ಕೆಲವೇ ದಿನಗಳಲ್ಲಿ 45 ಕೆ.ಜಿ ತೂಕ ಇಳಿಸಿಕೊಂಡ ಮಹಿಳೆ! ಈಕೆಯ ವ್ಯಾಯಾಮದ ಗುಟ್ಟೇನು? Core Exercises

ತೂಕ ಇಳಿಸಿಕೊಂಡ ಮಹಿಳೆಯ ಚಿತ್ರ (Instagram ನಿಂದ ತೆಗೆದುಕೊಳ್ಳಲಾಗಿದೆ)
ತೂಕ ಇಳಿಸಿಕೊಂಡ ಮಹಿಳೆಯ ಚಿತ್ರ (Instagram ನಿಂದ ತೆಗೆದುಕೊಳ್ಳಲಾಗಿದೆ)
Published on

ಪ್ರಮುಖ ಮುಖ್ಯಾಂಶಗಳು

  • ವ್ಯಾಯಾಮವು ಸರಳವಾಗಿ ಆರೋಗ್ಯಕರ ದೇಹವನ್ನು ನಿರ್ಮಾಣ ಮಾಡುತ್ತದೆ
  • ದೇಹದಲ್ಲಿ ಉತ್ಪತ್ತಿಯಾದ ಅಧಿಕ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು
  • ಹೊಟ್ಟೆಯ ಸುತ್ತಮುತ್ತ ಇರುವ ಕೊಬ್ಬನ್ನು ಕಳೆದುಕೊಳ್ಳುವುದು ಸುಲಭವೇನಲ್ಲ
  • ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದರಿಂದ ಭುಜದ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
Core Exercises: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಬಹಳ ಕಷ್ಟಕರ. ಇದು ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಮಿಶ್ರಣವಾಗಿದೆ. ಹೊಟ್ಟೆಯ ಸುತ್ತಮುತ್ತ ಇರುವ ಕೊಬ್ಬನ್ನು ಕಳೆದುಕೊಳ್ಳುವುದು ಸುಲಭವೇನಲ್ಲ. ಹಾಗಾಗಿ ಇದನ್ನು ಕರಗಿಸಲು ಪ್ರಯತ್ನಿಸುವವರು ಈ ಹೆಚ್ಚುವರಿ ಅಭ್ಯಾಸ ಮಾಡಬೇಕಾಗುತ್ತದೆ.
ಆದಾಗ್ಯೂ, ಇಲ್ಲೊಬ್ಬ ಮಹಿಳೆ 45 ಕೆ.ಜಿ ಗೂ ಹೆಚ್ಚು ತೂಕ ಇಳಿಸಿಕೊಂಡಿರುವ ಬಗ್ಗೆ ತನ್ನ ಇನ್​ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಆಕೆಯ ಗಣನೀಯ ತೂಕ ಕಡಿಮೆ ಮಾಡಲು ಈ ವ್ಯಾಯಾಮಗಳು ಸಹಾಯ ಮಾಡಿವೆ ಎಂದು ತಿಳಿಸಿದ್ದಾರೆ. ಹಾಗಿದ್ದರೆ, ಆ ವ್ಯಾಯಾಮಗಳು ಯಾವುದು ಎಂದು ನೋಡೋಣ ಬನ್ನಿ..
1. ಡಂಬ್ಬೆಲ್ ರಷ್ಯನ್ ಟ್ವಿಸ್ಟ್
ಹೊಟ್ಟೆಯಲ್ಲಿರುವ ಅಧಿಕ ಕೊಬ್ಬನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರು ಈ ಡಂಬ್ಬೆಲ್ ರಷ್ಯನ್ ಟ್ವಿಸ್ಟ್ ಉತ್ತಮ ವ್ಯಾಯಾಮವಾಗಿದೆ. ಈ ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದರಿಂದ ಭುಜದ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರೊಟೇಷನಲ್ ಬಲವನ್ನು ಹೆಚ್ಚಿಸಿ ಸ್ಥಿರತೆಯನ್ನು ಸುಧಾರಿಸುತ್ತದೆ. ಹಾಗೆಯೇ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮವು ಸರಳವಾಗಿ ಆರೋಗ್ಯಕರ ದೇಹವನ್ನು ನಿರ್ಮಾಣ ಮಾಡುತ್ತದೆ.

2. ಕಾಲು ಎತ್ತುವ ವ್ಯಾಯಾಮ

ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳುವವರು ಈ ವ್ಯಾಯಾಮವನ್ನು ಪ್ರತಿನಿತ್ಯ 10 ನಿಮಿಷ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾದ ಅಧಿಕ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಆಸನವು ಕೆಳ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ದೈಹಿಕ ಶಕ್ತಿ ಮತ್ತು ಸಮತೋಲನವನ್ನು ಬೆಳೆಸಿ, ತೂಕ ನಿಯಂತ್ರಸುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ. ಈ ಸರಳ ವ್ಯಾಯಾಮವು ಆರೋಗ್ಯಕರ ದೇಹ ನಿರ್ಮಾಣಕ್ಕೆ ಅತ್ಯುತ್ತಮವಾಗಿದೆ.

3. ಪರ್ಯಾಯ ಕಾಲು ಎತ್ತುವ ವ್ಯಾಯಾಮ

ಪರ್ಯಾಯ ಕಾಲು ಎತ್ತುವಿಕೆ ವ್ಯಾಯಾಮವು ಕೆಳಭಾಗದ ಹೊಟ್ಟೆಯ ಮಾಂಸಗಳು, ಹಿಪ್ ಫ್ಲೆಕ್ಸರ್‌ಗಳನ್ನು ಗಟ್ಟಿಗೊಳಿಸುತ್ತದೆ. ಇದು ಕೋರ್ ಸ್ಥಿರತೆ ಹೆಚ್ಚಿಸಿ, ಸಮತೋಲನ ಮತ್ತು ಸಮನ್ವಯ ಸುಧಾರಿಸುತ್ತದೆ. ಹಾಗೆಯೇ ತೂಕವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 3 ನಿಮಿಷಗಳ ಕಾಲ ಈ ವ್ಯಾಯಾಮವನ್ನು ಮಾಡುವುದರಿಂದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಾಯವಾಗುತ್ತದೆ.

4. ಲೆಗ್ ರೈಸ್ ಹೋಲ್ಡ್

ಲೆಗ್ ರೈಸ್ ಹೋಲ್ಡ್ ವ್ಯಾಯಾಮವು ಕೆಳಭಾಗದ ಹೊಟ್ಟೆಯ ಮಾಂಸಗಳು ಮತ್ತು ಸೊಂಟದ ಸುತ್ತಳತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ದೇಹದ ಸಮತೋಲನವನ್ನು ಕಾಪಾಡುತ್ತದೆ. ಈ ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದುರಿಂದ ಹೊಟ್ಟೆಯಲ್ಲಿರುವ ಅಧಿಕ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

5. ಡಂಬ್ಬೆಲ್ ಹಾಫ್ ಕ್ರಂಚ್

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಡಂಬ್ಬೆಲ್ ಹಾಫ್ ಕ್ರಂಚ್ ವ್ಯಾಯಾಮವನ್ನು ಮಾಡುವುದು ಉತ್ತಮವಾಗಿದೆ. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಈ ವ್ಯಾಯಾಮವನ್ನು ಪ್ರತಿನಿತ್ಯ 2 ನಿಮಿಷ ಮಾಡಿರಿ. ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಬಲಪಡಿಸುತ್ತದೆ.
ತೂಕ ಇಳಿಸಿಕೊಳ್ಳಲು ಸೇವಿಬೇಕಾದ ಆಹಾರಗಳು?
ತೂಕ ಇಳಿಸಿಕೊಳ್ಳಲು ಪೌಷ್ಟಿಕ, ಕಡಿಮೆ ಕ್ಯಾಲರಿ ಆಹಾರಗಳನ್ನು ಸೇವಿಸಬೇಕು. ಹಣ್ಣುಗಳಲ್ಲಿ ಸೇಬು, ಬೆರ್ರಿ, ತರಕಾರಿಗಳಲ್ಲಿ ಪಾಲಕ್, ಬ್ರೊಕೊಲಿಯನ್ನು ಹೆಚ್ಚು ತಿನ್ನಬೇಕು. ಇವು ದೇಹಕ್ಕೆ ಫೈಬರ್​ ಸರಬರಾಹಜು ಮಾಡಿ, ತೃಪ್ತಿ ನೀಡುತ್ತವೆ. ಓಟ್ಸ್, ಬ್ರೌನ್ ರೈಸ್, ಚಿಕನ್, ಮೀನು, ಮೊಸರು, ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಹಾಗೆಯೇ ಕನಿಷ್ಟ 3-4 ಲೀಟರ್​ ನೀರು ಕುಡಿಯುವುದು. ಈ ಆಹಾರಗಳು ದೇಹದಲ್ಲಿ ಮೆಟಬಾಲಿಸಂ ಹೆಚ್ಚಿಸಿ, ದಹನ ಸುಧಾರಿಸುತ್ತವೆ.
ಈ ವ್ಯಾಯಾಮಗಳು ಮತ್ತು ಆಹಾರ ಪದ್ಧತಿಗಳು ಫಿಟ್ನೆಸ್ ಪ್ರಭಾವಿಗಳಿಗೆ ಅದ್ಭುತ ವ್ಯತ್ಯಾಸವನ್ನು ನೀಡಿದರೂ, ನೀವು ಬಯಸಿದ ಫಲಿತಾಂಶಗಳನ್ನು ಸಾಧಿಸಲು ಸರಿಯಾದ ದೈಹಿಕ ಆಕಾರವನ್ನು ಕಾಯ್ದುಕೊಳ್ಳಬೇಕು. ನಿರ್ದಿಷ್ಟ ಆಹಾರವನ್ನು ಅನುಸರಿಸುವಾಗ ಸರಿಯಾದ ಆಹಾರವನ್ನು ಸೇವಿಸಬೇಕು. ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೊದಲು ವೈದ್ಯರ ಸಂಪರ್ಕಿಸುವುದು ಉತ್ತಮವಾಗಿದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net