

ರಾಂಚಿ: ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಬುಡಕಟ್ಟು ಜನಸಂಖ್ಯೆಯು ಕಡಿಮೆಯಾಗುತ್ತಿದೆ ಎಂದು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಬಿಜೆಪಿ ಸಹ-ಪ್ರಭಾರಿ ಹಿಮಂತ ಬಿಸ್ವಾ ಶರ್ಮಾ(Himanta Biswa sarma) ಸೋಮವಾರ(ಅಕ್ಟೋಬರ್ 28) ರಾಜ್ಯ ಸರ್ಕಾರ ವಿರುದ್ಧ ಆರೋಪಿಸಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಲು ಒಳನುಸುಳುವಿಕೆಯೇ ಕಾರಣ. ಹಾಗಾಗಿ ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿಯಾಗಲಿದೆ ಎಂದು ಹೇಳಿದರು.
ನಾನು ನುಸುಳುಕೋರರ ವಿರುದ್ಧ ಬೆಂಕಿ ಹೊತ್ತಿಸಿದ್ದೇನೆ. ಭಗವಾನ್ ಹನುಮಂತನು ಲಂಕಾದಲ್ಲಿಯೂ ಬೆಂಕಿ ಹಚ್ಚಿದ್ದನು. ನಾವು ನುಸುಳುಕೋರರ ವಿರುದ್ಧ ಬೆಂಕಿ ಹಚ್ಚಿ ಜಾರ್ಖಂಡ್ ಅನ್ನು ಚಿನ್ನದ ನಾಡು ಮಾಡಬೇಕು. ಸಂತಾಲ್ ಪರಗಣದಲ್ಲಿ ಬುಡಕಟ್ಟು ಜನಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಮುಸ್ಲಿಂ ಜನಸಂಖ್ಯೆಯು ಹೆಚ್ಚುತ್ತಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ಪ್ರತಿಯೊಬ್ಬ ಮುಸ್ಲಿಂನುಸುಳುಕೋರರಲ್ಲ. ಆದರೆ ಪ್ರತಿ 5 ವರ್ಷಗಳಿಗೊಮ್ಮೆ ಮುಸ್ಲಿಮರ ಜನಸಂಖ್ಯೆ ಹೇಗೆ ಹೆಚ್ಚುತ್ತಿದೆ. ಒಂದು ಕುಟುಂಬವು 10-12 ಮಕ್ಕಳಿಗೆ ಜನ್ಮ ನೀಡುತ್ತಿದೆಯೇ.. ಕುಟುಂಬವೊಂದರಲ್ಲಿ ಹೆಚ್ಚು ಮಕ್ಕಳಿಗೆ ಜನ್ಮ ನೀಡದಿದ್ದರೆ ಖಂಡಿತವಾಗಿಯೂ ಹೊರಗಿನಿಂದ ಜನರು ಬರುತ್ತಿದ್ದಾರೆ. ಇದು ಸರಳ ಗಣಿತ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ, ಆದರೆ ಸಂತಾಲ್ ಪರಗಣದಿಂದ ನುಸುಳುಕೋರರನ್ನು ಓಡಿಸುವುದು ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸುವುದು ನಮ್ಮ ಮುಖ್ಯ ಆದ್ಯತೆಯಾಗಿದೆ ಎಂದು ಹೇಳಿದರು.
ಜಾರ್ಖಂಡ್‌ನ ಬಿಜೆಪಿ ಸರ್ಕಾರವು ಸಂತಾಲ್ ಪರಗಣ ವಿಭಾಗದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನ್ನು ಜಾರಿಗೊಳಿಸಲಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ನುಸುಳುಕೋರರಿಗೆ ಮದರಸಾಗಳಲ್ಲಿ ತರಬೇತಿ ನೀಡಲಾಗುತ್ತದೆ ಮತ್ತು ಆಧಾರ್ ಕಾರ್ಡ್ ಮಾಡಲಾಗುತ್ತದೆ ಎಂದು ಬರೆದಿರುವ ಜಾರ್ಖಂಡ್ ಸರ್ಕಾರದ ಆಂತರಿಕ ಪತ್ರವನ್ನು ನೀವು ನೋಡಿದ್ದೀರಿ. ಅನೇಕ ವಿಷಯಗಳು ಹೊರಬರುತ್ತಿವೆ, ಈ ಚುನಾವಣೆಯ ನಂತರ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಮತ್ತು ನಾವು ಸಂತಾಲ್ ಪರಗಣದಲ್ಲಿ ಎನ್ಆರ್ಸಿಯನ್ನು ಜಾರಿಗೆ ತರುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆಯೂ ಎರಡು ಹಂತಗಳಲ್ಲಿ ನಡೆಯಲಿದೆ. ಒಟ್ಟು 81 ವಿಧಾನಸಭಾ ಸ್ಥಾನಗಳಿವೆ. ಮೊದಲ ಹಂತದಲ್ಲಿ 43 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ 38 ಸ್ಥಾನಗಳಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ಇದರ ಫಲಿತಾಂಶಗಳು ನವೆಂಬರ್ 23 ರಂದು ಬರುತ್ತವೆ. (ಏಜೆನ್ಸೀಸ್)