ನೀವೇನಾದರೂ ಬೆಳಿಗ್ಗೆ ಬೇಗ ಏಳಬೇಕೆಂದು ತೀರ್ಮಾನ ಮಾಡಿದರೆ, ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುವುದು ಬಹಳ ಮುಖ್ಯವಾಗಿರುತ್ತದೆ. ಹಾಗೆಯೇ ಮಲಗುವ ಮುನ್ನ ಚಿಂತೆ, ಒತ್ತಡವನ್ನು ಬಿಟ್ಟುಬಿಡಬೇಕು. ಹಾಗಾಗಿ ಮಲಗುವ 30 ನಿಮಿಷಗಳ ಮುಂಚೆ ಮೊಬೈಲ್ಗಳನ್ನು ದೂರವಿಡಿ, ಶಾಂತಿಯುತವಾಗಿ ಬುಕ್ಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ನಂತರ ಕೆಲವು ನಿಮಿಷಗಳ ಕಾಲ ಧ್ಯಾನವನ್ನು ಮಾಡಿ. ಇದು ಮನಸ್ಸನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಜಾರುವಂತೆ ಮಾಡುತ್ತದೆ.