ಎಸ್.ಆರ್. ಕಾಲೇಜಿನಲ್ಲಿ ಹಿಂದಿ ದಿವಸ್ ಕಾರ್ಯಕ್ರಮ

hindi
ಎಸ್.ಆರ್. ಕಾಲೇಜಿನಲ್ಲಿ ನಡೆದ ಹಿಂದಿ ದಿವಸ್ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲೆ, ಸಾಹಿತಿ ಡಾ.ಮಾಧವಿ ಎಸ್.ಭಂಡಾರಿ ಉದ್ಘಾಟಿಸಿದರು
Published on

ಹೆಬ್ರಿ: ಉನ್ನತ ಶಿಕ್ಷಣದಲ್ಲಿ ಐಚ್ಚಿಕ ವಿಷಯಗಳ ಜತೆಗೆ ಭಾಷಾ ವಿಷಯಗಳಿಗೂ ಒತ್ತು ನೀಡುವುದರಿಂದ ಭಾಷೆಗಳ ಬೆಳವಣಿಗೆಗೆ ಸಹಕಾರಿ. ಸರಸ್ವತಿ ಖಜಾನೆ ಬಳಸಿದಷ್ಟು ಖಾಲಿ ಆಗದೆ ಜ್ಞಾನ ಭಂಡಾರ ಹೆಚ್ಚುತ್ತದೆ. ಅಂತೆಯೆ ಹಿಂದಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನಾಭಿವೃದ್ಧಿ ಆಗುತ್ತದೆಎಂದು ನಿವೃತ್ತ ಪ್ರಾಂಶುಪಾಲೆ, ಸಾಹಿತಿ ಡಾ.ಮಾಧವಿ ಎಸ್.ಭಂಡಾರಿ ನುಡಿದರು.

ಎಸ್.ಆರ್. ಕಾಲೇಜಿನಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಸ್.ಆರ್. ಪಪೂ ಕಾಲೇಜು ಪ್ರಾಂಶುಪಾಲ ಪ್ರಶಾಂತ್, ಎಸ್.ಆರ್. ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಭಗವತಿ, ಎಸ್.ಆರ್. ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ಗೋಪಾಲ್ ಆಚಾರ್ಯ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ವನಿತಾ ತೋಳಾರ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸೃಷ್ಟಿ ಶೆಟ್ಟಿ ನಿರೂಪಿಸಿದರು. ಪೃಥ್ವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net