ಹಿಂದೂ ಹುಡುಗಿಯರು ಮನೆಯಲ್ಲಿಯೇ ಯೋಗ ಮಾಡಬೇಕು; ಜಿಮ್​ಗೆ ಹೋಗಬಾರದು: ಬಿಜೆಪಿ ಶಾಸಕ| Maharastra

ವಿಜಯವಾಣಿ (56)
Published on

Mumbai: ಹಿಂದೂ ಹುಡುಗಿಯರು ಮನೆಯಲ್ಲಿಯೇ ಯೋಗ ಮಾಡಬೇಕು, ಹೊರಗಡೆ ಜಿಮ್​ಗೆ ಹೋಗಬಾರದು ಎಂದು ಶುಕ್ರವಾರ(ಅ. 17) ಮಹಾರಾಷ್ಟ್ರದ(Maharastra) ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್ ಸಲಹೆ ನೀಡಿದ್ದಾರೆ.

ಬೀಡ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಲೇಜಿಗೆ ಹೋಗುವ ಹಿಂದೂ ಹುಡುಗಿಯರು ಜಿಮ್‌ಗೆ ಹೋಗಬೇಡಿ, ಬದಲಿಗೆ ಮನೆಯಲ್ಲಿಯೇ ಯೋಗಾಭ್ಯಾಸ ಮಾಡಿ ಎಂದು ಸಲಹೆ ನೀಡಿದರು. ಯಾಕಂದರೆ ಜಿಮ್​ಗಳಲ್ಲಿ ಒಂದು ಪಿತೂರಿ ನಡೆಯುತ್ತಿದೆ. ನಮ್ಮ ಹುಡುಗಿಯರಿಗೆ ಯಾರನ್ನು ನಂಬಬೇಕೆಂದು  ತಿಳಿದಿಲ್ಲ ಎಂದು ಹೇಳಿದ್ದಾರೆ.

ಒಂದು ದೊಡ್ಡ ಪಿತೂರಿ ನಡೆಯುತ್ತಿದೆ, ಅದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ತುಂಬಾ ಒಳ್ಳೆಯವರು ಅಥವಾ ಚೆನ್ನಾಗಿ ಮಾತನಾಡುವವರಿಂದ ಮೋಸ ಹೋಗಬೇಡಿ. ಜಿಮ್‌ನಲ್ಲಿ ತಮ್ಮ ತರಬೇತುದಾರ ಯಾರು ಎಂಬುದರ ಬಗ್ಗೆ ಗಮನ ಹರಿಸಬೇಕು. ಮನೆಯಲ್ಲಿ ಚಿಕ್ಕ ಹುಡುಗಿಯರು ಜಿಮ್‌ಗೆ ಹೋದರೆ, ಅವರಿಗೆ ಸಲಹೆ ನೀಡಬೇಕು. ಹುಡುಗಿಯರು ಮನೆಯಲ್ಲಿ ಯೋಗಾಭ್ಯಾಸ ಮಾಡಬೇಕು ಮತ್ತು ಜಿಮ್‌ಗೆ ಹೋಗುವ ಅಗತ್ಯವಿಲ್ಲ ಎಂದಿದ್ದಾರೆ.

ಗುರುತಿನ ವಿವರಗಳಿಲ್ಲದೆ ಕಾಲೇಜುಗಳಿಗೆ ಭೇಟಿ ನೀಡುವ ಯುವಕರನ್ನು ಗುರುತಿಸಬೇಕು. ಮತ್ತು ಒಳಗೆ ಪ್ರವೇಶಿಸದಂತೆ ನಿರ್ಬಂಧಿಸಬೇಕು. ಇನ್ನೊಂದು ಸಮುದಾಯದ ಸದಸ್ಯರು ಹಿಂದೂ ಮಹಿಳೆಯರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net