ಜಾರ್ಖಂಡ್​ದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹೇಮಂತ್​ ಸೊರೆನ್​ | Chief Minister

chief-minister-
Published on

ರಾಂಚಿ: ಜಾರ್ಖಂಡ್​ದ 14ನೇ ಮುಖ್ಯಮಂತ್ರಿಯಾಗಿ ಜಾರ್ಖಂಡ್​ ಮುಕ್ತಿ ಮೋರ್ಚಾ(JMM) ಪಕ್ಷದ ನಾಯಕ ಹೇಮಂತ್​ ಸೊರೆನ್(Chief Minister)​ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಇನ್ನು ಅದ್ದೂರಿ ಕಾರ್ಯಕ್ರಮಕ್ಕೆ ಇಂಡಿಯಾ ಬಣದ ಪ್ರಮುಖ ನಾಯಕರು ಸಾಕ್ಷಿಯಾದರು. 49 ವರ್ಷದ ಬುಡಕಟ್ಟು ಜನಾಂಗದ ಸೊರೆನ್​ಗೆ ರಾಜ್ಯಪಾಲ ಸಂತೋಷ್​ ಕುಮಾರ್ ಗಂಗ್ವಾರ ಅವರು ಪ್ರತಿಜ್ಞಾವಿಧಿ ಭೋದಿಸಿದರು.

ರಾಂಜಿಯ ಮೊರಬಾದ್​ನ ಮೈದಾನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಎಎಪಿ ನಾಯಕ ಅರವಿಂದ್​ ಕೇಜ್ರಿವಾಲ್​ ಸೇರಿದಂತೆ ಆನೇಕ ನಾಯಕರು ಉಪಸ್ಥಿತಿ ಇದ್ದರು. ಪ್ರಮಾಣವಚನ ಸ್ವೀಕರಿಸುವ ಮೊದಲು ಸೊರೆನ್​, ತಮ್ಮ ತಂದೆ ಶಿಬು ಸೊರೆನ್​ ಅವರನ್ನು ಭೇಟಿಯಾದರು. ಜೆಎಂಎಂ ನಾಯಕ ಸೊರೆನ್ ಅವರು​ ನಾಲ್ಕನೇ ಬಾರಿ ಜಾರ್ಖಂಡ್​ದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಇತ್ತೀಚಿಗೆ ನಡೆದ ಜಾರ್ಖಂಡ್​ ವಿಧಾನಸಭೆಯ ಚುನಾವಣೆಯಲ್ಲಿ 81 ಕ್ಷೇತ್ರಗಳ ಪೈಕಿ ಜೆಎಂಎಂ ನೇತೃತ್ವದ ಮೈತ್ರಿಕೂಟ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎನ್​ಡಿಯ ಮೈತ್ರಿಕೂಟ 24ರಲ್ಲಿ ಗೆದ್ದಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net