ಅಶಕ್ತರಿಗೆ ನೆರವು ಉತ್ತಮ ಕಾರ್ಯ: ಚಿತ್ರಕುಮಾರ್ ಅನಿಸಿಕೆ

Btw_Neravu
Published on

ಬಂಟ್ವಾಳ: ಸಾರ್ವಜನಿಕರಿಗೆ ಉಪಯೋಗವಾಗುವುದರ ಜತೆಗೆ ಅಶಕ್ತರಿಗೆ ನೆರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಂಟ್ವಾಳ ನೇತ್ರಾವತಿ ಸಂಗಮ ಮಾದರಿ ಸಂಸ್ಥೆಯಾಗಿದೆ ಎಂದು ಸೀನಿಯರ್ ಚೇಂಬರಿನ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ ಹೇಳಿದರು.

ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಎರಡು ದಿನ ನಡೆಯಲಿರುವ ಆಹಾರ ಮೇಳ ಹಾಗೂ ಹಲಸಿನ ಹಬ್ಬದಲ್ಲಿ ಹಲಸು, ಮಾವು ಹಾಗೂ ಇನ್ನಿತರ ಮೌಲ್ಯವರ್ಧಿತ ಆಹಾರೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿದರು. ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಅಧ್ಯಕ್ಷ ಆದಿರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ, ಸಂಜೀವ ಪೂಜಾರಿ ಉಪಸ್ಥಿತರಿದ್ದರು. ಸೀನಿಯರ್ ಛೇಂಬರ್ ಸ್ಥಾಪಕಾಧ್ಯಕ್ಷ ಡಾ.ಅರವಿಂದ ರಾವ್ ಕೇದಗೆ, ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫರ್ನಾಂಡಿಸ್ ಅಶಕ್ತರಿಗೆ ಸಹಾಯಧನ ವಿತರಿಸಿದರು. ನೇತ್ರಾವತಿ ಸಂಗಮದ ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ ಹಾಜರಿದ್ದರು. ಆದಿರಾಜ್ ಜೈನ್ ಸ್ವಾಗತಿಸಿ, ಕೋಶಾಧಿಕಾರಿ ನಾಗೇಶ್ ಕುಲಾಲ್ ವಂದಿಸಿದರು. ಶೈಲಜಾ ರಾಜೇಶ್ ನಿರೂಪಿಸಿದರು.

ಕೃಷಿ ವಿಚಾರಗೋಷ್ಠಿ

ಕೃಷಿ ವಿಚಾರಗೋಷ್ಠಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಕೃಷಿ ಪರಿಸರ, ಪಿಂಗಾರ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ರಾಮಕಿಶೋರ್ ಕೆ.ಮೌಲ್ಯವರ್ಧನೆ ಪ್ರಾಮುಖ್ಯತೆ ರೈತ ಉತ್ಪಾದಕರ ಕಂಪನಿಯ ಪಾತ್ರ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ರಂಬೂಟನ್, ಡ್ರಾೃಗನ್ ಫ್ರೂಟ್ ಹಾಗೂ ವಿವಿಧ ಬಗೆಯ ಹಣ್ಣು ಹಂಪಲುಗಳ ಬೆಳೆ ಬಗ್ಗೆ ವಿಚಾರ ಮಂಡಿಸಿದರು. ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಹರೀಶ್ಚಂದ್ರ ಆಳ್ವ ಪದೆಂಜಾರು ಉಪಸ್ಥಿತರಿದ್ದರು. ಸದಸ್ಯ ಸಂದೀಪ್ ಸಾಲ್ಯಾನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net