ಹಿರಾ ಶಿಕ್ಷಣ ಸಂಸ್ಥೆ ರಜತ ಮಹೋತ್ಸವ ಲೋಗೋ ಬಿಡುಗಡೆ

New Project (29)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಶಾಂತಿ ಎಜುಕೇಶಲ್ ಟ್ರಸ್ಟ್ ಅಧೀನದ ಬಬ್ಬುಕಟ್ಟೆ ಹಿರಾ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಪ್ರಯುಕ್ತ ವರ್ಷವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲೋಗೋ ಬಿಡುಗಡೆಗೊಳಿಸಲಾಯಿತು.

ರಜತ ಮಹೋತ್ಸವ ಸಂಚಾಲಕ ಕೆ.ಎಂ.ಅಶ್ರಫ್ ವಾತನಾಡಿ, 2000ರಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ ಮನೆಯಲ್ಲಿದ್ದ 20 ವಿದ್ಯಾರ್ಥಿನಿಯರ ದಾಖಲಾತಿಯೊಂದಿಗೆ ಕಲಾ ಮತ್ತು ವಾಣಿಜ್ಯ ವಿಭಾಗ ಆರಂಭಗೊಂಡ ಹಿರಾ ಶಿಕ್ಷಣ ಸಂಸ್ಥೆ 2004ರಲ್ಲಿ ಪ್ರೌಢಶಾಲೆ, 2006ರಲ್ಲಿ ಪದವಿಪೂರ್ವ ಕಾಲೇಜು, 2015ರಲ್ಲಿ ಬಾಲಕ- ಬಾಲಕಿಯರ ಕಿಡ್ಸ್ ಶಾಲೆ ಹಾಗೂ 2016ರಲ್ಲಿ ಸಂಯುಕ್ತ ಪದವಿಪೂರ್ವ ಪಿ.ಯು. ಕಾಲೇಜು ಸ್ಥಾಪಿಸಲಾಗಿದ್ದು, 2021ರಲ್ಲಿ ನರ್ಸರಿಯಿಂದ ಕಾಲೇಜಿನವರೆಗೆ ಹುಡುಗಿಯರಿಗೆ ಸಮಗ್ರ ಶಿಕ್ಷಣ ಒದಗಿಸುವ ಟ್ರಸ್ಟ್ ಗುರಿ ಈಡೇರಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಎ.ಎಚ್.ಮಹ್ಮೂದ್ ಲೋಗೋ ಅನಾವರಣಗೊಳಿಸಿದರು. ಸ್ಥಾಪಕಾಧ್ಯಕ್ಷ ಕೆ.ಎಂ.ಶರೀಫ್, ಪದವಿ ಕಾಲೇಜಿನ ಪ್ರಾಂಶುಪಾಲೆ ಆಯಿಶ್ ಅಸ್ಮೂನ್, ಶಾಲಾ ಸಂಚಾಲಕ ಅಬ್ದುಲ್ ರಹಿವಾನ್, ಕಾಲೇಜಿನ ಸಂಚಾಲಕ ರಹ್ಮತುಲ್ಲಾ, ಪ್ರೌಢಶಾಲಾ ಶಿಕ್ಷಕ- ರಕ್ಷಕ ಸಂದ ಅಧ್ಯಕ್ಷ ಅಹ್ಮದ್ ಶರೀಫ್, ಪದವಿಪೂರ್ವ ಕಾಲೇಜು ಶಿಕ್ಷಕ- ರಕ್ಷಕ ಸಂದ ಅಧ್ಯಕ್ಷ ಸಿದ್ಧಿಕ್ ತಲಪಾಡಿ, ಪದವಿ ಕಾಲೇಜಿನ ಶಿಕ್ಷಕ- ರಕ್ಷಕ ಸಂದ ಅಧ್ಯಕ್ಷೆ ಜಾಸ್ಮಿನ್, ಸಂಸ್ಥೆಯ ಆಡಳಿತಾಧಿಕಾರಿ ರಝಾಕೀರ್ ಹುಸೇನ್ ಮೊದಲಾದವರಿದ್ದರು.

ಪಿಯು ಕಾಲೇಜಿನ ಮುಖ್ಯಸ್ಥೆ ಫಾತಿವಾ ಮೆಹರೂಬ್ ನಿರೂಪಿಸಿದರು. ಮುಖ್ಯಶಿಕ್ಷಕಿ ಮಂಜುಳಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net