

ಕೊಕ್ಕರ್ಣೆ: ಶ್ರೀಕ್ಷೇತ್ರ ಹೊಳೆಬಾಗಿಲು ಸಪರಿವಾರ ವೀರಭದ್ರ ಅಬ್ಬಕ್ಕ-ದಾರಕ್ಕ ದೇವಸ್ಥಾನ ಹಾಗೂ ಸಪರಿವಾರ ಬ್ರಹ್ಮಬೈದರ್ಕಳ- ಶಿವರಾಯ ಗರೋಡಿಯಲ್ಲಿ ಏ.9ರಿಂದ 11ರವರೆಗೆ ಪ್ರಥಮ ವರ್ಷದ ವರ್ಧಂತ್ಯುತ್ಸವ ಜರುಗಲಿದೆ. 9ರಂದು ಬೆಳಗ್ಗೆ ಶ್ರೀ ನಾಗ ಬ್ರಹ್ಮ ಸನ್ನಿಧಿಯಲ್ಲಿ ನವಕ ಕಲಶ ಪ್ರಧಾನಹೋಮ, ಶ್ರೀ ವೀರಭದ್ರ ಅಬ್ಬಕ್ಕ ದಾರಕ್ಕ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶ, ಅಧಿವಾಸ ಹೋಮ, ಚಿಕ್ಕಮ್ಮ ಮತ್ತು ಜಯಂತ ಸನ್ನಿಧಿಯಲ್ಲಿ ನವಕ ಕಲಶ ಪ್ರಧಾನಹೋಮ, ಮಹಾಮಂಗಳಾರತಿ ನಡೆಯಲಿದೆ.
10ರಂದು ಬೆಳಗ್ಗೆ ಸಪರಿವಾರ ಬ್ರಹ್ಮಬೈದರ್ಕಳ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶ ಅಧಿವಾಸ ಹೋಮ, ಶಿವರಾಯ ಸನ್ನಿಧಿಯಲ್ಲಿ ನವಕ ಕಲಶ ಪ್ರಧಾನಹೋಮ, ಮಹಾಮಂಗಳಾರತಿ, ರಾತ್ರಿ ಶ್ರೀ ವೀರಭದ್ರ ಅಬ್ಬಕ್ಕ ದಾರಕ್ಕ ಪರಿವಾರ ದೇವತೆಗಳ ಪೂಜೆ, ನಾಗದೇವರ ಸಂದರ್ಶನ, ಮಹಾಮಂಗಳಾರತಿ, ಅಬ್ಬಕ್ಕ ದಾರಕ್ಕ ಮತ್ತು ಪರಿವಾರ ದೇವತೆಗಳ ಸಂದರ್ಶನದೊಂದಿಗೆ ಗೆಂಡಸೇವೆ, ರಂಗಪೂಜೆ, ಪ್ರಸಾದ ವಿತರಣೆ, ಶ್ರೀ ಬ್ರಹ್ಮ ದೇವರಿಗೆ ಮಹಾಮಂಗಳಾರತಿ, ಪರಿವಾರ ದೇವತೆಗಳ ಸಂದರ್ಶನ, ಅನ್ನಸಂತರ್ಪಣೆ ನೆರವೇರಲಿದೆ. 11ರಂದು ಬೆಳಗ್ಗೆ ಶ್ರೀ ವೀರಭದ್ರ ಅಬ್ಬಕ್ಕ ದಾರಕ್ಕನಿಗೆ ಮಹಾಮಂಗಳಾರತಿ, ನಂದಿಕೇಶ್ವರ ಸಂದರ್ಶನದೊಂದಿಗೆ ಡಮರು ಸೇವೆ, ಅಬ್ಬಕ್ಕ ದಾರಕ್ಕ ಮತ್ತು ಚಿಕ್ಕು ಸಂದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.