

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನಚಕಮಕಿ ನಡೆದಿದ್ದು, ಅದರಲ್ಲಿ ಓರ್ವ ಉಗ್ರ ಸತ್ತಿದ್ದು, ಇನ್ನೊಬ್ಬಾತ ಶರಣಾಗಿದ್ದಾನೆ. ಈ ಇಬ್ಬರೂ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಉಗ್ರರು ಅಡಗಿದ್ದ ಖಚಿತ ಮಾಹಿತಿ ಮೇರೆಗೆ ಇಂದು ರಕ್ಷಣಾ ಪಡೆಗಳು ನೂರ್ಪುರಾ, ಆವಂತಿಪುರಾ ಮತ್ತು ಪುಲ್ವಾಮಾದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಭದ್ರತಾ ಪಡೆ ಸಿಬ್ಬಂದಿಯ ದಾಳಿಗೆ ಒಬ್ಬ ಮೃತಪಟ್ಟಿದ್ದು, ಇನ್ನೊಬ್ಬ ಶರಣಾಗಿದ್ದಾನೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಶ್ರೀನಗರ ಬೇಸ್ನ ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದ್ದಾರೆ.
ಮೃತ ಉಗ್ರನ ಪರಿಚಯ ಸಿಕ್ಕಿಲ್ಲ. ಶರಣಾದವನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)