ಹೆಬ್ರಿ: ಹೆಬ್ರಿಯಲ್ಲಿ ಶುಕ್ರವಾರ ರಾತ್ರಿ ಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಹಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ನೂರಾರು ಅಡಕೆ ಮರ ಧಾರಾಶಾಯಿಯಾಗಿವೆ.
ಶಿವಪುರ ನಾಯರಕೋಡು ಎಂಬಲ್ಲಿ ಕೋಳಿ ಫಾರ್ಮ್, ಅಂಗನವಾಡಿ ಮೇಲೆ ಮರ ಬಿದ್ದು ಹಾನಿಯಾಗಿದೆ. ರಾಧಾಕೃಷ್ಣನ್ ಟದಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿ ಉಂಟಾಗಿದೆ. ಹೆಬ್ರಿ ದೇವಸ್ಥಾನಬೆಟ್ಟುವಿನಲ್ಲಿ ಶೇಖರ ಶೇರಿಗಾರ್ ಮನೆಗೆ ಮರ ಬಿದ್ದಿದೆ.
ಹೆಬ್ರಿ ಕಾರ್ಕಳ ಸಂಪರ್ಕಿಸುವ ಮುಖ್ಯ ರಸ್ತೆ ವಿದ್ಯುತ್ ತಂತಿ ಮೇಲೆ ಮರ ಬಿದ್ದು ಮೂರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಚಾರ, ಬೇಳಂಜೆ, ಮಾತ್ಕಲ್, ಹೆಬ್ರಿಯಲ್ಲಿ ಹತ್ತಾರು ವಿದ್ಯತ್ ಕಂಬಗಳು ಧರಾಶಾಯಿಯಾಗಿವೆ. ಹೆಬ್ರಿ ಹಾಗೂ ಕುಂದಾಪುರ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಮರ ಬಿದ್ದಿದ್ದರಿಂದ ಕೆಲ ಹೊತ್ತು ಸ್ಥಗಿತಗೊಂಡಿತ್ತು. ಹೆಬ್ರಿ ಪೇಟೆಯಲ್ಲಿ ಸತತ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.