18 ವರ್ಷ ತುಂಬುವುದು ಇಷ್ಟವಿಲ್ಲದೇ ತಾನು ಹೆತ್ತ ಮಗನನ್ನು ಭೀಕರವಾಗಿ ಕೊಂದ ತಾಯಿ; ವಿಚಾರಣೆಯಲ್ಲಿ ಬೆಳಕಿಗೆ ಬಂತು ಸ್ಫೋಟಕ ಅಂಶ

Crime Scene
Published on

ಯುಎಸ್​ಎ: ಆಘಾತಕಾರಿ ಘಟನೆಯೊಂದರಲ್ಲಿ ತಾಯಿಯೊಬ್ಬರು ತಾನು ಹೆತ್ತ ಮಗನನ್ನೇ ಬರ್ತ್​ಡೇಯ ಹಿಂದಿನ ದಿನವೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯು ಅಮೆರಿಕದ ಹಾಲೆಂಡ್​ನಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತಳನ್ನು ಕೇಟೀ ಲೀ (39) ಎಂದು ಗುರುತಿಸಲಾಗಿದ್ದು, ಮೃತನನ್ನು ಆಸ್ಟಿನ್ ಡೀನ್ ಪಿಕಾರ್ಟ್ (17) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Accused Katie

ಘಟನೆ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು, ತನ್ನ ಜೀವನವನ್ನು ತಾನೇ ಕೊನೆಗೊಳಿಸಲು ಪುತ್ರ ಬಯಸಿದ್ದ ಎಂದು ಮಹಿಳೆ ಕೋರ್ಟ್​ನಲ್ಲಿ ಹೇಳಿದ್ದು, ಘಟನೆ ನಡೆದಾಗ ಆಕೆ ರಕ್ತಸಿಕ್ತ ಚಾಕುವನ್ನು ಹಿಡಿದುಕೊಂಡು ಅಪಾರ್ಟ್​ಮೆಂಟ್​ನಲ್ಲಿ ನಿಂತಿದ್ದಳು.

ಸಾಯುವುದಕ್ಕಾಗಿ ನಾನು ಮತ್ತು ಮಗ ಇಬ್ಬರೂ ಅತಿಯಾಗಿ ಮಾತ್ರೆ ಸೇವಿಸಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ. ದೂರಿನ ಪ್ರಕಾರ, ಮಗ ಪ್ರಜ್ಞೆ ತಪ್ಪಿದ್ದಾಗ ಚಾಕುವಿನಿಂದ ಆತನ ಗಂಟಲು ಮತ್ತು ತೋಳಿನ ಭಾಗವನ್ನು ಚಾಕುವಿನಿಂದ ಆಕೆ ಕೊಯ್ದಿದ್ದಾಗಿ ಹೇಳಿದ್ದಾರೆ. ನಾನು ನನ್ನ ಮಗನ ಜೊತೆ ಇರಬೇಕು. ನನ್ನನ್ನೂ ಕೊಂದುಬಿಡಿ ಎಂದು ಆರೋಪಿ ಕೋರ್ಟ್​ನಲ್ಲಿ ಹೇಳಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net