ಇದೆ ಎಂಬುದು ನಿಮಗೆ ತಿಳಿದಿದೆಯೇ? 
ಹೌದು, ದಿನದಿಂದ ದಿನಕ್ಕೆ ದೇಹದ ಸೌಂದರ್ಯ, ಮುಖದ ಕಾಂತಿಯನ್ನು ತಾಜಾತನದಿಂದ ಕೂಡಿರುವಂತೆ ನೋಡಿಕೊಳ್ಳಲು ಹಲವಾರು ಬ್ರ್ಯಾಂಡ್​ನ ಸಾಬೂನು, ಫೇಸ್​ ವಾಶ್​​​​​, ಸನ್​​ ಸ್ಕ್ರೀನ್​ ಹೀಗೆ ನಾನಾ ಪ್ರಾಡಕ್ಟ್​​ಗಳು ಹೆಚ್ಚಾಗುತ್ತಿದೆ. ಇವುಗಳನ್ನು ಬಳಕೆ ಮಾಡುವವರ ಮಧ್ಯೆ ನಮ್ಮ ಹಿರಿಯರು ಮುಖದ ಹೊಳಪಿಗೆ ಅಕ್ಕಿ ತೊಳೆದ ನೀರನ್ನು ಕುಡಿಯುತ್ತಿದ್ದರು. ಇದನ್ನು ಈಗಲೂ ಫಾಲೋ ಮಾಡುವವರು ಇದ್ದಾರೆ.
ಮುಖದ ಕಾಂತಿಗೆ ಅಕ್ಕಿ ತೊಳೆದ ನೀರು ಶ್ರೀಮಂತ ಟಾನಿಕ್.​​ ಅಕ್ಕಿಯನ್ನು ಕುದಿಸಿದ ಅಥವಾ ತೊಳೆದ ನೀರಿನಲ್ಲಿ ಈ ಬಿಳಿ ಬಣ್ಣದ ನೀರಿನಲ್ಲಿ ವಿಟಮಿನ್, ಆಂಟಿಆಕ್ಸಿಡೆಂಟ್ ಮತ್ತು ಅಮೈನೋ ಆಮ್ಲ ಇದೆ ಎಂದು ವೈದ್ಯರ ವರದಿ ಪ್ರಕಾರ ತಿಳಿದುಬಂದಿದೆ. ಹಾಗಾದ್ರೆ ಅಕ್ಕಿ ತೊಳೆದ ನೀರಿನಿಂದ ಏನೆಲ್ಲ ಪ್ರಯೋಜನ ಇದೆ ಅನ್ನೋದನ್ನು ತಿಳಿಯೋಣ ಬನ್ನಿ.

ಚರ್ಮದ ತೇವಾಂಶ ಕಾಪಾಡಲು ಸಹಕಾರಿ

ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಅಕ್ಕಿಯಲ್ಲಿರುವ ಪಿಷ್ಟ ಮತ್ತು ಸೆರಾಮೈಡ್‌ ಅಂಶವಿದೆ. ಇದು ಚರ್ಮದ  ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ.  ಚರ್ಮವನ್ನು ಪರಿಸರ ಮಾಲಿನ್ಯದಿಂದ ಹಾಳಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. 

ಚರ್ಮ ವಯಸ್ಸಾಗುವುದನ್ನು ತಡೆಯುತ್ತದೆ

ಅಕ್ಕಿ ತೊಳೆದ ನೀರಿನಲ್ಲಿರುವ 'ಫೆರುಲಿಕ್ ಆಸಿಡ್'ನಂತಹ ಆಂಟಿ ಆಕ್ಸಿಡೆಂಟ್​ಗಳು ವಯಸ್ಸಾಗುತ್ತಿದಂತೆ ಮುಖದ ಮೇಲೆ ಕಾಣಿಸಿಕೊಳ್ಳುವ ಸುಕ್ಕು, ನೆರಿಗೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  NIH-ಸೂಚ್ಯಂಕಿತ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಚರ್ಮದ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ದೀರ್ಘಕಾಲದವರೆಗೂ ಚರ್ಮವನ್ನು ಯೌವನಯುತವಾಗಿರುವಂತೆ ನೋಡಿಕೊಳ್ಳುತ್ತದೆ. ​

ಕಪ್ಪು ಕಲೆ ಹೋಗಲಾಡಿಸುತ್ತದೆ

 NIH-ಸೂಚ್ಯಂಕಿತ ಜರ್ನಲ್‌ನಲ್ಲಿ  ಪ್ರಕಟವಾದ ವರದಿ ಪ್ರಕಾರ ಅಕ್ಕಿ ನೀರು ದೇಹದಲ್ಲಿ ಉತ್ಪಾದನೆಯಾಗುವ ಮೆಲಾನಿನ್​  ಅಂಶವನ್ನು ನಿರ್ಬಂಧಿಸುತ್ತದೆ. ಇದು ಮುಖದ ಮೇಲೆ ಇರುವ ಕಪ್ಪು ಕಲೆಗಳನ್ನು ಹೋಗಾಡಿಸಿ, ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ. 

ತುರಿಕೆ ತಡೆಯುವ ಅಕ್ಕಿ ನೀರು

ಅಕ್ಕಿಯ ನೀರಿನಲ್ಲಿ ಅಲಂಟೋಯಿನ್​ ಎಂಬುವ ಅಂಶವಿದೆ. ಇದು ತುರಿಕೆ, ಚರ್ಮದ ಮೇಲೆ ಪದೆ ಪದೇಯಾಗುವ ಕಿರಿಕಿರಿ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ಮೊಡವೆ ಅಥವಾ ಕಂಪಾಗುವಿಕೆಯಿಂದ ಬಳಲುತ್ತಿದ್ದವರು ಅಕ್ಕಿ ನೀರನ್ನು ಬಳಕೆ ಮಾಡಬಹುದು.

ಚರ್ಮದ ಹಾನಿ ಸರಿಪಡಿಸುತ್ತದೆ

ಆಂಟಿಆಕ್ಸಿಡೆಂಟ್​ ಅಂಶ ಹೊಂದಿರುವ ಅಕ್ಕಿ ನೀರು ಚರ್ಮದಲ್ಲಿ ಕಾಲಜನ್​ ಉತ್ಪಾದನೆಯಾಗಲು ಸಹಾಯ ಮಾಡುತ್ತದೆ. ಇದು ಚರ್ಮದ ಹಾನಿಯನ್ನು ಸರಪಡಿಸಿ, ಮುಖವನ್ನು ಹೊಳಪಿನಿಮದ ಇರುವಂತೆ ನೋಡಿಕೊಳ್ಲುತ್ತದೆ. 

ಬಳಕೆ ಹೇಗೆ ಮಾಡಬೇಕು? 

ಗಮನಿಸಿ ಅಕ್ಕಿಯನ್ನು ತೊಳೆದ ನೀರು ಕುಡಿಯುತ್ತಿದ್ದೀರಿ ಎಂದರೆ ಒಂದೆರಡು ಬಾರಿ ಅದನ್ನು ತೊಳೆದು ಅದರಲ್ಲಿರುವ ಕಸವನ್ನು ಆಚೆ ಹಾಕಿ, ಆ ನತರ ಕೊನೆಯದಾಗಿ ತೊಳೆಯುವ ನೀರನ್ನು ಕುಡಿಯಲು ಇಟ್ಟುಕೊಳ್ಳಿ. ಇನ್ನು ಬೇಯಿಸಿದ ಅನ್ನದ ಗಂಜಿ ನೀರು ಹೇಗೆ ಬೇಕಾದರು ಕುಡಿಯಲು ಉತ್ತಮ ಇದು ಜೀರ್ಣಕ್ರಿಯೆ ಸುಗಮಗೊಳಿಸಲು ಸಹಾಯ ಮಾಡುತ್ತದೆ.
 ಯಾರು ಅಕ್ಕಿ ನೀರು ಕುಡಿಯಬಾರದು
 ಅಕ್ಕಿ ನೀರಿನಲ್ಲಿ ಅಲ್ಪ ಪ್ರಮಾಣದ ಆರ್ಸೆನಿಕ್ ಇರಬಹುದಾದ್ದರಿಂದ ಗರ್ಭಾವಸ್ಥೆಯಲ್ಲಿ ಇದನ್ನು ದೂರವಿಡುವುದು ಒಳಿತು. ಗರ್ಭಿಣಿಯರು ಕುಡಿಯಲೇ ಬೇಡಿ. ಶಿಶುಗಳು ಮತ್ತು ಸಣ್ಣ ಮಕ್ಕಳಿಗೆ ಇದು ಸೂಕ್ತವಲ್ಲ. ಇದರಲ್ಲಿ ಪಿಷ್ಟದ ಅಂಶ ಹೆಚ್ಚಿರುವುದರಿಂದ ರಕ್ತದ ಸಕ್ಕರೆಯ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಇದು ಸೂಕ್ತವಲ್ಲ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು, (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net