ಮಹಿಳೆಯರೇ ಇದನ್ನೊಮ್ಮೆ ಓದಿ...ಮುಟ್ಟಿನ ರಕ್ತಸ್ರಾವದ ಸರಿಯಾದ ಪ್ರಮಾಣವೆಷ್ಟು..? ವೈದ್ಯರ ಮಾತು ಹೀಗಿದೆ..Menstruation

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮುಟ್ಟು ಅಥವಾ ಮಾಸಿಕ ರಕ್ತಸ್ರಾವ ಮಹಿಳೆಯ ದೇಹದಲ್ಲಿ ನಡೆಯುವಂತಹ ಒಂದು ಪ್ರಕ್ರಿಯೆಯಾಗಿದೆ
  • ಈ ಚಕ್ರವು ಪ್ರತಿ ತಿಂಗಳು ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಆಗುತ್ತದೆ
  • ಆರೋಗ್ಯವಂತ ಮಹಿಳೆಯ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಎಷ್ಟು ಪ್ರಮಾಣದಲ್ಲಿರಬೇಕು?
Menstruation: ಮುಟ್ಟು ಅಥವಾ ಮಾಸಿಕ ರಕ್ತಸ್ರಾವ ಮಹಿಳೆಯ ದೇಹದಲ್ಲಿ ನಡೆಯುವಂತಹ ಒಂದು ಪ್ರಕ್ರಿಯೆಯಾಗಿದೆ. ಈ ಚಕ್ರವು ಪ್ರತಿ ತಿಂಗಳು ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಹಾಗೂ ಆರೋಗ್ಯ ಅಂಶಗಳಿಂದ ನಡೆಯುತ್ತವೆ. ಆದರೆ, ಕೆಲವೊಮ್ಮೆ ರಕ್ತಸ್ರಾವದ ಪ್ರಮಾಣವು ನೋವು ಮತ್ತು ಮುಟ್ಟಿನ ಚಕ್ರದಲ್ಲಿ ಮಧ್ಯಂತರ ಬದಲಾವಣೆಗಳು ದೇಹದಿಂದ ಪ್ರಮುಖ ಎಚ್ಚರಿಕೆಗಳಾಗಿವೆ. ಪ್ರತಿಯೊಬ್ಬ ಆರೋಗ್ಯವಂತ ಮಹಿಳೆಯ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಎಷ್ಟು ಪ್ರಮಾಣದಲ್ಲಿ ಸಂಭವಿಸಬೇಕು ಎಂಬುದನ್ನು ಗಮನಿಸೋಣ...
ಮುಟ್ಟು ಸಾಮಾನ್ಯವಾಗಿ 3 ರಿಂದ 7 ದಿನಗಳವರೆಗೆ ಇರುತ್ತದೆ. ಸರಾಸರಿ ಮುಟ್ಟಿನ ಹರಿವು ಸುಮಾರು 30 ರಿಂದ 40 ಮಿಲಿಲೀಟರ್‌ಗಳು ಅಂದರೆ, (2-3 ಚಮಚಗಳಷ್ಟು) ಕೆಲವು ಸಂಶೋಧನೆಗಳ ಪ್ರಕಾರ,  ರಕ್ತದ ಪ್ರಮಾಣ 20 ರಿಂದ 80 ಮಿ.ಲೀ. (ಅಂದಾಜು 4-16 ಚಮಚ) ಎಂದು ಸೂಚಿಸಿದೆ.
ಮುಟ್ಟಿನ ರಕ್ತವು ಲೋಳೆ, ಫಾಲೋಪಿಯನ್ ಟ್ಯೂಬ್‌ಗಳ ಒಳಪದರ ಮತ್ತು ಇತರ ಅಂಗಾಂಶಗಳನ್ನು ಸಹ ಹೊಂದಿರುತ್ತದೆ. ಇದು ದೇಹದಿಂದ ಹೊರಬರುವ ರಕ್ತಸ್ರಾವವನ್ನು ಭಾರವಾಗಿ ಕಾಣುವಂತೆ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಸುಮಾರು 36 ಪ್ರತಿಶತ ರಕ್ತ ಮತ್ತು 64 ಪ್ರತಿಶತ ಇತರ ಅಂಶಗಳಾಗಿವೆ.

ರಕ್ತಸ್ರಾವವನ್ನು ಯಾವಾಗ ಗಂಭೀರವಾಗಿ ಪರಿಗಣಿಸಬೇಕು?

ಮುಟ್ಟಿನ ಸಮಯದಲ್ಲಿ ರಕ್ತದ ಪ್ರಮಾಣ 60 ಮಿ.ಲೀ ಕ್ಕಿಂತ ಹೆಚ್ಚಾಗಿ ಹೋಗುತ್ತಿದ್ದರೆ, ಅದನ್ನು ಅತಿ ರಕ್ತಸ್ರಾವ ಎಂದು ಪರಿಗಣಿಸಲಾಗುತ್ತದೆ. ಕೆಲವು ವರದಿಗಳು 80 ಮಿ.ಲೀ ಎಂದು ಸೂಚಿಸುತ್ತವೆ. ಹಾಗೆಯೇ 7 ದಿನಕ್ಕಿಂತ ಹೆಚ್ಚು ದಿನಗಳವರೆಗೆ ರಕ್ತಸ್ರಾವ ಆಗುತ್ತಿದ್ದರೆ, ಗಂಟೆಗೊಂದರಂತೆ ಪ್ಯಾಡ್​ನ್ನು ಬದಲಾಯಿಸುತ್ತಿದ್ದರೆ, ದೊಡ್ಡ ಗಡ್ಡೆಯಲ್ಲಿ ರಕ್ತ ಬರುತ್ತಿದ್ದರೆ ಇದನ್ನು ಭಾರೀ ರಕ್ತಸ್ರಾವದ ಸಂಕೇತ ಎಂದು ಪರಿಗಣಿಸಬಹುದು.

ಭಾರೀ ರಕ್ತಸ್ರಾವವನ್ನು ಮೇಲ್ವಿಚಾರಣೆ ಮಾಡುವುದು ಏಕೆ ಮುಖ್ಯ?

* ನಿಮ್ಮ ದೇಹದಿಂದ ಅತಿಯಾಗಿ ರಕ್ತಸ್ರಾವ ಉಂಟಾದರೆ, ಪ್ರತಿ ತಿಂಗಳು 80 ಮಿ.ಲೀ ಕ್ಕಿಂತ ಹೆಚ್ಚಾಗಿದ್ದರೆ, ಅದರಿಂದ ರಕ್ತಹೀನತೆ ಉಂಟಾಗುತ್ತದೆ. ಇದು ಆಯಾಸ, ತಲೆ ಸುತ್ತು, ತ್ವಚೆ ಮಸುಕು, ಕೂದಲು ಉದುರುವುವಂತೆ ಮಾಡುತ್ತದೆ. 
* ದೀರ್ಘಕಾಲದವರೆಗೆ ಹೀಗೆ ಮುಂದುವರೆದರೆ, ಹೀಮೋಗ್ಲೋಬಿನ್ ಕಡಿಮೆಯಾಗಿ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ.
* ಇದು  ಥೈರಾಯ್ಡ್, PCOS, ಗರ್ಭಕೋಶದ ಗಂಟು (Fibroid), ಎಂಡೋಮೆಟ್ರಿಯೋಸಿಸ್ ಅಥವಾ ರಕ್ತ ಗಡ್ಡೆಯಾಗದ ತೊಂದರೆಗಳನ್ನು ಗುರುತಿಸಲು ಸಾಧ್ಯವಾಗದೇ ಇರಬಹುದು.
* ಕೆಲವೊಮ್ಮೆ ಇದು ಗರ್ಭಕೋಶದ ಕ್ಯಾನ್ಸರ್​ನ  ಮೊದಲ ಲಕ್ಷಣವೂ ಆಗಿರಬಹುದು.
ಈ ಎಲ್ಲಾ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ನೀವೇನಾದರೂ ನಿರಂತರವಾಗಿ ಈ ಲಕ್ಷಣಗಳನ್ನು ಅನುಭವಿಸಿದರೆ, ಅವು ಆಂತರಿಕ ಸಮಸ್ಯೆಯ ಸಂಕೇತವಾಗಿರಬಹುದು. ಆದ್ದರಿಂದ ವೈದ್ಯರನ್ನು ಭೇಟಿ ಮಾಡುವುದು ಉತ್ತಮ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net