

ಹೈದರಾಬಾದ್: 'ಸೀತಾ ರಾಮಂ' ಚಿತ್ರದ ಮುಖೇನ ಸಿನಿಪ್ರೇಕ್ಷಕರ ಮನಗೆದ್ದ ನಟಿ ಮೃಣಾಲ್ ಠಾಕೂರ್ ಇದೀಗ ಟಾಲಿವುಡ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಪ್ರಸ್ತುತ ತೆಲುಗು ನಟ, ನ್ಯಾಚುರಲ್ ಸ್ಟಾರ್ ನಾನಿ ಜತಗೆ 'ಹಾಯ್ ನನ್ನ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಮೃಣಾಲ್ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಸಿನಿ ವೃತ್ತಿ ಮೆಲುಕು ಹಾಕಿದ ನಟಿ, ಮನದಾಳದ ಮಾತೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಕಮಾಲ್ ಮಾಡಲು ಬರುತ್ತಿರುವ ಯುವ ನಿರ್ದೇಶಕ ಶೌರ್ಯುವ್, 'ಹಾಯ್ ನನ್ನ' ಚಿತ್ರದ ಮುಖೇನ ಸಿನಿಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೃನಾಲ್, "ಈ ಸಿನಿಮಾದಲ್ಲಿನ ಪಾತ್ರವು ನನ್ನ ವೃತ್ತಿಜೀವನದಲ್ಲಿ ಅತ್ಯುತ್ತಮವಾದದ್ದು" ಎಂದು ಹೇಳಿದರು. ಈ ವಿಷಯ ಅವರ ಅಭಿಮಾನಿಗಳಿಗೆ ಸಂತಸ ನೀಡಿದ್ದು, ನಟಿಯ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ನಾನಿ, ಬೇಬಿ ಕಿಯಾರಾ, ಮೃಣಾಲ್ ಠಾಕೂರ್, ಶೃತಿ ಹಾಸನ್, ಕಿಯಾರಾ ಖನ್ನಾ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).