ಕರಾವಳಿಯಲ್ಲಿ ಮಳೆ ತೀವ್ರ ಇಳಿಮುಖ

bisilu
Published on

ಮಂಗಳೂರು: ದ.ಕ. ಜಿಲ್ಲಾದ್ಯಂತ ಮಂಗಳವಾರವೂ ಬಿಸಿಲಿನ ಝಳ ಮುಂದುವರಿದಿದ್ದು, ಮಳೆ ನಾಪತ್ತೆಯಾಗಿದೆ. ಮಂಗಳವಾರ ದಿನವಿಡಿ ಹನಿ ಮಳೆ ಬಿಟ್ಟರೆ ಬಹುತೇಕ ಬಿಸಿಲು ಆವರಿಸಿತ್ತು. ಕಳೆದೊಂದು ವಾರದಿಂದ ಕರಾವಳಿಯಲ್ಲಿ ಮಳೆ ತೀವ್ರ ಇಳಿಮುಖವಾಗಿದೆ. ನೇತ್ರಾವತಿ, ಕುಮಾರಧಾರ ಹಾಗೂ ಫಲ್ಗುಣಿ ನದಿ ಮಟ್ಟ ಭಾರಿ ಕುಸಿತ ಕಂಡಿದೆ.

ಮುಂದಿನ ಐದು ದಿನಗಳ ಕಾಲ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ಸರಾಸರಿ 2.7 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net