ಬೆಂಗಳೂರು: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಹಿಂದುಗಳ ಪಾಲ್ಗೊಂಡಿದ್ದರು.
ಭಾರತದ ಭಾಗವೇ ಆಗಿದ್ದ ಇಂದಿನ ಬಾಂಗ್ಲಾ ದೇಶವು ಅದೇ ನೆಲದ ಮೂಲ ನಿವಾಸಿಗಳಾದ ಹಿಂದುಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಬಾಂಗ್ಲಾದಲ್ಲಿ ತಲೆದೋರಿದ ರಾಜಕೀಯ ಬಿಕ್ಕಟ್ಟಿನಿಂದ ಚುನಾಯಿತ ಪ್ರಧಾನಿ ಶೇಕ್ ಹಸೀನಾ ದೇಶ ತೊರೆದ ನಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಂಡಿರುವ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಹಿಂದುಗಳ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ಖಂಡನೆ ವ್ಯಕ್ತಪಡಿಸಿದ ಹೋರಾಟಗಾರರು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಲವಾಗಿರುವ ಮೊಹಮ್ಮದ್ ಅವರಿಂದ ನೊಬೆಲ್ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಹಿಂದು ಜಾಗರಣಾ ವೇದಿಕೆ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ದೇಶದಲ್ಲಿ ಸಣ್ಣ ಘಟನೆ ನಡೆದರೂ ಬೀದಿಗಿಳಿದು ಹೋರಾಟ ಮಾಡುವ ಮಾನವ ಹಕ್ಕುಗಳ ಕಾರ್ಯಕರ್ತರು, ಸೋ ಕಾಲ್ಡ್ ಬುದ್ದಿಜೀವಿಗಳು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅರ್ಬನ್ ನಕ್ಸಲ್‌ಗಳಾದ ಕಮ್ಯುನಿಷ್ಟರು ದೇಶ, ಧರ್ಮದ ಬಗ್ಗೆ ಬೇಡ ತಾವು ನಂಬಿರುವ ತತ್ವಸಿದ್ಧಾಂತಕ್ಕೂ ದ್ರೋಹ ಮಾಡುತ್ತಿದ್ದಾರೆ. ತನ್ನ ದೇಶದ ಮೇಲೆ ಆಕ್ರಮಣಕ್ಕೆ ಬಂದವರ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರ ವಿರುದ್ಧ ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಾರೆ. ದೇಶಕ್ಕೆ ಬಾಂಬ್ ಹಾಕುವವರ ಬಗ್ಗೆ ಇವರಿಗಿರುವ ಕನಿಕರ, ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವ ಹಿಂದುಗಳ ಮೇಲೆ ಏಕಿಲ್ಲ ಎಂದು ಪ್ರಶ್ನಿಸಿದರು. ಕನ್ನಡಪರ ಸಂಘಟನೆಗಳು ಭಾಷೆ ಹೆಸರಲ್ಲಿ ವಿಭಾಗಿಸುವುದನ್ನು ಬದಿಗಿಟ್ಟು ನಮ್ಮ ಹೋರಾಟವನ್ನು ಬೆಂಬಲಿಸಬೇಕು. ಪೊಲೀಸರು ಖಾಕಿಯನ್ನು ಮರೆತು ಹುಟ್ಟಿದ ದೇಶ, ಧರ್ಮಕ್ಕಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಹಿಂದು ಸಂಘಟನೆಗಳ ಒತ್ತಾಯವನ್ನ ತಲುಪಿಸುವ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಹಿಂದು ಕಾರ್ಯಕರ್ತರು ಪ್ರತಿಯೊಬ್ಬರ ಭಾಷಣದ ನಡುವೆಯೂ ೋಷಣೆಗಳನ್ನು ಕೂಗಿ ಬೆಂಬಲ ವ್ಯಕ್ತಪಡಿಸಿದರು. ಬಾಂಗ್ಲಾದೇಶದ ಧ್ವಜವನ್ನು ಸುಟ್ಟು ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ಬಿಜೆಪಿ ಮುಖಂಡರಾದ ನೆ.ಲ.ನರೇಂದ್ರಬಾಬು, ಸಪ್ತಗಿರಿ ಗೌಡ ಮತ್ತಿತರರು ಪಾಲ್ಗೊಂಡಿದ್ದರು.
ಬಾಂಗ್ಲಾದ ಬಡಮಕ್ಕಳಿಗೆ ಅನ್ನಕೊಟ್ಟ ಇಸ್ಕಾನ್ ಸಂಸ್ಥೆಗೆ ತೀವ್ರವಾದಿ ಪಟ್ಟ ಕಟ್ಟಿದ್ದಾರೆ. ನಮ್ಮ ಅಸ ಅನ್ನ, ಸಂಕೀರ್ತನೆ, ಶಾಂತಿಯೇ ಹೊರತು ಬಾಂಬು, ಗನ್ ಅಲ್ಲ. ಹಾಗಿದ್ದು ಇಸ್ಕಾನ್ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಓರ್ವ ಹಿಂದು ಕಾರ್ಯಕರ್ತನನ್ನು ಬಂಧಿಸಿದ್ದಕ್ಕೆ ಎಲ್ಲೆಡೆ ಹಿಂದುಗಳು ಒಗ್ಗಟ್ಟಾಗಿ ಹೋರಾಟಕ್ಕಿಳಿದಿದ್ದಾರೆ. ಸನಾತನ ಧರ್ಮ ವಸುದೈವ ಕುಟುಂಬಕಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದೆ. ಹಿಂದುಗಳು ಶಾಂತಿಪ್ರಿಯರು. ಆದರೆ ಹಿಂದುಗಳ ಮೇಲೆ ದೌರ್ಜನ್ಯವಾದಾಗ ಅದನ್ನು ಎದುರಿಸುವುದು ಗೊತ್ತಿದೆ. ಹಿಂದುಗಳ ನಿಜವಾದ ಅಸ ಸಂಘಟನೆ.
–ಶ್ರೀಚೈತನ್ಯದಾಸ್, ಇಸ್ಕಾನ್ ಸಾಧಕರು