ಧರ್ಮಾಚರಣೆಯಿಂದ ರಾಷ್ಟ್ರ ಉನ್ನತಿ : ಗುರುಪ್ರಸಾದ ಗೌಡ ಅನಿಸಿಕೆ

12
Published on

ಬೆಳ್ತಂಗಡಿ: ಹಿಂದು ಎನ್ನುವುದು ಜಾತಿಯಲ್ಲ, ಅದೊಂದು ಆದರ್ಶ ವ್ಯಕ್ತಿತ್ವ. ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕನಾಗುವವನೇ ಹಿಂದು. ಧರ್ಮ ಶಿಕ್ಷಣ ಕೊರತೆಯಿಂದಾಗಿ ಹಿಂದು ಸಮಾಜ ಪಾಶ್ಚಿಮಾತ್ಯ ಸಂಸ್ಕೃತಿ ಅಂಧಾನುಕರಣೆ ಮಾಡುತ್ತಿದ್ದು, ಇದು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದೆ ಎಂದು ಹಿಂದು ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ ಗೌಡ ಹೇಳಿದರು.

ವೇಣೂರಿನ ಗೋಳಿಯಂಗಡಿಯಲ್ಲಿ ಸ್ಥಳೀಯ ಧರ್ಮಪ್ರೇಮಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಹಿಂದು ಜನಜಾಗೃತಿ ಸಮಿತಿ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇಣೂರಿನ ಹರೀಶ ಶೆಟ್ಟಿ, ಸೋಮನಾಥ, ಸಂದೀಪ, ಸೀತಾರಾಮ ಆಚಾರ್ಯ, ಲಕ್ಷ್ಮಣ, 400ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net