ಕರೆಂಟ್ ಬಿಲ್ ಕಟ್ಟುವುದು ಕಡ್ಡಾಯ; ಹೆಸ್ಕಾಂ ಎಂ.ಡಿ ರೋಷನ್ ಹೇಳಿಕೆ

IMG-20230613-WA0022.jpg
Published on

ಬೆಳಗಾವಿ: ರಾಜ್ಯಾದ್ಯಂತ ವಿದ್ಯುತ್ ದರ ಹೆಚ್ಚಳವಾಗಿದೆ. ಕೇವಲ ಹೆಸ್ಕಾಂ ವ್ಯಾಪ್ತಿ ಅಷ್ಟೇ ಅಲ್ಲ.ಎಲ್ಲರೂ ಸಹಕರಿಸಬೇಕು ಎಂದು ಹೆಸ್ಕಾಂ ಎಂಡಿ ಮಹ್ಮದ್ ರೋಷನ್ ವಿನಂತಿಸಿದರು.
ನಗರದ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಉದ್ಯಮಿಗಳ ಜತೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಾಗೂ ಹೆಸ್ಕಾಂ ವತಿಯಿಂದ ನಾವು ಲೆಕ್ಕಚಾರ ಮಾಡಿದ ಹಾಗೆ ಬಿಲ್ ನಲ್ಲಿ ಹಾಕಲಾಗುತ್ತಿದೆ. ವಿದ್ಯುತ್ ದರದ ಹೆಚ್ಚಳ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪರಿಹಾರ ಸೂಚಿಸಿದರೆ ಅದನ್ನು ಅನುಷ್ಠಾನ ಮಾಡಲಾಗುವುದು ಎಂದರು.
  ಹೆಸ್ಕಾಂ ಮೇಲೂ ಸಾಕಷ್ಟು ಒತ್ತಡ ಇರುತ್ತದೆ. ನಾವು ವಿದ್ಯುತ್ ಖರೀದಿ ಮಾಡಲು ಹಣ ತುಂಬಬೇಕು. ಎಲ್ಲರಿಗೂ ಸಂಬಳ ನೀಡಬೇಕು. ಆದ್ದರಿಂದ ವಿದ್ಯುತ್ ಬಿಲ್ ಎಷ್ಟೆ ಬಂದರೂ ಎಲ್ಲರೂ ಅದನ್ನು ಕಡ್ಡಾಯವಾಗಿ ತುಂಬಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net