ಭಾರತೀಯರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಏಕೆ ಹೆಚ್ಚು? ಇಲ್ಲಿದೆ ಹೃದ್ರೋಗ ತಜ್ಞರ ವಿಶೇಷ ವಿಶ್ಲೇಷಣೆ...Bad cholesterol

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Bad cholesterol: ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಹೃದಯಾಘಾತದ ಪ್ರಕರಣಗಳು ಸುನಾಮಿಯಂತೆ ಏರಿಕೆಯಾಗುತ್ತಲೇ ಇವೆ. ಅಂಕಿ ಅಂಶಗಳ ಪ್ರಕಾರ, 2014 ಮತ್ತು 2019 ರ ನಡುವೆ ದೇಶದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಈ ಅಂಕಿ ಅಂಶವು ವೈದ್ಯಕೀಯ ಲೋಕ ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.

ವಯಸ್ಸಿನ ಮಿತಿ ಮೀರಿದ ಆಘಾತ

ಒಂದು ಕಾಲದಲ್ಲಿ ಹೃದಯಾಘಾತ ಎನ್ನುವುದು ಕೇವಲ 60 ವರ್ಷ ಮೇಲ್ಪಟ್ಟವರಿಗೆ ಅಥವಾ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ, ಈಗ ಚಿಕ್ಕ ವಯಸ್ಸಿನಲ್ಲಿಯೇ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಪ್ರಾಣವನ್ನು ಕಳೆದುಕೊಳ್ಳಲಿದ್ದಾರೆ. ಇದು ಬದಲಾಗುತ್ತಿರುವ ಜೀವನಶೈಲಿ, ಜಂಕ್ ಫುಡ್ ಸೇವನೆ ಹೆಚ್ಚುತ್ತಿರುವುದು, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ಅನಿಯಮಿತ ದಿನಚರಿಯಿಂದ ಹೃದಯದ ಆರೋಗ್ಯಕ್ಕೆ ಗಮನಾರ್ಹ ಹಾನಿಯನ್ನುಂಟುಮಾಡುತ್ತಿವೆ.
ಕೊಲೆಸ್ಟ್ರಾಲ್ ದೇಹದಲ್ಲಿ ಯಾವುದೇ ಗಮನಾರ್ಹ ಲಕ್ಷಣಗಳಿಲ್ಲದೆ ಹೆಚ್ಚಾಗಿ ಸಂಗ್ರಹವಾಗುತ್ತದೆ. ಒಬ್ಬ ವ್ಯಕ್ತಿಯು ಎದೆ ನೋವು, ಉಸಿರಾಟದ ತೊಂದರೆ, ಮತ್ತು ಆಯಾಸವನ್ನು ಅನುಭವಿಸುವ ಹೊತ್ತಿಗೆ, ಹೃದಯದ ಅಪಧಮನಿಗಳಲ್ಲಿ ಅಡಚಣೆ ಉಂಟಾಗಿ ಹೃದಯಘಾತ ಹೆಚ್ಚಾಗಬಹುದು.

ಭಾರತೀಯರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್​ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ. ಆದರೆ, ಭಾರತೀಯರಲ್ಲಿ ಕಡಿಮೆ ಒಳ್ಳೆಯ ಕೊಲೆಸ್ಟ್ರಾಲ್​ ಹಾಗೂ ಹೆಚ್ಚಿನ ಕೆಟ್ಟ ಕೊಲೆಸ್ಟ್ರಾಲ್​ ಇರುವುದರಿಂದ ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂದು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಅಧ್ಯಕ್ಷ ಡಾ. ಪ್ರವೀಣ್ ಚಂದ್ರ ಹೇಳುತ್ತಾರೆ.
ಭಾರತವು ಪ್ರಸ್ತುತ ಹೃದಯ ಸಂಬಂಧಿ ಕಾಯಿಲೆಗಳ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ, ಭಾರತೀಯ ವೈದ್ಯರ ಸಂಘ ಪ್ರಕಾರ, ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತೀಯರು ಹೃದಯಾಘಾತ ಮತ್ತು ಇತರ ಹೃದಯೀ ಸಂಬಂಧೀ ಕಾಯಿಲೆಗಳಿಂದ ಸುಮಾರು 10 ವರ್ಷಗಳ ಹಿಂದಿನಿಂದಲೇ ಬಳಲುತ್ತಿದ್ದಾರೆ. ಇದರರ್ಥ ಇತರ ದೇಶಗಳಲ್ಲಿ ವಯಸ್ಸಾದ ಜನರಲ್ಲಿ ಈ ಸಮಸ್ಯೆಗಳು ಕಂಡುಬಂದರೆ, ಭಾರತದಲ್ಲಿ ಯುವಕರಲ್ಲಿಯೇ ಹೆಚ್ಚಾಗಿ ಈ ಸಮಸ್ಯೆಗಳು ಕಂಡು ಬರುತ್ತವೆ ಎಂದು ಹೇಳಿದ್ದಾರೆ.

ಭಾರತೀಯರಲ್ಲಿ ಹೃದಯ ಕಾಯಿಲೆ ಬೇಗ ಏಕೆ ಬರುತ್ತದೆ?

ಭಾರತೀಯರಲ್ಲಿ ಹೃದಯ ಕಾಯಿಲೆಯ ಅಪಾಯವು ಕೇವಲ ಆಹಾರ ಪದ್ಧತಿಗೆ ಸೀಮಿತವಾಗಿಲ್ಲ. ನಮ್ಮ ದೇಹದ ರಚನೆ ಮತ್ತು ಜೀವಕೋಶಗಳ ರಚನೆಯಲ್ಲಿ ಆಳವಾಗಿ ಬೇರೂರಿದೆ. ಹಾಗಾಗಿ 10 ವರ್ಷಗಳ ಮುಂಚೆಯೇ ಹೃದಯ ಕಾಯಿಲೆಗಳಿಗೆ ಒಳಪಡಬೇಕಾಗುತ್ತದೆ.

ಹೃದಯ ಕಾಯಿಲೆಯನ್ನು ದೂರವಿಡುವುದು ಹೇಗೆ

ಭಾರತದಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳೆಂದರೆ ಕಳಪೆ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ಒತ್ತಡ, ಬೊಜ್ಜು ಮತ್ತು ದೈಹಿಕ ಚಟುವಟಿಕೆಗಳ ಕೊರತೆ. ಈ ಎಲ್ಲಾ ಸಮಸ್ಯೆಗಳು ಆರೋಗ್ಯಕ್ಕೆ ಗಮನಾರ್ಹ ಅಪಾಯವನ್ನುಂಟು ಮಾಡುತ್ತದೆ. ನೀವೇನಾದರೂ, ಸಮಯಕ್ಕೆ ಸರಿಯಾಗಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳದಿದ್ದರೆ, ಹೃದಯಾಘಾತಕ್ಕೆ ಒಳಗಾಗಬೇಕಾಗುತ್ತದೆ.
ಕೆಲವೊಮ್ಮೆ ನಮ್ಮ ಕೆಟ್ಟ ಅಭ್ಯಾಸಗಳು, ಜೀವನಶೈಲಿಯು ಕೊಲೆಸ್ಟ್ರಾಲ್​ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರಿಂದ ಇದು ಕೆಟ್ಟ ಕೊಲೆಸ್ಟ್ರಾಲ್​ ಕಡಿಮೆ ಮಾಡಬೇಕೆಂದು ಬಯಸಿದರೆ, ಸರಿಯಾದ ಆಹಾರ ಮತ್ತು ದೈನಂದಿನ ವ್ಯಾಯಾಮವನ್ನು ನಿಮ್ಮ ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಳ್ಳುವುದು ಉತ್ತಮ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net