ಮಂಡ್ಯದಲ್ಲಿ ಹೈಟೆಕ್​ ಸೆಕ್ಸ್​ ದಂಧೆ?-ವೈರಲ್​ ಆಡಿಯೋದಲ್ಲಿ ಮಹಿಳೆಯ ಹಸಿಬಿಸಿ ಮಾತುಗಳು...

Sex Maffia
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹೈಟೆಕ್​ ಸೆಕ್ಸ್​ ದಂಧೆ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಆಡಿಯೋವೊಂದು ವೈರಲ್​ ಆಗಿದೆ.

ಪಿಂಪ್​ಗಳಿಬ್ಬರು ಫೋನ್​​ನಲ್ಲಿ ಮಾತನಾಡಿರುವ ಸಂಭಾಷಣೆ ವೈರಲ್​ ಆಗಿದ್ದು, ಅದರಲ್ಲಿ ಓರ್ವ ಯುವಕ ಮತ್ತು ಮಹಿಳೆ ಬರೀ ಸೆಕ್ಸ್​, ಹಣ, ದಂಧೆ, ವ್ಯವಹಾರದ ಬಗ್ಗೆಯೇ ಮಾತನಾಡಿದ್ದನ್ನು ಕೇಳಬಹುದು. ಇವರಿಬ್ಬರೂ ಅಕ್ಕ-ತಮ್ಮ ಎಂದುಕೊಂಡು ಮಾತನಾಡಿದ್ದಾರೆ. ಈ ರೆಕಾರ್ಡ್​​ನಲ್ಲಿರುವ ಯುವಕ ಸೋಮಶೇಖರ್​​​ ಎಂಬುದು ಗೊತ್ತಾಗಿದೆ. ಈತ ಬೃಹತ್ ಗೋಲ್ಡ್ ದೋಖಾ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ. ಇದೀಗ ಸೆಕ್ಸ್​ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ. ಈ ಸಂಭಾಷಣೆ ಕೇಳಿದ ಪೊಲೀಸರೂ ಕೂಡ ತನಿಖೆ ಶುರು ಮಾಡಿದ್ದಾರೆ.

ತೋಟದ ಮನೆ, ಫಾರ್ಮ್​ಹೌಸ್​​​ಗಳಲ್ಲಿ ನಡೆಯುವ ಸೆಕ್ಸ್​ ಬಗ್ಗೆ, ವಿಡಿಯೋ, ಸಿಡಿ ಮಾರಾಟದ ಬಗ್ಗೆಯೂ ಇವರಿಬ್ಬರು ಮಾತನಾಡಿದ್ದಾರೆ. ಕೆಲವು ಡೀಲಿಂಗ್​ ಬಗ್ಗೆಯೂ ಮಾತನಾಡಿಕೊಂಡು, ಅದು ಎಲ್ಲ ಸರಿ ಆಗಿಬಿಟ್ಟರೆ ಕೈತುಂಬ ಹಣ ಎಂದು ಮಹಿಳೆ ಹೇಳುವುದನ್ನು ಕೇಳಬಹುದು. ಸೋಮಶೇಖರ್​, ಪೂಜಾ, ಶೈಲಾ, ರಂಜಿತಾ ಇನ್ನಿತರ ಹೆಸರುಗಳು ದಂಧೆಯಲ್ಲಿ ಕೇಳಿಬಂದಿವೆ.

ಸೀರೆಯುಟ್ಟು ಸೆಕ್ಸಿ ಫೋಟೋಶೂಟ್​ ಕೊಡುವವರು ಯಾರಾದರೂ ಇದ್ದರೆ ಹೇಳು ಎಂದು ಮಹಿಳೆ ಸೋಮಶೇಖರ್​ ಬಳಿ ಕೇಳಿದ್ದೂ ಆಡಿಯೋದಿಂದ ಬಹಿರಂಗವಾಗಿದೆ. ಇವರಿಬ್ಬರ ಸಂಭಾಷಣೆ ಕೇಳಿದರೆ ಮಂಡ್ಯದಿಂದ ದೇಶ, ವಿದೇಶದವರೆಗೆ ಈ ಸೆಕ್ಸ್​ ದಂಧೆಯ ಜಾಲ ಹಬ್ಬಿದೆಯಾ ಎಂಬ ಗುಮಾನಿ ಕಾಡುತ್ತಿದೆ.

ಇನ್ನು ಇವರಿಬ್ಬರು ಒಡವೆ ಅಡವಿಟ್ಟಿರುವ ಬಗ್ಗೆ, ಪಾರ್ಟಿ, ಮದುವೆ ಇನ್ನಿತರ ವಿಚಾರಗಳನ್ನೂ ಮಾತನಾಡಿದ್ದಾರೆ. ಮನೆಯಲ್ಲಿ ಸುಖ ಸಿಗದವರು ನಮ್ಮ ಬಳಿ ಬರುತ್ತಾರೆ, ನಮಗೆ ದುಡ್ಡು ಬೇಕು..ಅವರಿಗೆ ಸುಖ ಬೇಕು ಎಂಬಿತ್ಯಾದಿ ಬೋಲ್ಡ್​ ಮಾತುಗಳನ್ನು ಮಹಿಳೆ ಆಡಿದ್ದಾರೆ. ಈ ಆಡಿಯೋದಿಂದ ಹಲವು ಸತ್ಯಗಳು ಬೆಳಕಿಗೆ ಬಂದಿದ್ದು, ಪೊಲೀಸರು ಈಗಾಗಲೇ ಜಾಡು ಹಿಡಿದು ತನಿಖೆ ಶುರು ಮಾಡಿದ್ದಾರೆ. ಅಲ್ಲದೆ ಮಂಡ್ಯ ಎಸ್​ಪಿ ಕೆ.ಪರಶುರಾಮ್​ ಅವರು ಸುದ್ದಿಗೋಷ್ಠಿ ನಡೆಸಿ, ಸೋಮಶೇಖರ್​ ಜತೆಗಿರುವ ಮಹಿಳೆಯೂ ಮಂಡ್ಯ ಮೂಲದವರೇ ಎಂಬುದು ಗೊತ್ತಾಗಿದೆ. ಶೀಘ್ರವೇ ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net