ನಿಮ್ಮ ಕಾಫಿ ಕಪ್ಪಿನ ಮೇಲೆ ನೊರೆ ಬರುತ್ತಿದೆಯೇ? ಈ ಗುಳ್ಳೆಗಳ ಹಿಂದಿದೆ ಒಂದು ಅಚ್ಚರಿಯ ವಿಜ್ಞಾನ! Bubbles on tea

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚಹಾ ಮತ್ತು ಕಾಫಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದನ್ನು ಪ್ರತಿಯೊಬ್ಬರೂ ಕೂಡ ಆನಂದಿಸಿ ಕುಡಿಯುತ್ತಾರೆ
  • ಕೆಲವೊಂದಿಷ್ಟು ಜನರು ಈ ಪಾನೀಯಗಳಿಲ್ಲದೇ, ಹಾಸಿಗೆ ಬಿಟ್ಟು ಎದ್ದೇಳುವುದೇ ಇಲ್ಲ
  • ಕಾಫಿ ಆಗಲೀ ಚಹಾ ಆಗಲಿ ಬಿಸಿ ಮಾಡಿದ ತಕ್ಷಣ ಅದರಲ್ಲಿ ಎರಡು ಗುಳ್ಳೆಗಳು ಬರುವುದನ್ನು ನಾವು ನೋಡಿರುತ್ತೇವೆ
Bubbles on tea: ಚಹಾ ಮತ್ತು ಕಾಫಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕೆಲವೊಂದಿಷ್ಟು ಜನರು ಈ ಪಾನೀಯಗಳಿಲ್ಲದೇ, ಹಾಸಿಗೆ ಬಿಟ್ಟು ಎದ್ದೇಳುವುದೇ ಇಲ್ಲ. ಇನ್ನೂ ಕೆಲವರು ಕಾಫಿ, ಚಹಾ ಕುಡಿದ ನಂತರವೇ ತಮ್ಮ ಕೆಲಸಗಳಿಗೆ ತೆರಳುವುದನ್ನು ನಾವು ಪ್ರತಿನಿತ್ಯ ಕಾಣಬಹುದು. ಈ ಪಾನೀಯಗಳು ಸುವಾಸನೆಯನ್ನು ಬೀರಿ ಎಲ್ಲರನ್ನೂ ಚೈತನ್ಯಗೊಳಿಸುವುದಲ್ಲದೇ, ಮನಸ್ಸನ್ನು ಉಲ್ಲಾಸದಿಂದ ಕೂಡಿರುವಂತೆ ಮಾಡುತ್ತದೆ.
ಕಾಫಿ ಆಗಲೀ ಚಹಾ ಆಗಲಿ ನೀವು ಬಿಸಿ ಮಾಡಿದ ತಕ್ಷಣ ಅದರಲ್ಲಿ ಎರಡು ಗುಳ್ಳೆಗಳು ಬರುವುದನ್ನು ನಾವು ನೋಡಿರುತ್ತೇವೆ. ಆದರೆ ಅದರ ಮೇಲಿನ ಗುಳ್ಳೆಗಳು ಎಲ್ಲಿಂದ ಬರುತ್ತದೆ ಎಂದು ಎಂದಾದರೂ ನೀವು ಯೋಚಿಸಿದ್ದೀರಾ? ಇದರ ಹಿಂದಿದೆ ವಿಜ್ಞಾನದ ರಹಸ್ಯ ಹಾಗಿದ್ದರೆ, ಅದು ಏನು ಎಂದು ತಿಳಿಯೋಣ ಬನ್ನಿ....

ಪ್ರೋಟೀನ್ ಮತ್ತು ಕೊಬ್ಬು ಕಾರಣಗಳು

ಚಹಾ ಅಥವಾ ಕಾಫಿ ಮಾಡುವಾಗ ಅದರಲ್ಲಿ ಕಾಣಿಸಿಕೊಳ್ಳುವ ನೊರೆ ಅಥವಾ ಗುಳ್ಳೆಗಳಿಗೆ ಪ್ರಮುಖ ಕಾರಣವೆಂದರೆ, ಅದನ್ನು ತಯಾರಿಸಲು ಬಳಸುವ ಹಾಲು. ಹಾಲು ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಹಾಗಾಗಿ ಅದನ್ನು ಕುದುಸಿದಾಗ ಅಥವಾ ತೀವ್ರವಾಗಿ ಅಲುಗಾಡಿಸಿದಾಗ, ಅದರ ಪ್ರೋಟೀನ್ ಅಣುಗಳನ್ನು ಒಡೆಯುತ್ತವೆ. ಬೇರ್ಪಟ್ಟ ಅಣುಗಳು ಗಾಳಿಯನ್ನು ಹಿಡಿದಿಟ್ಟುಕೊಂಡು ಸಣ್ಣ ಗುಳ್ಳೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
ನೀವು ನೊರೆಯಿಂದ ಕೂಡಿದ ಕಾಫಿ ಕುಡಿದಾಗ, ನಿಮ್ಮ ನಾಲಿಗೆಯ ಮೇಲೆ ಅವು ಸಿಡಿದು ಅದರ ಸುವಾಸನೆಯನ್ನು ನೇರವಾಗಿ ಮೂಗಿಗೆ ಕೊಂಡೊಯ್ಯುತ್ತವೆ. ಹಾಗಾಗಿ ನೊರೆಯಿಂದ ಕೂಡಿದ ಕಾಫಿ ನೊರೆ ಇಲ್ಲದ ಕಾಫಿಗಿಂತ ಹೆಚ್ಚು ರುಚಿ ಮತ್ತು ಸುವಾಸನೆಯನ್ನು ಬೀರುತ್ತದೆ.

ಗಾಳಿಯ ಒತ್ತಡ ಮತ್ತು ಪೊರಕೆ ಹೊಡೆಯುವ ತಂತ್ರ

ನೀವು ಕಾಫಿ ತಯಾರಿಸುವಾಗ ಕಾಫಿ ಪುಡಿ, ಸಕ್ಕರೆ ಮತ್ತು ಕೆಲವು ಹನಿ ನೀರನ್ನು ಸೇರಿಸಿ ಕುದಿಯಲು ಬಿಟ್ಟಾಗ ಅದರಲ್ಲಿರುವ ಹೊರಗಿನ ಗಾಳಿಯು ಆ ದಟ್ಟವಾದ ಮಿಶ್ರಣದೊಳಗೆ ಸೇರಿಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು 'ಗಾಳಿ ತುಂಬುವಿಕೆ' ಎಂದು ಕರೆಯಲಾಗುತ್ತದೆ. ಇದರಿಂದ ಪಾನೀಯ ಹಗುರವಾಗುತ್ತಾ ಹೋಗುತ್ತದೆ.
ಕಾಫಿಯಲ್ಲಿರುವ ನೈಸರ್ಗಿಕ ಎಣ್ಣೆಗಳು ಮತ್ತು ಸಕ್ಕರೆಗಳು ಸೇರಿದಾಗ ಗಾಳಿಯ ಗುಳ್ಳೆಗಳನ್ನು ಹಿಡಿದಿಟ್ಟುಕೊಳ್ಳುವ ಜುಗುಟಾದ ಪದರವನ್ನು ರೂಪಿಸುತ್ತದೆ. ಈ ಕಾರಣದಿಂದ ಯಂತ್ರದಿಂದ ತಯಾರಿಸಿದ ಕಾಫಿಯು ಉಗಿ ಒತ್ತಡದಿಂದಾಗಿ ಬಹಳಷ್ಟು ಫೋಮ್​ ಅನ್ನು ಹೊಂದಿರುತ್ತದೆ. ಇದನ್ನು "ಕ್ರೆಮಾ" ಎಂದೂ ಕರೆಯುತ್ತಾರೆ.

ಚಹಾದಲ್ಲಿರುವ ನೊರೆಯ ರಹಸ್ಯ

ಚಹಾ ಅಥವಾ ಕಾಫಿ ಮಾರಾಟ ಮಾಡುವವರು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಚಹಾವನ್ನು ಎತ್ತಿ ಹೊಯ್ದಾಗ ಚಹಾ ಮತ್ತು ಗಾಳಿಯು ವೇಗವಾಗಿ ಡಿಕ್ಕಿ ಹೊಡೆಯುತ್ತದೆ. ಈ ಪ್ರಕ್ರಿಯೆಯು ಚಹಾದ ಮೇಲ್ಮೈ ಗುಳ್ಳೆಗಳಾಗಿ ರೂಪುಗೊಳ್ಳಲು ಕಾರಣವಾಗುತ್ತದೆ. ಆದಾಗ್ಯೂ, ಚಹಾ ಎಲೆಯ ಸಾರ ಮತ್ತು ಹಾಲಿನ ಪ್ರೋಟೀನ್‌ಗಳು ಸೇರಿ ಸ್ವಲ್ಪ ಸಮಯದವರೆಗೆ ಫೋಮ್ ಅನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಚಹಾದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net