ವಿಜಯವಾಣಿ ಸುದ್ದಿಜಾಲ ಬೈಂದೂರು
ಕಾಲಕಾಲಕ್ಕೆ ರಕ್ತದಾನ ಮಾಡುವುದರಿಂದ ರಕ್ತ ರಕ್ತನಾಳಗಳ ಒಳಪದರಕ್ಕೆ ಹಾನಿಯಾಗದಂತೆ ಹರಿಯುತ್ತದೆ ಮತ್ತು ಅಪದಮನಿಯ ರಕ್ತಹರಿವುವಿಕೆ ಅಡೆ ತಡೆ ಕಡಿಮೆ ಮಾಡುತ್ತದೆ. ರಕ್ತದಾನ ಮಾಡುವವರು ಹೃದಯಾಘಾತ ಮತ್ತು ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಕೆ.ಎನ್.ಚಂದ್ರಶೇಖರ ಅಡಿಗ ಹೇಳಿದರು.
ಕೊಲ್ಲೂರು ಫ್ರೆಂಡ್ಸ್ ಆಯೋಜನೆಯಲ್ಲಿ ಶ್ರೀ ಮೂಕಾಂಬಿಕಾ ದೇವಳದ ಸಿಬ್ಬಂದಿ ವರ್ಗ, ಜೀಪು, ಟ್ಯಾಕ್ಸಿ, ಆಟೋ ಚಾಲಕ-ಮಾಲೀಕರ ಸಂಘ, ಮಹಿಳಾ ಮಂಡಲ, ನವಶಕ್ತಿ ಮಹಿಳಾ ವೇದಿಕೆ, ಟೀಮ್ ಕೋಲಾ ಮಹರ್ಷಿ ಸಹಕಾರದಿಂದ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಉಡುಪಿ ಹಾಗೂ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಸಹಯೋಗದಲ್ಲಿ ಮಂಗಳವಾರ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಶಾಸಕ ಗುರುರಾಜ ಗಂಟಿಹೊಳೆ ಶುಭಹಾರೈಸಿದರು. ದೇವಳದ ಇಒ ಪ್ರಶಾಂತ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಸ್ಥಳೀಯ ವೈದ್ಯ ಡಾ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿನ ಲೈನ್‌ಮನ್ ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ಚಂದ್ರ, ಗ್ರಾಪಂ ಅಧ್ಯಕ್ಷೆ ವನಿತಾ ಶೇರುಗಾರ್, ಉಪಾಧ್ಯಕ್ಷ ನಾಗೇಶ ದಳಿ, ರೆಡ್‌ಕ್ರಾಸ್ ಸಭಾಪತಿ ಎಸ್.ಜಯಕರ ಶೆಟ್ಟಿ, ಅಭಯ ಅಸ್ತ ಚಾರಿಟೆಬಲ್ ಟ್ರಸ್ಟ್ ಶರತ್ ಆನಗಳ್ಳಿ ಮತ್ತು ಪ್ರಶಾಂತ್ ತಲ್ಲೂರು, ಜೀಪು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಕಿಶನ್ ಶೆಟ್ಟಿ, ಟ್ಯಾಕ್ಸಿ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ನಾಗೇಶ ಬಾಳಿಗ, ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಸುರೇಶ, ಮಹಿಳಾ ಮಂಡಲ ಅಧ್ಯಕ್ಷೆ ಲತಾ ಶೆಟ್ಟಿ, ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷ ಗ್ರೀಷ್ಮಾ ಬಿಢೆ, ಸಂದೀಪ್ ಕೊಲ್ಲೂರು, ದೇವಸ್ಥಾನ ಸಿಬ್ಬಂದಿ ಜಕುಮಾರ್, ಗಣೇಶ ಉಡುಪ ಇದ್ದರು. ವಿನೋದ್ ಭಟ್ ನಿರೂಪಿಸಿದರು. ಗಿರೀಶ್ ಶೆಟ್ಟಿ ವಂದಿಸಿದರು.
ಜಿಲ್ಲೆಯಲ್ಲಿ ಡೆಂಘೆ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದ್ದು, ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸುವಂತಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸುರಕ್ಷತಾ ಕ್ರಮ ಕೈಗೊಳ್ಳುವುದರ ಜತೆಗೆ ಈ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವಾಗಬೇಕು. ಪ್ರತಿಯೊಂದು ಸಮಸ್ಯೆ ಬಗ್ಗೆ ಆರಂಭದಲ್ಲಿಯೇ ಕಾಳಜಿ ವಹಿಸಿದರೆ ಅತಿರಿಕ್ತವಾಗದು. ಅಧಿಕಾರಿಗಳು ಕೂಡ ಸಮಸ್ಯೆಗಳ ಪಟ್ಟಿ ಮಾಡುವುದಲ್ಲ ಬದಲಾಗಿ ಸರಿಪಡಿಸುವ ಚಿಂತನೆ ಮಾಡಬೇಕು.
-ಗುರುರಾಜ ಗಂಟಿಹೊಳೆ, ಶಾಸಕರು ಬೈಂದೂರು