ನವದೆಹಲಿ: ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೇರಳದ ವಯನಾಡ್ ಜಿಲ್ಲೆಯ ಪ್ರದೇಶಗಳಿಗೆ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಒಡಿಶಾ: ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ಮುಟ್ಟಿನ ರಜೆ ಘೋಷಣೆ
ಐಎಂಡಿ ಆಗಸ್ಟ್ 15, ಗುರುವಾರ ಎರ್ನಾಕುಲಂ, ತ್ರಿಶೂರ್ ಮತ್ತು ಕಣ್ಣೂರಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಮತ್ತು ಗುರುವಾರ ಕೋಝಿಕ್ಕೋಡ್ ಮತ್ತು ವಯನಾಡಿನಲ್ಲಿ ಹೆಚ್ಚು ಮಳೆಯಿಂದ (24 ಗಂಟೆಗಳಲ್ಲಿ 7 ಸೆಂ.ಮೀ ನಿಂದ 11 ಸೆಂ.ಮೀ.) ಭಾರೀ ಮಳೆ (24 ಗಂಟೆಗಳಲ್ಲಿ 12 ಸೆಂ.ಮೀ.ನಿಂದ 20 ಸೆಂ.ಮೀ.)ಆಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಭಾರೀ ಮಳೆಯಿಂದ ಉಂಟಾದ ಭಾರೀ ಭೂ ಕುಸಿತದಿಂದ ಕನಿಷ್ಠ 229 ಜನರನ್ನು ಬಲಿತೆಗೆದುಕೊಂಡ ವಾರಗಳ ನಂತರ ಈ ಎಚ್ಚರಿಕೆ ಬಂದಿದೆ. ಈ ದುರಂತದಲ್ಲಿ ಮತ್ತು ಸುಮಾರು 130 ಜನರು ಕಾಣೆಯಾಗಿದ್ದರು.
ವಯನಾಡ್ನಲ್ಲಿ ಸಂಭವಿಸಿದ ವಿನಾಶಕಾರಿ ಭೂ ಕುಸಿತಕ್ಕೆ ಹವಾಮಾನ ಇಲಾಖೆ ಬದಲಾವಣೆಯಿಂದ ಸುರಿದ ಶೇ.10ಕ್ಕಿಂತ ಅಧಿಕ ಮಳೆಯೇ ಕಾರಣ ಎಂದು ಜಾಗತಿಕ ವಿಜ್ಞಾನಿಗಳ ತಂಡ ತಿಳಿಸಿದೆ. ತಾಪಮಾನ ಏರಿಕೆಯಿಂದ ಇಂತಹ ಮತ್ತಷ್ಟು ಅಪಾಯಗಳು ಸಂಭವಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ಕೊಡುವಲ್ಲಿ ಇಎಂಡಿ ವಿಫಲವಾಗಿತ್ತು ಎಂದು ಕೇರಳ ಸರ್ಕಾರ ಈ ಹಿಂದೆ ಆರೋಪ ಮಾಡಿತ್ತು. ಈ ಆರೋಪವನ್ನು ತಳ್ಳಿಹಾಕಿರುವ ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದ್ದರು.
ಸಾಲು-ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನ: ಪ್ರಮುಖ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್