ಆರ್ಥಿಕ ಸ್ವಾವಲಂಬನೆಯಿಂದ ರಾಮರಾಜ್ಯ ನಿರ್ಮಾಣ : ವಿನ್ಸೆಂಟ್ ಕೊಯೆಲ್ಹೋ

society

ವಿಜಯವಾಣಿ ಸುದ್ದಿಜಾಲ ಬೈಂದೂರು

ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸ ಮುಂತಾದ ಅಮೂಲ್ಯವಾದ ತತ್ವಗಳ ಬುನಾದಿ ಆಧಾರದ ಮೇಲೆ ಸಹಕಾರಿ ಸಂಘಗಳು ಅಸ್ತಿತ್ವಕ್ಕೆ ಬಂದಿದ್ದು, ಗ್ರಾಮ, ಗ್ರಾಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಮೂಲಕ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಬೈಂದೂರು ಹೋಲಿಕ್ರಾಸ್ ಚರ್ಚ್ ಧರ್ಮಗುರು ವಿನ್ಸೆಂಟ್ ಕೊಯೆಲ್ಹೋ ಹೇಳಿದರು.

ಉಪ್ಪುಂದದಲ್ಲಿ ಶುಕ್ರವಾರ ಹೋಲಿಕ್ರಾಸ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಜಿಲ್ಲಾ ನಿರ್ದೇಶಕ ಮಂಜುನಾಥ್ ಎಸ್.ಕೆ. ಭದ್ರತಾ ಕೊಠಡಿ, ನಿವೃತ್ತ ಕಿರಿಯ ಆಯೋಗ ಅಧಿಕಾರಿ ವೆಂಕಟೇಶ ಪೂಜಾರಿ ವ್ಯವಹಾರ ವಿಭಾಗ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಡೇನಿಯಲ್ ನಜ್ರತ್ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಹೋಲಿಕ್ರಾಸ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಜ್ಯೋತಿ, ನಿವೃತ್ತ ಬ್ಯಾಂಕ್ ಅಧಿಕಾರಿ ರಘುರಾಮ ಶೆಟ್ಟಿ, ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ, ಹೋಲಿಕ್ರಾಸ್ ಚರ್ಚ್ ಉಪಾಧ್ಯಕ್ಷ ಸ್ಟೀಫನ್ ಡಯಾಸ್, ಕೋಟೇಶ್ವರ ಜಿಎಫ್‌ಜಿ ಕಾಲೇಜು ಸಹಾಯಕ ಪ್ರೊಫೆಸರ್ ಮನೋಹರ್ ಬಿ.ಉಪ್ಪುಂದ, ಸಂಸ್ಥೆ ಉಪಾಧ್ಯಕ್ಷ ವಿಲ್ಪ್ರೈಡ್ ಗೋಮ್ಸ್, ಸೌಹಾರ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ಕಟ್ಟಡ ಮಾಲೀಕ ಬಾಬು ಗಾಣಿಗ, ನಿರ್ದೇಶಕರು ಇದ್ದರು. ಸಂಸ್ಥೆಯ ಸಿಇಒ ವಿಲಿಯಂ ಗೋಮ್ಸ್ ಪ್ರಾಸ್ತಾವಿಸಿದರು. ಅಶ್ವಿನಿ ಸಂಘದ ವರದಿ ವಾಚಿಸಿದರು. ಸಂದ್ಯಾ ಸ್ವಾಗತಿಸಿದರು. ಅನುರಾಧಾ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು. ಪ್ರೆಸಿಲ್ಲಾ ಲೋಬೊ ವಂದಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಿರುವ ನಮ್ಮ ಅವಿಭಜಿತ ದ.ಕ. ಜಿಲ್ಲೆ ಸಹಕಾರ ಸಂಘಗಳು ದೇಶದಲ್ಲಿಯೇ ಹೆಸರು ಪಡೆದಿದೆ. ಸಹಕಾರಿ ರಂಗವು ನಂಬಿಕೆ ಆಧಾರದಲ್ಲಿ ನಿಂತಿದ್ದು, ಇದು ಕೇವಲ ಆರ್ಥಿಕ ನೀತಿ ಅನುಸರಿಸದೇ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗಿದೆ.
-ವಿನ್ಸೆಂಟ್ ಕೊಯೆಲ್ಹೋ ಬೈಂದೂರು ಹೋಲಿಕ್ರಾಸ್ ಚರ್ಚ್ ಧರ್ಮಗುರು

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…