ಸೊಳ್ಳೆಗಳು ಮನುಷ್ಯರನ್ನೇ ಏಕೆ ಹೆಚ್ಚು ಕಚ್ಚುತ್ತವೆ? ಇದರ ಹಿಂದಿರುವ ವೈಜ್ಞಾನಿಕ ರಹಸ್ಯ ಇಲ್ಲಿದೆ..Mosquitoes bite

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಸೊಳ್ಳೆಗಳು ಜನರ ನಿದ್ರೆಗ ಭಂಗ ತರುವಲ್ಲಿ ಎತ್ತಿದ ಕೈ ಅಂದರೆ ತಪ್ಪಾಗದು
  • ಕೆಲವೊಮ್ಮೆ ಅವು ನಿದ್ರೆಗೆ ಭಂಗ ತರುವುದರ ಜೊತೆಗೆ ರೋಗದ ಅಪಾಯವನ್ನು ಹೆಚ್ಚಿಸುತ್ತದೆ
  • ಈ ಸೊಳ್ಳೆಗಳು ಮನುಷ್ಯರನ್ನೇ ಹೆಚ್ಚಾಗಿ ಏಕೆ ಕಚ್ಚುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
  • ವಿಜ್ಞಾನದ ಪ್ರಕಾರ, ಸೊಳ್ಳೆಗಳು ಮನುಷ್ಯರನ್ನು ಕಚ್ಚುವುದು ಕಾಕತಾಳೀಯವಲ್ಲ
Mosquitoes bite: ಸೊಳ್ಳೆಗಳು ಜನರ ನಿದ್ರೆಗ ಭಂಗ ತರುವಲ್ಲಿ ಎತ್ತಿದ ಕೈ ಅಂದರೆ ತಪ್ಪಾಗದು. ಕೆಲವೊಮ್ಮೆ ಅವು ನಿದ್ರೆಗೆ ಭಂಗ ತರುವುದರ ಜೊತೆಗೆ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಈ ಸೊಳ್ಳೆಗಳು ಮನುಷ್ಯರನ್ನೇ ಹೆಚ್ಚಾಗಿ ಏಕೆ ಕಚ್ಚುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆದರೆ, ವಿಜ್ಞಾನದ ಪ್ರಕಾರ, ಸೊಳ್ಳೆಗಳು ಮನುಷ್ಯರನ್ನು ಕಚ್ಚುವುದು ಕಾಕತಾಳೀಯವಲ್ಲ ಎಂದು ನಿರೂಪಿಸಿದೆ. ಹಾಗಿದ್ದರೆ, ಆ ಕಾರಣ ಆದ್ರೂ ಏನು ಎಂಬುದನ್ನು ನೋಡೋಣ ಬನ್ನಿ....
ಬ್ರೆಜಿಲ್‌ನ ಕಾಡುಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಜೀವವೈವಿಧ್ಯತೆ ಕ್ಷೀಣಿಸುತ್ತಿದ್ದಂತೆ, ಸೊಳ್ಳೆಗಳು ಮಾನವ ರಕ್ತದ ಮೇಲೆ ಹೆಚ್ಚು ಅವಲಂಬಿತವಾಗುತ್ತವೆ ಎಂದು ಬಹಿರಂಗಪಡಿಸಿದ್ದಾರೆ. ಇದು ಇಂದಿನ ದಿನಗಳಲ್ಲಿ ಕಾಡುಗಳನ್ನು ಕಡಿಯುತ್ತಿರುವುದರಿಂದ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಸೊಳ್ಳೆಗಳು ಮನುಷ್ಯರನ್ನು ಸುಲಭವಾಗಿ ಬೇಟೆಯಾಡುತ್ತಿವೆ ಎಂದು ವರದಿ ಮಾಡಿದ್ದಾರೆ.
ರಿಯೊ ಡಿ ಜನೈರೊದ ಫೆಡರಲ್ ವಿಶ್ವವಿದ್ಯಾಲಯ ಮತ್ತು ಓಸ್ವಾಲ್ಡೊ ಕ್ರೂಜ್ ಸಂಸ್ಥೆಯ ವಿಜ್ಞಾನಿಗಳು ಸೊಳ್ಳೆಗಳನ್ನು ಹಿಡಿಯಲು ಬೆಳಕಿನ ಬಲೆಗಳನ್ನು ಬಳಸಿದರು. ಅವರು 52 ವಿವಿಧ ಜಾತಿಗಳಿಂದ ಸುಮಾರು 1,700 ಸೊಳ್ಳೆಗಳನ್ನು ಸಂಗ್ರಹಿಸಿದರು.
ಈ ಸಮಯದಲ್ಲಿ ಸಂಶೋಧಕರು ರಕ್ತದಿಂದ ತುಂಬಿದ್ದ ಹೆಣ್ಣು ಸೊಳ್ಳೆಗಳನ್ನು ಪ್ರತ್ಯೇಕಿಸಿದರು. ಇದರಲ್ಲಿ 24 ಗುರುತಿಸಬಹುದಾದ ರಕ್ತದ ಡಿಎನ್‌ಎ ಹೊಂದಿದ ಸೊಳ್ಳೆಗಳಿದ್ದವು. ಆಶ್ಚರ್ಯಕರವಾಗಿ, 18 ವಿಭಿನ್ನ ಮಾನವ ರಕ್ತದ ಮಾದರಿಗಳು ಕಂಡುಬಂದವು. ನಂತರ 6 ಸೊಳ್ಳೆಗಳಲ್ಲಿ ಪಕ್ಷಿಗಳ ಡಿಎನ್​ಎ ಕಂಡುಬಂಡವು. ಕಪ್ಪೆಗಳು, ಇಲಿಗಳು ಮತ್ತು ಕಾಡು ನಾಯಿಗಳು ತಲಾ ಒಂದೊಂದು ಸೊಳ್ಳೆಗಳಲ್ಲಿ ಕಂಡುಬಂದಿದೆ ಎಂದಿದ್ದಾರೆ.

ಮನುಷ್ಯರ ಮೇಲಿನ ಅವಲಂಬನೆ ಏಕೆ ಹೆಚ್ಚುತ್ತಿದೆ?

ವಿಜ್ಞಾನಿಗಳ ಪ್ರಕಾರ, ಉಳಿದಿರುವ ಅರಣ್ಯ ಪ್ರದೇಶಗಳಲ್ಲಿಯೂ ಸಹ ಸೊಳ್ಳೆಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಅರಣ್ಯನಾಶದಿಂದಾಗಿ ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಮನುಷ್ಯರ ಸಂಖ್ಯೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಸೊಳ್ಳೆಗಳು ಆಹಾರಕ್ಕಾಗಿ ಮನುಷ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.

ಈ ಬದಲಾವಣೆ ಆರೋಗ್ಯಕ್ಕೆ ಏಕೆ ಅಪಾಯಕಾರಿ?

ಈ ಬದಲಾವಣೆ ಸೊಳ್ಳೆ ಕಡಿತಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇವು ಸೋಂಕಿತ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾ ಮತ್ತು ಜಿಕಾದಂತಹ ಅನೇಕ ಅಪಾಯಕಾರಿ ರೋಗಗಳಿಗೆ ವಾಹಕಗಳಾಗಿವೆ. ಅವು ಹೆಚ್ಚು ಜನರನ್ನು ಕಚ್ಚಿದರೆ, ರೋಗಗಳನ್ನು ಹರಡುವ ಅಪಾಯವು ಹೆಚ್ಚಾಗುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net