

ವಿಜಯವಾಣಿ ಸುದ್ದಿಜಾಲ ಬೈಂದೂರು
ಮನುಷ್ಯನಿಗೆ ಬೇಕಾಗಿರುವುದು ವಿದ್ಯೆ, ಆರೋಗ್ಯ, ವಸತಿ. ಇದರಿಂದ ವಂಚಿತರಾಗುವವರಿಗೆ ನೆರವು ನೀಡಲು ಕಳೆದ ಒಂದು ದಶಕದಿಂದ ಸೇವೆ ಸಲ್ಲಿಸಲಾಗುತ್ತಿದೆ. ಅರ್ಹರಿಗೆ ನೆರವು ನೀಡುವುದೇ ನಾವು ಮಾಡುವ ಬಹುದೊಡ್ಡ ಸೇವೆ. ಅಪೇಕ್ಷೆ ಇಲ್ಲದ ದಾನ ಮನುಷ್ಯನನ್ನು ಉನ್ನತ ಮಟ್ಟಕ್ಕೇರಿಸುತ್ತದೆ ಎಂದು ಉದ್ಯಮಿ ಗೋಕುಲ್ ಜಿ.ಶೆಟ್ಟಿ ಹೇಳಿದರು.
ಬೈಂದೂರು ವಲಯ ಬವಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ದಿ.ಗಂಟಿಹೊಳೆ ನಾರಾಯಣ ಶೆಟ್ಟಿ ಸ್ಮರಣಾರ್ಥ ಗೀತಾ ಗೋಕುಲ ಶೆಟ್ಟಿ ಮೇಲ್ಗಾಯಾಡಿ ಮತ್ತು ಹಳೇ ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ ಬ್ರಿಥಿ ವೇದಿಕೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಗಾಣಿಗ ಧ್ವಜಾರೋಹಣಗೈದರು. ಬಿಜೂರು ಗ್ರಾಪಂ ಅಧ್ಯಕ್ಷೆ ಚೆನ್ನಮ್ಮ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿಜೂರು ಪಂಚಾಯಿತಿ ಉಪಾಧ್ಯಕ್ಷ ರಂಜಿತ್ ಹೊಸ್ಕೋಟೆ, ಸದಸ್ಯೆ ರೇವತಿ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ರಾಮಾನಾಥ ಮೇಸ್ತ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಾರಾಯಣ ಕೆ.ಬಿಲ್ಲವ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘ ಖಜಾಂಚಿ ಶಂಕರ ಶೆಟ್ಟಿ ಪ್ರಸ್ತಾವಿಸಿದರು. ಶಿಕ್ಷಕರಾದ ರಾಘವೇಂದ್ರ ಪಡುವರಿ ವಂದಿಸಿದರು. ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಒಂದು ಸರ್ಕಾರಿ ಶಾಲೆ ಉಳಿಸಲು ಎಲ್ಲರೂ ಕಂಕಣ ಬದ್ಧರಾಗೋಣ. ಶಿಕ್ಷಕರು, ಪಾಲಕರು ಮತ್ತು ಹಳೇ ವಿದ್ಯಾರ್ಥಿಗಳ ನಡುವಿನ ಪರಸ್ಪರ ಹೊಂದಾಣಿಕೆ ಹಾಗೂ ಸಹಕಾರ ಭಾವನೆಯಿಂದ ಸರ್ಕಾರಿ ಕನ್ನಡ ಶಾಲೆ ಉಳಿಸಬಹುದು. ಗೋಕುಲ್ ಜಿ.ಶೆಟ್ಟಿ ಉದ್ಯಮಿ https://www.vijayavani.net/art-institution-brings-prosperity-to-the-town https://www.vijayavani.net/daily-hassle-for-motorists