

ಮಂಗಳೂರು: ಇತಿಹಾಸ ಅಧ್ಯಯನವು ಮಾನವೀಯ ಮೌಲ್ಯಗಳ ಅಭ್ಯುದಯಕ್ಕೆ ಅಡಿಗಲ್ಲು. ಪ್ರಾಚೀನತೆಯ ತಿಳುವಳಿಕೆ ಭವಿಷ್ಯದಲ್ಲಿ ಸಂಸ್ಕಾರಯುಕ್ತ ಬದುಕಿನ ಅನುಷ್ಠಾನಕ್ಕೆ ಪೂರಕವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ ಅಧ್ಯಯನ ಅತ್ಯಗತ್ಯ ಎಂದು ದ.ಕ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಡಿ.ಜಯಣ್ಣ ಹೇಳಿದರು.
ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಸಂಘ ಹಾಗೂ ದ.ಕ. ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಂಟಿ ಆಶ್ರಯದಲ್ಲಿ ಮಂಗಳೂರಿನ ಬಿ.ಇ.ಎಂ ಕಾಲೇಜಿನಲ್ಲಿ ಗುರುವಾರ ನಡೆದ ಇತಿಹಾಸ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಲು ಅವಶ್ಯಕವಾದ ವಿದ್ಯೆಯು ಇತಿಹಾಸದಿಂದ ದೊರಕುತ್ತದೆ. ದ.ಕ. ಜಿಲ್ಲೆಯು ಪಿಯು ಲಿತಾಂಶದಲ್ಲಿ ನಿರಂತರವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತಿದೆ. ಈ ವರ್ಷವೂ ಸರ್ವ ಉಪನ್ಯಾಸಕರ ಬೆಂಬಲದಿಂದ ಮತ್ತು ಕಠಿಣ ಪರಿಶ್ರಮದಿಂದ ಜಿಲ್ಲೆಯು ಶೇ. 100 ಲಿತಾಂಶ ಪಡೆಯುವಂತಾಗಬೇಕು ಎಂದರು.
ಬಿಇಎಂ ವಿದ್ಯಾಸಂಸ್ಥೆಯ ಸಂಚಾಲಕ ಮನೋಜ್ ಕಾರ್ಯಾಗಾರ ಉದ್ಘಾಟಿಸಿದರು. ದ.ಕ. ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ, ಬಿಇಎಂ ಕಾಲೇಜಿನ ಪ್ರಾಂಶುಪಾಲರಾದ ಅಪರ್ಣಾ ಪ್ರವೀಣ್ ಚಂದ್ರ, ದ.ಕ.ಜಿಲ್ಲಾ ಪ.ಪೂ ಇತಿಹಾಸ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಸನ್ನ ಎನ್.ಎಚ್, ಕಾರ್ಯದರ್ಶಿ ಐತ್ತಪ್ಪ ಯು., ಉಪಾಧ್ಯಕ್ಷೆ ಪೂರ್ಣಿಮಾ ಕಾಮತ್, ಕೋಶಾಕಾರಿ ಗಾಯತ್ರಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಮನಮೋಹನ ಉಪಸ್ಥಿತರಿದ್ದರು.
ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ರಘರಾಜ್ ಕದ್ರಿ, ೆಬ್ರವರಿಯಲ್ಲಿ ನಿವೃತ್ತರಾಗಲಿರುವ ಸಂಘದ ಉಪಾಧ್ಯಕ್ಷೆ ಪೂರ್ಣಿಮಾ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಇತಿಹಾಸ ಉಪನ್ಯಾಸಕ ಧರ್ಮಪಾಲ ಗೌಡ ಕಾರ್ಯಕ್ರಮ ನಿರೂಪಿಸಿದರು. ದ.ಕ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
------------------
ಕರಾವಳಿ ಪ್ರದೇಶದಲ್ಲಿ ಇತಿಹಾಸದ ಬಗೆಗೆ ಹೆಚ್ಚು ಆಸಕ್ತಿ ವಹಿಸುವವರನ್ನು ಕಾಣಬಹುದು. ಇದರ ಫಲವಾಗಿಯೇ ಇಲ್ಲಿ ಹಲವಾರು ಇತಿಹಾಸ ಅಧ್ಯಯನ ಕೇಂದ್ರಗಳು ಕಾಣಸಿಗುತ್ತದೆ. ಇತಿಹಾಸಕಾರರು, ಶಿಕ್ಷಕರು ಹಿಂದಿನ ಕಾಲದ ಕುರುಹುಗಳನ್ನು ನಿರ್ಲಕ್ಷಿಸಬಾರದು ಬದಲಾಗಿ ಉಳಿದುಕೊಂಡಿರುವ ಕುರುಹುಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ರಾಯಭಾರಿಗಳಾಗಬೇಕು.
ಮನೋಜ್, ಸಂಚಾಲಕರು
ಬಿಇಎಂ ವಿದ್ಯಾಸಂಸ್ಥೆ ಮಂಗಳೂರು