ಕುಡುಕ ಪ್ಯಾಸೆಂಜರ್​​ನ ಅವಾಂತರದಿಂದ ಮಾರ್ಗ ಬದಲಿಸಿದ ವಿಮಾನ!

Mumbai Airport
Published on

ಮುಂಬೈ: ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನಿಂದ ವಿಮಾನ ಸಂಚಾರದ ಮಾರ್ಗವನ್ನೇ ಬದಲಿಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಬೆಂಗಳೂರಿನಿಂದ ಕತಾರ್​ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅತಿಯಾಗಿ ಕುಡಿದು, ಗಗನಸಖಿ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಇನ್ನೂ ಮದ್ಯ ಕೊಡುವಂತೆ ಒತ್ತಾಯಿಸಿದ್ದಾನೆ. ಸಹ ಪ್ರಯಾಣಿಕರು ಎಷ್ಟೇ ಪ್ರಯತ್ನಿಸಿದರೂ, ಆತನ ವರ್ತನೆ ಅತಿಯಾಗಿದ್ದ ಕಾರಣ ಕೂಡಲೇ ವಿಮಾನವನ್ನೇ ನಿಲ್ಲಿಸಬೇಕಾಯಿತು.

ಇವನ ವರ್ತನೆಯಿಂದ ಬೇಸತ್ತ ವಿಮಾನ ಸಿಬ್ಬಂದಿ ಕೊನೆಗೂ ನೇರವಾಗಿ ಕತಾರ್​ನ ದೋಹಾಗೆ ತಲುಪಬೇಕಿದ್ದ ವಿಮಾನ ಸಂಚಾರವನ್ನು ಬದಲಿಸಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ನಿಲ್ಲಿಸಬೇಕಾಯಿತು.

ಪ್ರಯಾಣಿಕನನ್ನು ಮೊಹಮ್ಮದ್​ ಸರ್ಫೂದ್ದೀನ್​ ಎಂದು ಗುರುತಿಸಲಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ಲುತ್ತಿದ್ದಂತೆ ಈತನನ್ನು ಬಂಧಿಸಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net