ನಿಮ್ಮ ತೂಕ ಇಳಿಕೆಯ ಕನಸಿಗೆ ತಣ್ಣೀರು ಎರಚುತ್ತಿವೆ ಈ ಆಹಾರಗಳು: ಇಂದೇ ಇವುಗಳಿಗೆ ಗುಡ್-ಬೈ ಹೇಳಿ! Weight Loss

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ತೂಕ ಇಳಿಸಿಕೊಳ್ಳುವುದು ಸುಲಭವಾದ ಮಾತೇನಲ್ಲ. ಇದಕ್ಕೆ ಪೂರಕ ಅಭ್ಯಾಸ, ಸರಳ ಆಹಾರ ಪದ್ಧತಿ ಮುಖ್ಯ
  • ಯಶಸ್ವಿ ತೂಕ ನಷ್ಟಕ್ಕೆ ಪ್ರಮುಖ ಕಾರಣವೆಂದರೆ ಕ್ಯಾಲೊರಿಗಳನ್ನು ಎಣಿಸುವುದು ಮಾತ್ರವಲ್ಲ
  • ಬದಲಾಗಿ ನಿಮ್ಮ ಆಹಾರದ ಆಯ್ಕೆಗಳ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯವಾಗಿರುತ್ತದೆ
Weight Loss: ತೂಕ ಇಳಿಸಿಕೊಳ್ಳುವುದು ಸುಲಭವಾದ ಮಾತೇನಲ್ಲ. ಇದಕ್ಕೆ ಪೂರಕ ಅಭ್ಯಾಸ, ಸರಳ ಆಹಾರ ಪದ್ಧತಿ ಹೊಂದಾಣಿಕೆ ಅಗತ್ಯವಾಗಿದೆ. ಯಶಸ್ವಿ ತೂಕ ನಷ್ಟಕ್ಕೆ ಪ್ರಮುಖ ಕಾರಣವೆಂದರೆ ಕ್ಯಾಲೊರಿಗಳನ್ನು ಎಣಿಸುವುದು ಮಾತ್ರವಲ್ಲ. ಬದಲಾಗಿ ನಿಮ್ಮ ಆಹಾರದ ಆಯ್ಕೆಗಳ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯವಾಗಿರುತ್ತದೆ.
ಕೆಲವೊಮ್ಮೆ ನೀವು ಸೇವಿಸುವ ಆಹಾರಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಅವುಗಳನ್ನು ಅರಿತುಕೊಳ್ಳದೇ ಅನೇಕ ಜನರು ತೂಕ ಇಳಿಸಿಕೊಳ್ಳುವ ಪ್ರಯಾಣಗಳನ್ನು ಕೈಗೊಳ್ಳುತ್ತಾರೆ. ನೀವೇನಾದರೂ, ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ಈ ಆಹಾರಗಳನ್ನು ಇಂದಿನಿಂದಲೇ ಹೊರಗಿಡಿ.

1. ಸಕ್ಕರೆ ಪಾನೀಯಗಳು

ಸೋಡಾ, ಸಿಹಿಗೊಳಿಸಿದ ಕಾಫಿ, ಹಣ್ಣಿನ ರಸದಂತಹ ಪಾನೀಯಗಳು ಸಕ್ಕರೆ ಮತ್ತು ಕ್ಯಾಲೋರಿಗಳಿಂದ ತುಂಬಿರುತ್ತದೆ. ಆದರೆ, ಇವು ಪೌಷ್ಟಿಕಾಂಶಗಳನ್ನು ಹೊಂದಿರುವುದಿಲ್ಲ. ಇವುಗಳ ಸೇವನೆಯು ದೇಹದ ಹೆಚ್ಚುವರಿ ಕ್ಯಾಲೊರಿಗೆ ಕಾರಣವಾಗಬಹುದು. ಆದರಿಂದ ಸಕ್ಕರೆ ಪಾನೀಯಗಳ ಬದಲಿಗೆ ನೀರು, ಗಿಡಮೂಲಿಕೆ ಚಹಾ ಅಥವಾ ಕಷಾಯವನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.

2. ತ್ವರಿತ ಆಹಾರ

ಇತ್ತೀಚಿನ ದಿನಗಳಲ್ಲಿ ಹಲವಾರು ಜರನು ಪಾಸ್ಟ್​ಫುಡ್​ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ, ಈ ಆಹಾರವು ಅನಾರೋಗ್ಯಕರ ಕೊಬ್ಬುಗಳು, ದೇಹದಲ್ಲಿ ಸಕ್ಕರೆ ಹೆಚ್ಚಳ ಮತ್ತು ಕ್ಯಾಲೊರಿಗಳಿಂದ ತುಂಬಿರುತ್ತದೆ. ಹೆಚ್ಚಾಗಿ ಈ ಆಹಾರ ಸೇವಿಸುವುದರಿಂದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾಗಿ ನೀವೇನಾದರೂ ತೂಕ ಇಳಿಸಿಕೊಳ್ಳಲು ಬಯಸಿದರೆ, ಮನೆಯಲ್ಲೇ ಆಹಾರವನ್ನು ಬೇಯಿಸಿ ತಿನ್ನಿರಿ.

3. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು

ಸಂಸ್ಕರಿಸಿದ ಧಾನ್ಯಗಳಲ್ಲಿ ನಾರಿನಂಶ ಕಡಿಮೆಯಿರುವುದರಿಂದ ಇದು ದೇಹದಲ್ಲಿ ಸಕ್ಕರೆ ತ್ವರಿತ ಏರಿಕೆಗೆ ಕಾರಣವಾಗುತ್ತದೆ. ಇದನ್ನು ಸೇವಿಸಿದ ಕೆಲವೇ ಸಮಯದ ನಂತರ ಪುನಃ ಹಸಿವಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಬಿಳಿ ಬ್ರೆಡ್​​ಗಳ ಬದಲಿಗೆ ಧಾನ್ಯದ ಆಯ್ಕೆ, ಕ್ವಿನೋವಾ, ಕಂದು ಅಕ್ಕಿ ಅಥವಾ ಸಿಹಿ ಆಲೂಗಡ್ಡೆಯಂತಹ ಕಾರ್ಬೋಹೈಡ್ರೇಟ್‌ಗಳ ಪರ್ಯಾಯ ಮೂಲಗಳನ್ನು ಆರಿಸಿಕೊಳ್ಳಿ. ಇವು ಹೊಟ್ಟೆಯನ್ನು ತುಂಬಿಸುವುದರ ಜೊತೆಗೆ ದೀರ್ಘಕಾಲಿನ ಶಕ್ತಿಯನ್ನು ಒದಗಿಸುತ್ತದೆ.

4. ಸಂಸ್ಕರಿಸಿದ ಆಹಾರಗಳು

ಚಿಪ್ಸ್, ಕ್ರ್ಯಾಕರ್ಸ್ ಮತ್ತು ಸಂಸ್ಕರಿಸಿದ ತಿಂಡಿಗಳಲ್ಲಿ ಕ್ಯಾಲರಿ ಹೆಚ್ಚಾಗಿರುತ್ತದೆ. ಈ ಆಹಾರಗಳನ್ನು ರುಚಿಗಾಗಿ ತಯಾರಿಸಲಾಗಿರುತ್ತದೆ. ಇವುಗಳ ಸೇವನೆಯಿಂದ ದೇಹದಲ್ಲಿ ತೂಕ ಹೆಚ್ಚಾಗಬಹುದು. ಹಾಗಾಗಿ ಹಣ್ಣುಗಳು, ಧಾನ್ಯಗಳೊಂದಿಗೆ ಸೇವಿಸುವುದರಿಂದ ದೇಹದಲ್ಲಿ ತೂಕವನ್ನು ನಿಯಂತ್ರಿಸಿಕೊಳ್ಳಬಹುದು. ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ, ದಿನವಿಡೀ ಉತ್ತಮ ಶಕ್ತಿ ಮಟ್ಟವನ್ನು ನೀಡುತ್ತದೆ.

5. ಹೆಚ್ಚಿನ ಕ್ಯಾಲೋರಿ ಹೊಂದಿರುವ ಮಸಾಲೆಗಳು

ಮೇಯನೇಸ್, ಸಾಸ್​, ಕೆಚಪ್​ನಂತಹ ಕಾಂಡಿಮೆಂಟ್​ಗಳು ಸೇರಿರುವ ಆಹಾರವನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಇವು ರುಚಿಯನ್ನು ಹೆಚ್ಚಿಸುತ್ತದೆ. ಆದರೆ, ಅವುಗಳ ಸಕ್ಕರೆಯಿಂದ ಕೂಡಿರುವುದರಿಂದ ದೇಹಕ್ಕೆ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ಕಡಿಮೆ ಮಾಡಿ ಹಣ್ಣಿನ ಜಾಮ್​ನಂತಹದನ್ನು ಬಳಸಿರಿ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಿಮ್ಮ ಆಹಾರದಿಂದ ನಿರ್ದಿಷ್ಟ ಆಹಾರಗಳನ್ನು ತೆಗೆದುಹಾಕುವುದರಿಂದ ನಿಮ್ಮ ತೂಕ ಇಳಿಸುವ ಪ್ರಯಾಣದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಹೊಸ ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು, ಆದರೆ ನೀವು ಅನುಭವಿಸುವ ಆರೋಗ್ಯ ಪ್ರಯೋಜನಗಳು ಮತ್ತು ತೂಕ ಇಳಿಸುವಿಕೆಯು ಶ್ರಮಕ್ಕೆ ಯೋಗ್ಯವಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net