
Rain: ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಜೂನ್ 19ರವರೆಗೆ ಮುಂದುವರೆಯಲಿದೆ. ಕರಾವಳಿ ಭಾಗದಲ್ಲಿ ವರುಣ ಅಬ್ಬರ ಜೋರಾಗಿದೆ. ಹೀಗಾಗಿ, ಮುಂಜಾಗ್ರತೆ ದೃಷ್ಟಿಯಿಂದ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಭಾರಿ ಮಳೆಯ ಕಾರಣ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು,ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್ಆರ್ ಪುರ ತಾಲೂಕಿನಲ್ಲಿ ರಜೆ ಘೋಷಣೆ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸುತ್ತೋಲೆ ಹೊರಡಿಸಿದ್ದಾರೆ.
ಶಕ್ತಿನಗರ, ಮಂಗಳೂರು, ಕೊಟ್ಟಿಗೆಹಾರ, ಬಂಟವಾಳ, ಬೆಳ್ತಂಗಡಿ, ಮೂಡುಬಿದಿರೆ, ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು,ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ವಿಜಯನಗರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಪ್ಪಿನಂಗಡಿ, ಮಾಣಿ, ಕ್ಯಾಸಲ್ರಾಕ್, ಮಂಕಿ, ಕದ್ರಾ, ಧರ್ಮಸ್ಥಳ, ಅಂಕೋಲಾ, ಸುಳ್ಯ, ಉಡುಪಿ, ಕಾರ್ಕಳ, ಪುತ್ತೂರು, ಲೋಂಡಾ,ಆಗುಂಬೆಯಲ್ಲಿ ಮಳೆಯಾಗಿದೆ. ಗೇರುಸೊಪ್ಪ, ಮುಲ್ಕಿ, ಕುಂದಾಪುರ, ಕೋಟಾ, ಕಾರವಾರ, ಹೊನ್ನಾವರ, ಶೃಂಗೇರಿ, ನಾಪೋಕ್ಲು, ಸೋಮವಾರಪೇಟೆ, ಕುಮಟಾ, ಬೆಳಗಾವಿ, ಕಳಸ, ಖಾನಾಪುರ, ಕಿತ್ತೂರು,ಕೊಪ್ಪ, ಜಯಪುರ, ಹಳಿಯಾಳ, ಕಮ್ಮರಡಿ, ಪೊನ್ನಂಪೇಟೆ, ಬೇಲೂರು, ಹೊಸಕೋಟೆ, ಜೇವರಗಿ, ಹಾರಂಗಿ, ಸಂಕೇಶ್ವರ, ಹುಕ್ಕೇರಿ, ವಿಜಯಪುರ, ಬೈಲಹೊಂಗಲ, ಬಬಲೇಶ್ವರದಲ್ಲಿ ಮಳೆಯಾಗಿದೆ.