ಹಿಜಾಬ್​ ಇಸ್ಲಾಮ್​ನ ಅತ್ಯವಶ್ಯ ಧಾರ್ಮಿಕ ಆಚರಣೆಯಲ್ಲ; ಹೈಕೋರ್ಟ್​ಗೆ ಸರ್ಕಾರದ ಅರಿಕೆ

Hijab
ಹಿಜಾಬ್ ಧರಿಸಲು ಅವಕಾಶಕ್ಕೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ.
Published on

ಬೆಂಗಳೂರು: ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆ ಹೈಕೋರ್ಟ್​ನಲ್ಲಿ ಇಂದು ಕೂಡ ಮುಂದುವರಿದಿದ್ದು, ಹಿಜಾಬ್ ಇಸ್ಲಾಮ್​ನ ಅತ್ಯವಶ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಲಾಗಿದೆ. ಹಿಜಾಬ್ ವಿಷಯದ ಕುರಿತು ಹೈಕೋರ್ಟ್​ಗೆ ಸರ್ಕಾರ ಈ ರೀತಿ ಅರಿಕೆ ಮಾಡಿಕೊಂಡಿದೆ.

ಅಡ್ವೋಕೇಟ್ ಜನರಲ್​ ಪ್ರಭುಲಿಂಗ ನಾವಡಗಿ ಅವರು ಶುಕ್ರವಾರ ಹೈಕೋರ್ಟ್​ನಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುತ್ತ ಈ ಅಂಶವನ್ನು ಪ್ರತಿಪಾದಿಸಿದರು. ಹಿಜಾಬ್ ಇಸ್ಲಾಮ್​ನ ಅತ್ಯವಶ್ಯ ಧಾರ್ಮಿಕ ಆಚರಣೆಯಲ್ಲ. ಅದನ್ನು ತಡೆಯುವುದರಿಂದ ಭಾರತೀಯ ಸಂವಿಧಾನದ 25ನೇ ವಿಧಿಯ ಉಲ್ಲಂಘನೆ ಆಗುವುದಿಲ್ಲ ಎಂದು ಅವರು ವಾದಿಸಿದರು.

ಅರ್ಜಿದಾರರ ಮತ್ತು ಸರ್ಕಾರದ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿ ಜೆ.ಎಂ. ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ. ದೀಕ್ಷಿತ್ ಅವರನ್ನು ಒಳಗೊಂಡ ಹೈಕೋರ್ಟ್‌ನ ಪೂರ್ಣ ಪೀಠವು ಮುಂದಿನ ವಿಚಾರಣೆಯನ್ನು ಫೆ. 21ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net