

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಕೋಟೆ ಮುಂಭಾಗದ ಟ್ಯಾಕ್ಸಿ ಸ್ಟ್ಯಾಂಡ್ ದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದು ಮಹಾಗಣಪತಿ ವಿಸರ್ಜನೆ ಮತ್ತು ಬೃಹತ್ ಶೋಭಾಯಾತ್ರೆ ಇಂದು ಸೋಮವಾರ ಜರುಗಲಿದೆ ಎಂದು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ನಾಗೇಂದ್ರ ಕಬಾಡೆ ಮತ್ತು ಉತ್ಸವ ಸಮಿತಿ ಅಧ್ಯಕ್ಷೆರಾದ ಸಂಜೀವ ಗುಪ್ತಾ ತಿಳಿಸಿದರು.
ಬೆಳಗ್ಗೆ ೯ ಗಂಟೆಗೆ ಕೋಟೆಯ ಮುಂಭಾಗದಿAದ ಶುರುವಾಗುವ ಮೆರವಣಿಗೆ ನೇರವಾಗಿ ನೆಹರು ಗಂಜ್ಗೆ ತೆರಳಲಿದೆ. ಅಲ್ಲಿಂದ ಬೃಹತ್ ಶೋಭಾ ಯಾತ್ರೆಯ ಮೂಲಕ ಹುಮನಾಬಾದ ಬೇಸ್, ಕಪ್ಪಡ್ ಬಜಾರ, ಚೌಕ್ ವೃತ್ತ, ಸೂಪರ್ ಮಾರ್ಕೇಟ್ , ಜಗತ್ ವೃತ್ತ, ಜಿಲ್ಲಾ ವಿಜ್ಞಾನ ಕೇಂದ್ರ ಮುಂಭಾಗದಲ್ಲಿ ಹಾದು ಐತಿಹಾಸಿಕ ಅಪ್ಪನ ಕೆರೆಗೆ ಆಗಮಿಸಿ ಗಣೇಶ ವಿಗ್ರಹ ವಿಸರ್ಜಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.೧೯ ರಂದು ಹಿಂದು ಮಹಾಗಣಪತಿಯ ಪ್ರತಿಷ್ಠಾಪನೆ ಮಾಡಲಾಗಿತ್ತು. ೨೧ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಿವೆ. ಸೋಮವಾರ ಸಂಪ್ರದಾಯಿಕ ವಾದ್ಯಗಳು, ಭಜನೆ ಮೊದಲಾದವನ್ನು ಮಾಡುತ್ತಾ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯ್ಲಲಿ ಸುರೇಶ ಟೆಂಗಳಿ, ಸಿದ್ದರಾಜ ಬಿರಾದಾರ, ರವೀಂದ್ರ ಮುತ್ತಿನ, ಶ್ರೀಶೈಲ ಮೂಲಗೆ ಇದ್ದರು.