

Defecation | ನೀವು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಬಹುಮುಖ್ಯವಾದ ಕಾರಣ ನೀವು ನಿತ್ಯ ಸೇವನೆ ಮಾಡುವ ಆಹಾರ. ಹೌದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ನಿಮ್ಮ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದು, ದೈಹಿಕ ಕಾಯಿಲೆಗಳು, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ, ನಿರ್ಜಲೀಕರಣ ಮತ್ತು ಆಹಾರ ಪದ್ಧತಿಗಳಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ವಿವಿಧ ಕಾರಣಗಳಿಂದ ಉಂಟಾಗಬಹುದಾದ ಈ ಸಮಸ್ಯೆಯು ಹೆಚ್ಚಿನ ಸಂಖ್ಯೆಯ ಜನರಲ್ಲಿ ಕಂಡು ಬರುತ್ತದೆ.
ತಲೆನೋವು, ಗೊಂದಲ ಮತ್ತು ಚಡಪಡಿಕೆ ಉಂಟಾಗಬಹುದು.
ಹೊಟ್ಟೆ ಉಬ್ಬುವುದು ಮತ್ತು ಆಲಸ್ಯದ ಭಾವನೆ
ಮಲ ಒಣಗಿ ಗಟ್ಟಿಯಾಗಿರುವುದು
ಕರುಳಿನ ಚಲನೆಯ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು
ಹೊಟ್ಟೆಯಲ್ಲಿ ಭಾರ ಮತ್ತು ಹಸಿವು ಕಡಿಮೆಯಾಗುವುದು
ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಮಲವಿಸರ್ಜನೆ ಮಾಡುವುದು
ಮಲಬದ್ಧತೆ ಸಮಸ್ಯೆಯನ್ನು ಕೆಲವು ಆಹಾರ ಪದ್ಧತಿಗಳ ಮೂಲಕ ಸರಿಪಡಿಸಬಹುದು. ಮಲಬದ್ಧತೆಗೆ ಚಿಕಿತ್ಸೆ ನೀಡಲು ಆಹಾರ ಪದ್ಧತಿಯೊಂದೇ ಪರಿಹಾರವಲ್ಲದಿದ್ದರೂ, ಉತ್ತಮ ಆಹಾರಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಖಂಡಿತವಾಗಿಯೂ ಸಕಾರಾತ್ಮಕ ವ್ಯತ್ಯಾಸವನ್ನು ಕಾಣಬಹುದು. ಆದ್ದರಿಂದ ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಮಲಬದ್ಧತೆಯನ್ನು ನಿಯಂತ್ರಿಸುವಲ್ಲಿ ಫೈಬರ್ ಮಹತ್ವದ ಪಾತ್ರ ವಹಿಸುತ್ತದೆ. ದಿನಕ್ಕೆ 30 ಗ್ರಾಂ ಫೈಬರ್ ಭರಿತ ಆಹಾರವನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ ಶೇ. 91 ರಷ್ಟು ಜನರು ತಮ್ಮ ದೈನಂದಿನ ನಾರಿನ ಅಗತ್ಯಗಳನ್ನು ಪೂರೈಸುವುದಿಲ್ಲ. ಫೈಬರ್ ದೇಹಕ್ಕೆ ವಿವಿಧ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಧಾನ್ಯಗಳು ಫೈಬರ್ಅನ್ನು ಹೊಂದಿರುತ್ತವೆ, ಈ ಪೋಷಕಾಂಶಗಳು ಬ್ರೆಡ್, ಅನ್ನ, ಪಾಸ್ತಾ ಮತ್ತು ಓಟ್ಸ್‌ನಂತಹ ಧಾನ್ಯ ಆಧಾರಿತ ಆಹಾರಗಳಲ್ಲಿ ಹಾಗೂ ತರಕಾರಿಗಳು, ಹಣ್ಣುಗಳು, ಬೀಜಗಳು, ದ್ವಿದಳ ಧಾನ್ಯಗಳು ಮತ್ತು ಬೀಜಗಳಲ್ಲಿ ಅತೀ ಹೆಚ್ಚಾಗಿವೆ.
ಹಣ್ಣುಗಳು, ತರಕಾರಿಗಳು, ಬೀಜಗಳು, ದ್ವಿದಳ ಧಾನ್ಯಗಳು, ಮೊಸರು, ಸಬ್ಜಾ ಮತ್ತು ಅಗಸೆ ಬೀಜಗಳಂತಹ ವಿವಿಧ ರೀತಿಯ ಫೈಬರ್ ಭರಿತ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಇದನ್ನು ನೀವು ನಿತ್ಯ ಊಟದ ಭಾಗವಾಗಿ ಅಥವಾ ತಿಂಡಿಯಾಗಿಯೂ ಸೇವಿಸಬಹುದು.
ನೀವು ಕಡಿಮೆ ಫೈಬರ್ ಭರಿತ ಆಹಾರವನ್ನು ಸೇವಿಸುತ್ತಿದ್ದರೆ, ಅವುಗಳ ಸೇವನೆಯನ್ನು ಹೆಚ್ಚಿಸಬೇಕಾಗಿರುತ್ತದೆ. ನೀವು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಸೇವಿಸುತ್ತಿದ್ದರೆ, ಅದನ್ನು ಕಡಿಮೆ ಮಾಡುವುದು ಸಹ ಅಗತ್ಯ.
ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳುವುದರಿಂದ ಮಲಬದ್ಧತೆಯ ಲಕ್ಷಣಗಳಿಂದ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ದಿನಕ್ಕೆ ಎಂಟರಿಂದ ಹತ್ತು ಗ್ಲಾಸ್ ನೀರು, ಹಣ್ಣಿನ ರಸ, ಗಿಡಮೂಲಿಕೆ ಚಹಾಗಳು ಅಥವಾ ಸೂಪ್‌ಗಳನ್ನು ಕುಡಿಯುವುದರಿಂದ ಮಲ ಮೃದುವಾಗುತ್ತದೆ. ಆಲ್ಕೋಹಾಲ್ ಮತ್ತು ಕೆಫೀನ್ ಪ್ರಮಾಣವನ್ನು ಕಡಿಮೆ ಮಾಡಿ, ಪ್ರತಿ ಊಟದ ಜೊತೆಗೆ ಒಂದು ಲೋಟ ನೀರು ಕುಡಿಯುವುದು ಉತ್ತಮ ಅಭ್ಯಾಸವಾಗಿದೆ.