ವಿಜಯವಾಣಿ, ಟಿಎಸ್ಎಸ್ ಆಸ್ಪತ್ರೆಯಿಂದ ಆಯೋಜಿಸಿದ್ದ ಆರೋಗ್ಯವಂತ ಮಗು ಸ್ಪರ್ಧೆಗೆ ಉತ್ತಮ ಸ್ಪಂದನೆ‌

Healthy baby computation
Published on

ಶಿರಸಿ: ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಶಿರಸಿಯ ಟಿಎಸ್ ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಬುಧವಾರ ಆಯೋಜಿಸಿದ್ದ ಆರೋಗ್ಯವಂತ ಮಗು ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಟಿಎಸ್ ಎಸ್ ಆಸ್ಪತ್ರೆ ಸಭಾಭವನದಲ್ಲಿ ಬುಧವಾರ ಚಿಣ್ಣರ ಚಿಲಿಪಿಲಿ ತುಂಬಿತ್ತು. ಮುದ್ದು ಮಕ್ಕಳು ಬಲೂನು‌ ಹಿಡಿದು ಓಡಾಡಿದರು. ಕುಣಿದು ಕುಪ್ಪಳಿಸಿದರು. ಮೈಕ್ ಹಿಡಿದು ಹಾಡು ಹೇಳಿ ರಂಜಿಸಿದರು.

ಚಾಲನೆ‌:

ಸ್ಪರ್ಧೆಗೆ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಮೇಜರ್ ಡಾ.ಜೆ.ಬಿ.ಕಾರಂತ ಚಾಲನೆ ನೀಡಿ ಮಾತನಾಡಿ, ಮಕ್ಕಳ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಜೀವನ ಶೈಲಿಯಿಂದ ಬರುವ ಕಾಯಿಲೆಗಳು ಹೆಚ್ಚುತ್ತಿವೆ. ಮಕ್ಕಳಿಗೆ ನೈಸರ್ಗಿಕ ಆಹಾರ ಕೊಡಿ.‌ ಆದಷ್ಟು ಮೊಬೈಲ್ ನಿಂದ ದೂರವಿಡಿ ಎಂದರು.

ಬಹುಮಾನ ವಿತರಿಸಿ ಮಾತನಾಡಿದ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತ‌ ವೈದ್ಯಾಧಿಕಾರಿ ಡಾ.ಗಜಾನನ ಭಟ್, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬಹುದು. ಸಂಸ್ಕಾರ ನೀಡಲು ಸಾಧ್ಯವಿಲ್ಲ. ಮನೆಯೇ ಮೊದಲ ಪಾಠಶಾಲೆ, ಮನೆಯಲ್ಲೇ ಸಂಸ್ಕಾರ ನೀಡಿ ಎಂದರು.

ಇದನ್ನೂ ಓದಿ: ಆರೋಗ್ಯವಂತ ಮಕ್ಕಳ `ವೆಲ್ ಬೇಬಿ ಸ್ಪರ್ಧೆ’ಯಲ್ಲಿ ಮಕ್ಕಳ ಕಲರವ
ವಿಜಯವಾಣಿ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಮಾತನಾಡಿ, ವಿಜಯವಾಣಿ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಬೇಕು, ಬೇಡಿಕೆಗಳಿಗೆ ಸ್ಪಂದಿಸುತ್ತಿದೆ. ವಿಆರ್ ಎಲ್ ಸಮೂಹ ಸಂಸ್ಥೆಯ ಎಂಡಿ ಡಾ. ಆನಂದ‌ ಸಂಕೇಶ್ವರ ಅವರ ಹುಟ್ಟು ಹಬ್ಬ ನ.14 ಎಂದರೆ ಮಕ್ಕಳ ದಿನಾಚರಣೆಯಂದು. ಅವರಿಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇದೆ. ಆರೋಗ್ಯವಂತ ಮಗು ಬೆಳೆಯಬೇಕು ಎಂಬುದು ಅವರ ಆಶಯ ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಟಿಎಸ್ ಎಸ್ ವಿವಿಧ ವಿಭಾಗಗಳ ಸಿಬ್ಬಂದಿ, ಸಹಕರಿಸಿದರು. ವಿಜಯವಾಣಿ ಉತ್ತರ ಕನ್ನಡ ಜಿಲ್ಲಾ ವರದಿಗಾರ ಸುಭಾಸ ಧೂಪದಹೊಂಡ, ಜಾಹೀರಾತು ವಿಭಾಗದ ಮ್ಯಾನೇಜರ್ ಶಂಕರ‌ ಜಾವೂರ, ಶಿರಸಿ‌ ವರದಿಗಾರ ಶಿವಪ್ರಸಾದ ಹಿರೇಕೈ, ಪ್ರಸಾರಂಗ ವಿಭಾಗದ ಹಿರಿ ಪ್ರಬಂಧಕ ಅಯ್ಯಣ್ಣ, ಆತ್ಮಾನಂದ ಮಡಿವಾಳರ್ ಇದ್ದರು.

ವಿಜೇತರು
9 ತಿಂಗಳಿಂದ ಎರಡು ವರ್ಷ, ಎರಡರಿಂದ ನಾಲ್ಕು ವರ್ಷ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. 75 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಟಿಎಸ್ ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ತಜ್ಞ ಡಾ.ಆಶಿಶ್ ಜನ್ನು ಪ್ರತಿ ಮಕ್ಕಳ ತಪಾಸಣೆ ಮಾಡಿ, ಉಚಿತ ಆರೋಗ್ಯ ಸಲಹೆ‌ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ, ಮಕ್ಕಳ ಅಯಾ ವಯಸ್ಸಿಗೆ ಇರಬೇಕಾದ ತೂಕ, ಎತ್ತರ, ತಲೆಯ ಗಾತ್ರ ಆಧಿರಿಸಿ ಬಹುಮಾನ ನೀಡಲಾಯಿತು.
9 ರಿಂದ ಎರಡು ವರ್ಷ ವಯೋಮಾನದಲ್ಲಿ ಎಂ.ಬಿ.ಅಗಮ್ಯಶ್ರೀ ಪ್ರಥಮ, ಪ್ರೀತಂ ಅನಿಲ್ ಕುಮಾರ್‌ ದ್ವಿತೀಯ, ಮಹತಿ ಭಟ್ ತೃತೀಯ ಸ್ಥಾನ ಪಡೆದರು.
2 ರಿಂದ 4 ವರ್ಷ ವಯೋಮಿತಿಯ ವಿಭಾಗದಲ್ಲಿ ಆರಾಧ್ಯ ವಿನಾಯಕ ಪ್ರಭು ಪ್ರಥಮ, ಅದ್ವೈತ್ ವಿಕಾಸ ಹೆಗಡೆ ದ್ವಿತೀಯ ಹಾಗೂ ಸಾನ್ವಿ ವಿ.ಭಟ್ ತೃತೀಯ ಸ್ಥಾನ ಪಡೆದರು.

ಗುಂಡಗಿದ್ದ ಮಗು ಆರೋಗ್ಯವಂತವಾಗಿದೆ ಎಂದಲ್ಲ. ವಯಸ್ಸಿಗೆ ಅನುಗುಣವಾಗಿ ಮಕ್ಕಳ‌ ತೂಕ, ಎತ್ತರ ಹಾಗೂ ತಲೆಯ ಸುತ್ತಳತೆ‌ ಸರಿ ಇರಬೇಕು. ಅದನ್ನೆ ಆಧರಿಸಿ ಆರೋಗ್ಯವಂತ ಮಗುವಿನ ಆಯ್ಕೆ ಮಾಡಲಾಗಿದೆ. ಉಳಿದ ಮಕ್ಕಳು ಅನಾರೋಗ್ಯವಂತ ಎಂದಲ್ಲ‌.‌ಡಾ.ಆಶಿಶ್ ಜನ್ನುಮಕ್ಕಳ ತಜ್ಞ, ಟಿಎಸ್ ಎಸ್ ಆಸ್ಪತ್ರೆ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net